Padubidri: ಅನುಮತಿ ಇಲ್ಲದೆ ಜಾಥಾ: ಎಸ್‌ಡಿಪಿಐ ನಾಯಕರ ವಿರುದ್ಧ ಪ್ರಕರಣ ದಾಖಲು
Team Udayavani, Dec 11, 2024, 1:17 AM IST
ಪಡುಬಿದ್ರಿ: ಉಡುಪಿ ಯಿಂದ ಹೆಜಮಾಡಿ ಟೋಲ್‌ಗೇಟ್‌ನತ್ತ ಬಂದಿದ್ದ ಎಸ್‌ಡಿಪಿಐ ನಾಯಕ ರಿಯಾಜ್ ಕಡುಂಬು ಹಾಗೂ ಮತ್ತಿತರರು ಅನುಮತಿ ಇಲ್ಲದೆ ಜಾಥಾ ನಡೆಸಿರುವ ಕಾರಣಕ್ಕೆ ಅವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಈ ಜಾಥಾವನ್ನು “ಯೂಟರ್ನ್ ರಾಜ್ಯ ಸರಕಾರದ ವಿರುದ್ಧ ಸಾಮಾ ಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 2′ ಎಂಬು ದಾಗಿ ಸಂಘಟಿಸಲಾಗಿತ್ತು.
ಈ ಕುರಿತಾದ ಅನುಮತಿಯನ್ನು ಪಡೆಯಲಾಗಿದೆಯೇ ಎಂದು ಹೆಜಮಾಡಿಗೆ ಆಗಮಿಸಿದ್ದ ಜಾಥಾದ ನಾಯಕ ರಿಯಾಜ್ ಕಡುಂಬು ಅವರಲ್ಲಿ ಠಾಣೆಯ ಪಿಎಸ್‌ಐ ಪ್ರಸನ್ನ ಪ್ರಶ್ನಿಸಿದ್ದರು. ಆಗ ಅನುಮತಿ ಪಡೆದಿಲ್ಲ ಎನ್ನುವುದನ್ನು ಎಸ್‌ಡಿಪಿಐ ನಾಯಕರು ಪೊಲೀಸರಿಗೆ ತಿಳಿಸಿದ್ದರು.
ಅನುಮತಿ ಇಲ್ಲದ ಜಾಥಾದಲ್ಲಿ ಕಾರು ಬೈಕ್‌ಗಳಲ್ಲಿನ 75 – 100 ಜನರ ಅಕ್ರಮ ಗುಂಪು ಹೆದ್ದಾರಿ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಲಿದೆ. ಇದು ಸರಿಯಲ್ಲ ಎಂದು ಪ್ರಸನ್ನ ಅವರು ವಿವರಿಸಿದ್ದರು ಎಂದು ತಿಳಿಸಲಾಗಿದೆ.
ಆದರೂ ಅದಕ್ಕೆ ಕಿವಿಗೊಡದೆ ಘೋಷಣೆ ಕೂಗುತ್ತಾ ಮೂಲ್ಕಿಯತ್ತ ಜಾಥಾವನ್ನು ಮುಂದುವರಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.