ಆಕ್ರಮಣಕಾರಿ ಚೀನಾ ಬಗ್ಗೆ ಜಪಾನ್ ಆತಂಕ
-ರಷ್ಯಾದೊಂದಿಗೆ ಹೆಚ್ಚಿದ ಮೈತ್ರಿ, ತೈವಾನ್ ವಿರುದ್ಧ ಆಕ್ರಮಣಕಾರಿ ನೀತಿ ಬಗ್ಗೆ ಚಿಂತೆ
Team Udayavani, Jul 28, 2023, 9:09 PM IST
ಟೋಕ್ಯೋ: ಜಗತ್ತಿನ ಪ್ರಬಲ ದೇಶವಾಗುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ ಇತ್ತೀಚೆಗೆ ರಷ್ಯಾ ಜೊತೆಗೆ ಆತ್ಮೀಯತೆಯನ್ನು ಹೆಚ್ಚಿಸಿಕೊಂಡಿದೆ. ಹಾಗೆಯೇ ತೈವಾನ್ ವಿರುದ್ಧ ವಿಪರೀತ ಆಕ್ರಮಣಕಾರಿಯಾಗುತ್ತಿದೆ. ಇದು ಜಪಾನ್‌ಗೆ ಆತಂಕ ಮೂಡಿಸಿದೆ.
ಜಾಗತಿಕ ಭದ್ರತಾ ಸವಾಲುಗಳ ನಡುವೆಯೇ, ತನ್ನ ಮಿಲಿಟರಿ ರಚನೆಯನ್ನು ಪ್ರಬಲಗೊಳಿಸಲು ಮುಂದಾಗಿರುವ ಜಪಾನ್, 2023ರ ರಕ್ಷಣಾ ಶ್ವೇತಪತ್ರವನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಭವಿಷ್ಯದಲ್ಲಿ ಚೀನಾದಿಂದ ಎದುರಾಗಬಹುದಾದ ಭದ್ರತಾ ಸವಾಲುಗಳನ್ನೂ ಪ್ರಸ್ತಾಪಿಸಲಾಗಿದೆ. 2ನೇ ಮಹಾಯುದ್ಧದ ಬಳಿಕ ಈಗ ಮತ್ತೆ ಅತ್ಯಂತ ಕ್ಲಿಷ್ಟ ಭದ್ರತಾ ಸವಾಲುಗಳನ್ನು ಜಪಾನ್ ಎದುರಿಸುತ್ತಿದೆ ಎಂಬುದಾಗಿಯೂ ಉಲ್ಲೇಖೀಸಿದೆ. ಚೀನಾದ ನಿಲುವು ಮತ್ತು ಮಿಲಿಟರಿ ಚಟುವಟಿಕೆಗಳು ಜಪಾನ್‌ಗೆ ಮಾತ್ರವಲ್ಲದೇ, ಜಾಗತಿಕ ಭದ್ರತೆ ವಿಚಾರದಲ್ಲೂ ತೀರಾ ಆತಂಕಕಾರಿ ಸಂಗತಿಯಾಗಿದೆ ಎಂದು 510 ಪುಟಗಳ ರಕ್ಷಣಾ ಶ್ವೇತಪತ್ರದಲ್ಲಿ ತಿಳಿಸಿದೆ.
ರಷ್ಯಾ ಮತ್ತು ಚೀನಾ ಸಹ ಕಾರ್ಯತಂತ್ರವನ್ನು ವಿಸ್ತರಿಸಿದ್ದು, 2019ರಿಂದ ಈಚೆಗೆ ಬಾಂಬರ್ ಯುದ್ಧವಿಮಾನಗಳ ಖರೀದಿ, ತಾಲಿಮು ನಡೆಸುತ್ತಿವೆ. 2030ರ ವೇಳೆಗೆ ಚೀನಾ ಕನಿಷ್ಠ 1,500 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಲಿದೆ. ಇದು ನೆರೆ ರಾಷ್ಟ್ರಗಳ ಭದ್ರತೆಗೂ ತೊಂದರೆ ಎಂದು ಆತಂಕ ವ್ಯಕ್ತಪಡಿಸಿದೆ. ಏತನ್ಮಧ್ಯೆ, ಚೀನಾದ ಏಕಸ್ವಾಮ್ಯ ಮನಸ್ಥಿತಿ ಬಗ್ಗೆ ಅಮೆರಿಕ ಕೂಡ ಆಕ್ಷೇಪಿಸಿ ಚೀನಾದ ವಿರುದ್ಧ ಧ್ವನಿ ಎತ್ತುವ ರಾಷ್ಟ್ರಗಳಿಗೆ ಬೆಂಬಲ ನೀಡಲಿದ್ದೇವೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.