Jagadal; ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ

Team Udayavani, Nov 11, 2023, 6:35 PM IST

1-sdsadsa

ರಬಕವಿ-ಬನಹಟ್ಟಿ : ಸಮೀಪದ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ಯ ಶುಕ್ರವಾರ, ಶನಿವಾರ ರಾಜ್ಯಮಟ್ಟದ ಹಗಲು ರಾತ್ರಿ ಪಗಡೆ ಪಂದ್ಯಾವಳಿಗಳು ನಡೆದು ನೂರಾರೂ ಜನರನ್ನು ಆಕರ್ಷಿಸಿದವು.

ಪಂದ್ಯಾವಳಿಗೆ ಜಗದಾಳದ ಹಿರಿಯರು ಚಾಲನೆ ನೀಡಿದರು. ಇಂದಿನ ಆಧುನಿಕ ಕಾಲದಲ್ಲಿಯೂ ಮಹಾಭಾರತದ ಶಕುನಿ ಮತ್ತು ಪಾಂಡವರ ನಡುವಿನ ಆಟವನ್ನು ನೆನಪಿಸುವ ಈ ಆಟ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡಾ ಮಹತ್ವವನ್ನು ಪಡೆದಿದ್ದು, ಹಿರಿಯರೊಂದಿಗೆ ಯುವಕರು ಕೂಡಾ ಪಗಡೆಯಾಟವನ್ನು ಆಡುವುದರ ಮೂಲಕ ಆಟವನ್ನು ಮುಂದಿನ ಪೀಳಿಗೆಗೆ ಕೊಂಡುಯ್ಯೂತ್ತಿದ್ದಾರೆ.

ಸಮೀಪದ ಜಾನಪದರ ಗ್ರಾಮ ಜಗದಾಳ ಗ್ರಾಮದಲ್ಲಿ ಪ್ರತಿ ವರ್ಷ ಬ್ರಹ್ಮದೇವರ ಹಬ್ಬದ ನಿಮಿತ್ಯ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಪಗಡೆ ಸ್ಪರ್ಧೆಯನ್ನು ಏಪಡಿಸುವುದರ ಜೊತೆಗೆ ಅದರಲ್ಲಿ ಜಯಶಾಲಿಯಾದವರಿಗೆ ಭರ್ಜರಿ ಬಹುಮಾನ ಕೂಡಾ ಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ.

ಸುಮಾರು 29 ವರ್ಷಗಳಿಂದ ಪಗಡೆ ಆಟದ ಸ್ಪರ್ಧೆಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬಂದಿದ್ದು, ಅದು ಇಂದಿಗೂ ಮುಂದುವರೆದಿದೆ. ವರ್ಷದಿಂದ ವರ್ಷಕ್ಕೆ ಜನಪ್ರೀಯತೆಯನ್ನು ಪಡೆಯುತ್ತಿರುವ ಪಗಡೆ ಸ್ಪರ್ಧೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಸ್ಫರ್ಧೆಗಳು ನಡೆಯುತ್ತಿವೆ. ಇಂದು ನಡೆದ ಸ್ಪರ್ಧೆಯಲ್ಲಿ ಬಾಗಲಕೋಟ, ಬಿಜಾಪೂರ, ಗದಗ, ಬೆಳಗಾಂವ ಹಾಗೂ ಮಹಾರಾಷ್ಟ್ರದ ಸಾಂಗಲಿ, ಕೊಲ್ಲಾಪೂರ ಜಿಲ್ಲೆಗಳಿಂದ ಒಟ್ಟು 54 ತಂಡಗಳು ಆಗಮಿಸಿದ್ದವು.

ಭಾರೀ ಕೂತುಹಲ ಮೂಡಿಸಿದ್ದ ಪ್ರತಿ ಪಂದ್ಯಗಳು ನೋಡುಗರ ಕಣ್ಮಣ ಸೆಳೆದವು. ಗ್ರಾಮೀಣ ಕ್ರೀಡೆಯಾಗಿರುವ ಪಗಡೆ ಈಗಲೂ ಕೂಡಾ ಇಂತಹ ಹಳ್ಳಿಗಳಲ್ಲಿ ತನ್ನದೇ ಆದ ಅಸ್ಥಿತ್ವವನ್ನು ಉಳಿಸಿಕೊಂಡು ಹೊರಟಿದ್ದು ಅದಕ್ಕೆ ಜಗದಾಳ ಗ್ರಾಮದ ಬ್ರಹ್ಮದೇವರ ಹಬ್ಬದ ಜಾತ್ರಾ ಕಮೀಟಿ ಕೂಡಾ ಟೊಂಕಕಟ್ಟಿ ನಿಂತಿದೆ. ದೀಪಾವಳಿಯಂದು ವಿಶೇಷವಾಗಿ ಪೂಜಿಸಲ್ಪಡುವ ಬ್ರಹ್ಮದೇವರ ಹಬ್ಬವನ್ನು ಪ್ರತಿವರ್ಷ ದೇವಸ್ಥಾನದ ಮುಂದೆ ವಿಶೇಷವಾಗಿ ಬ್ರಹ್ಮದೇವರ ಜಾತ್ರಾ ಕಮಿಟಿಯ ಸದಸ್ಯರು ಆಚರಿಸುತ್ತಾ ಬಂದಿದ್ದಾರೆ. ಹಿರಿಯರಿಗೆ ಮಾತ್ರ ಸೀಮಿತವಾದ್ದ ಪಗಡೆ ಯುವಕರನ್ನು ಆಕರ್ಷಿಸುತ್ತಿರುವುದು ಪಗಡೆಯ ಉಳಿವಿಗೆ ಸಾಕ್ಷಿಯಾಗಿದೆ.

ಪ್ರಥಮ ಬಹುಮಾನ ಹಿರೋ ಎಚ್‌ಎಫ್ ಡಿಲಕ್ಸ್ ಬೈಕ್, ದ್ವಿತೀಯ ಬಹುಮಾನ 30,001 ರೂ., ತೃತೀಯ ಬಹುಮಾನ 20,001 ರೂ., ಚತುರ್ಥ ಬಹುಮಾನ 10,001 ರೂ. ಸೇರಿದಂತೆ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಿವಲಿಂಗಯ್ಯ ಹಿರೇಮಠ, ಬಸಯ್ಯ ಕಾಡದೇವರಮಠ, ಶೇಖರ ನೀಲಕಂಠ, ಹನಮಂತಗೌಡ ಪಾಟೀಲ, ಹೊನ್ನಪ್ಪ ಕುಳ್ಳೋಳ್ಳಿ, ಕಾಡಪ್ಪ ಕಬಾಡಗಿ, ಸುಬಾಸ ಉಳ್ಳಾಗಡ್ಡಿ, ಶಿವಾನಂದ ಕಚ್ಚು, ಶ್ರೀಶೈಲ ದಡ್ಡಿಮನಿ, ಮಂಜುನಾಥ ಉಳ್ಳಾಗಡ್ಡಿ, ಮಾರುತಿ ಸೊರಗಾಂವಿ, ಚೇತನ ನಂದೇಶ್ವರ, ಅಮರ ಸೋರಗಾಂವಿ ಸೇರಿದಂತೆ ಅನೇಕರು ಇದ್ದರು.

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

HC-Mahadevappa

Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ

Sathish-sail–court

Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್‌ ಸೇರಿ ನಾಲ್ವರು ಹೈಕೋರ್ಟ್‌ಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ

Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ

5-MAHE

MAHE Convocation: ನ. 8-10: ಮಾಹೆ ಘಟಿಕೋತ್ಸವ

Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ

Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.