Italy: ಒನ್ ಬೆಲ್ಟ್‌ನಿಂದ ಹೊರಬಿದ್ದ ಇಟಲಿ-ಚೀನಾಕ್ಕೆ ಭಾರೀ ಆಘಾತ
Team Udayavani, Dec 6, 2023, 10:29 PM IST
ರೋಮ್: ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯಯೋಜನೆ ಒನ್ ಬೆಲ್ಟ್- ಒನ್ ರೋಡ್ ಯೋಜನೆಯಿಂದ ಇಟಲಿ ನಿರ್ಗಮಿಸಿದೆ. ಭಾರತದ ಸುತ್ತ ಆರ್ಥಿಕಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಇಟಲಿ ನಿರ್ಗಮನ ಭಾರೀ ಹೊಡೆತ ನೀಡಿದಂತಾಗಿದೆ. ಯೂರೋಪ್ ಮತ್ತು ಏಷ್ಯಾಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಚೀನಾದ ಜತೆಗೆ ಈ ಒಪ್ಪಂದಕ್ಕೆ ಕೈಜೋಡಿಸಿದ ಏಕೈಕ ಜಿ-7 ರಾಷ್ಟ್ರ ಇಟಲಿ ಮಾತ್ರವೇ ಆಗಿತ್ತು.
ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಚೀನಾದ ಮಾರುಕಟ್ಟೆಗೆ ರಫ್ತು ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆ ಒನ್ ಬೆಲ್ಟ್-ಒನ್ ರೋಡ್ ಉಪಕ್ರಮಕ್ಕೆ ಇಟಲಿ ಪಾಲುದಾರನಾಗಲು ಸಹಿ ಹಾಕಿತ್ತು. ಆದರೆ, ಈ ಉಪಕ್ರಮಕ್ಕೆ ಸೇರಿದಾಗಿನಿಂದ ಚೀನಾಗೆ ಹೋಗುತ್ತಿರುವ ಇಟಲಿಯ ರಫ್ತು ಪ್ರಮಾಣ 14.5 ಶತಕೋಟಿ ಯೂರೋಗಳಿಂದ 18.5 ಶತಕೋಟಿ ಯುರೋಗಳಿಗೆ ಏರಿಕೆಯಾದರೆ, ಚೀನಾದಿಂದ ಇಟಲಿಗೆ ಕಳುಹಿಸುತ್ತಿರುವ ರಫ್ತು ಪ್ರಮಾಣ ಮಾತ್ರ 33.5 ಶತಕೋಟಿ ಯುರೋಗಳಿಂದ 50.9 ಶತಕೋಟಿ ಯೂರೋಗಳಿಗೆ ಹೆಚ್ಚಾಗಿದೆ. ಇದರಿಂದ ಚೀನಾದೊಂದಿಗೆ ಇಟಲಿ ವ್ಯಾಪಾರ ಕೊರತೆ ಎದುರಿಸುವ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಟಲಿ ಉಪಕ್ರಮದಿಂದ ನಿರ್ಗಮಿಸುವುದಾಗಿ ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.