ಕಾಂಗ್ರೆಸ್‌ನವರು ರೈತರಲ್ಲಿ ಸಂಶಯದ ಭೂತ ಬಿಟ್ಟಿದ್ದಾರೆ

Team Udayavani, Dec 26, 2020, 12:48 PM IST

ಕಾಂಗ್ರೆಸ್‌ನವರು ರೈತರಲ್ಲಿ ಸಂಶಯದ ಭೂತ ಬಿಟ್ಟಿದ್ದಾರೆ

ಹುಬ್ಬಳ್ಳಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ, ಎಪಿಎಂಸಿ ಹಾಗೂ ಅಗತ್ಯ ವಸ್ತುಗಳ ಸಂಗ್ರಹ ತಿದ್ದುಪಡಿ ಕಾಯ್ದೆಗಳು ರೈತರಿಗೆ ತುಂಬಾ ಉಪಯುಕ್ತವಾಗಿವೆ. ಆದರೆ ಕಾಂಗ್ರೆಸ್‌, ಇತರೆ ಪಕ್ಷಗಳ ಹಾಗೂ ದಲ್ಲಾಳಿಗಳ ಕುಮ್ಮಕ್ಕಿನಿಂದ ದೆಹಲಿಯಲ್ಲಿ ಬೋಗಸ್‌ ಹೋರಾಟ ನಡೆಯುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿನ ಗೋಪನಕೊಪ್ಪ ಶಿವಳ್ಳಿ ರಸ್ತೆಯ ಗವಿಸಿದ್ದೇಶ್ವರ ಕಾಲೋನಿಯಲ್ಲಿ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸುಶಾಸನ ದಿನ ಹಾಗೂ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಸ್ಮರಣೆ ನಿಮಿತ್ತ ಎಲ್‌ ಇಡಿ ಪರದೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ನೇರಪ್ರಸಾರ ಕಾರ್ಯಕ್ರಮ ವೀಕ್ಷಿಸಿ ಹಾಗೂ ರೈತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಹೊರಗಡೆ ರೈತರು ತಮ್ಮ ಬೆಳೆ ಮಾರಾಟ ಮಾಡಲು ಅವಕಾಶವಿರಬೇಕು. ಬೆಳೆಗೆ ಯೋಗ್ಯ ಬೆಲೆ ಸಿಗಬೇಕೆಂದು ಹೇಳಿತ್ತು. ಈಗ ಬಿಜೆಪಿ ಸರಕಾರ ಅದನ್ನು ಜಾರಿಗೊಳಿಸಿದರೆ ವಿರೋಧ ವ್ಯಕ್ತಪಡಿಸುತ್ತಿದೆ. ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟದಿಂದ ರೈತರಿಗೆ ತೊಂದರೆಯಾಗುತ್ತದೆ ಹೊರತು ಅವರಿಗೆ ಒಳ್ಳೆಯದಾಗಲ್ಲ. ರೈತರು ಎಪಿಎಂಸಿ ಹೊರತುಪಡಿಸಿ ತಮ್ಮ ಕೃಷಿ ಉತ್ಪನ್ನಗಳನ್ನು ತಾವು ನಿಗದಿಪಡಿಸಿದ ದರದಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು. ಇದು ರೈತರ ಹಿತಕ್ಕಾಗಿ ಆಗಿದ್ದು, ಅದನ್ನು ಸ್ವಾಗತಿಸಬೇಕು ಎಂದರು.

ಇದನ್ನೂ ಓದಿ:ವಿಜಯಪುರ: ತಾಯಿ ನಿಂದನೆ ಪ್ರಶ್ನಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ

ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ಕೇಂದ್ರ ರೈತರ ಬೆಳೆಗೆ ಯೋಗ್ಯ ದರ ಸಿಗಲು ಬೆಳೆಗೆ ಖರ್ಚು-ವೆಚ್ಚ ಹೊರತುಪಡಿಸಿ ಅದರ ಮೇಲೆ ಒಂದೂವರೆ ಪಟ್ಟು ಹೆಚ್ಚಿಗೆ ದರ ನಿಗದಿಪಡಿಸಿ ಎಂಎಸ್‌ಪಿ ಘೋಷಿಸಿದೆ. ಎಪಿಎಂಸಿ ಕಾಯ್ದೆ ಜಾರಿಯಾದರೂ ಕನಿಷ್ಠ ಬೆಂಬಲ ಬೆಲೆ ಹಿಂಪಡೆಯಲಾಗುತ್ತದೆ ಎಂಬುದು ಹಸಿ ಸುಳ್ಳು. ಕೇಂದ್ರ ಸರಕಾರ ಮತ್ತು ಕೃಷಿ ಸಚಿವರು ಎಂಎಸ್‌ಪಿ ಹಿಂದಕ್ಕೆ ಪಡೆಯಲ್ಲವೆಂದು ಲಿಖೀತ ಭರವಸೆ ನೀಡಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್‌ ಪ್ರಧಾನಿ ಮೋದಿ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ ಎಂದರು.

ಸಂಶಯದ ಭೂತ ಬಿಟ್ಟಿದ್ದಾರೆ: ನೂರಾರು ರೈತರು ಒಗ್ಗೂಡಿಕೊಂಡು ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಯನ್ನು ನಿಮ್ಮದೇ ದರ ನಿಗದಿಪಡಿಸಿ ಖರೀದಿದಾರರಿಗೆ ಸಾಮೂಹಿಕವಾಗಿ ಮಾರಲು ಗುತ್ತಿಗೆಯ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ರೈತರ ಜಮೀನು ಮಾಲ್ಕಿ ಹಕ್ಕು ಹೋಗಲ್ಲ. ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಳ್ಳೋದು ಬಿಡೋದು ರೈತರಿಗೆ ಬಿಟ್ಟ ವಿಷಯ. ಆದರೆ ಕಾಂಗ್ರೆಸ್‌ನವರು ಈ ವಿಷಯದಲ್ಲಿ ರೈತ ರಿಗೆ ಸಂಶಯದ ಭೂತ ಬಿಟ್ಟಿ ದ್ದಾರೆ ಎಂದು ಆರೋಪಿಸಿ ದರು. ಎರಡು ಗ್ರಾಮ ಸೇರಿ ಒಂದು ವಿಭಾಗಕ್ಕೆ ಯತ್ನ: ಫಸಲ್‌ ಬಿಮಾ ಯೋಜನೆಯಡಿ ನಗ ರ  ಭಾಗದ ಹಳ್ಳಿಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ ಎಂಬ ಕೂಗಿದೆ. ನಗರ ಭಾಗದಲ್ಲಿರುವ ಗ್ರಾಮಗಳದ್ದು ಒಂದೇ ಘಟಕ ಮಾಡಿದ್ದಾರೆ. ಎರಡೂ ಗ್ರಾಮಗಳನ್ನು ಸೇರಿಸಿ ಒಂದು ವಿಭಾಗ ಮಾಡಲು ಪ್ರಯತ್ನಿಸಲಾಗುವುದು. ಆಗ ನಗರ ಪ್ರದೇಶದ ರೈತರಿಗೂ ಬೆಳೆವಿಮೆ ಪರಿಹಾರ ಸಮರ್ಪಕವಾಗಿ ಸಿಗಲು ಸಾಧ್ಯ. ಆ ಪ್ರಯತ್ನ ಮುಂದುವರಿಸಿ ಆದಷ್ಟು ಬೇಗ ಪರಿಹರಿಸುವೆ ಎಂದರು.

ಟಾಪ್ ನ್ಯೂಸ್

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.