ಜಪಾನ್ 14 ದೇಶಗಳ ಪ್ರವೇಶಕ್ಕೆ ನಿರ್ಬಂಧ
Team Udayavani, Apr 29, 2020, 4:07 PM IST
ಜಪಾನ್: ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ರಷ್ಯಾ, ಪೆರು ಮತ್ತು ಸೌದಿ ಅರೇಬಿಯಾ ಸೇರಿದಂತೆ 14 ದೇಶಗಳ ಪ್ರವೇಶವನ್ನು ನಿರ್ಬಂಧಿಸಿರುವುದಾಗಿ ಜಪಾನ್ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.
ಜಪಾನ್ ಈಗಾಗಲೇ 70 ಕ್ಕೂ ಹೆಚ್ಚು ದೇಶಗಳ ಪ್ರವೇಶವನ್ನು ನಿಷೇಧಿಸಿದೆ. ವಿಶ್ವದ ಇತರೆ ಭಾಗಗಳಿಗೂ ವೀಸಾಗಳನ್ನು ಅಮಾನ್ಯಗೊಳಿಸಿದೆ. 14 ದೇಶಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿದೆ. ಹಾಗಾಗಿ ಈ ದೇಶಗಳಿಂದ ಬರಲು ಹಾಗೂ ಹೋಗಲು ಅವಕಾಶವಿಲ್ಲ ಎಂದಿದ್ದಾರೆ.
ಪ್ರವೇಶ ನಿಷೇಧ ಹಾಗೂ ವೀಸಾ ನಿರ್ಬಂಧಗಳು ಆರಂಭದಲ್ಲಿ ಏಪ್ರಿಲ್ 30ರ ವರೆಗೆ ನಿಷೇದಿಸಲಾಗಿತ್ತು. ಆದರೀಗ ಅದನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಜತೆಗೆ ಮೇ 6 ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿಯೂ ಜಾರಿಯಲ್ಲಿದೆ.
ಇದುವರೆಗೆ ದೇಶದಲ್ಲಿ 13,385 ಪಾಸಿಟಿವ್ ಪ್ರಕರಣಗಳಿದ್ದು, ಈ ವರ್ಷದ ಆರಂಭದಲ್ಲಿ ಟೋಕಿಯೋ ಬಳಿ ಸಂಪರ್ಕ ಹೊಂದಿದ್ದ ಕ್ರೂಸ್ ಹಡಗಿನ 712 ಪ್ರಕರಣಗಳಲ್ಲಿ 364 ಸಾವು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.