Sports: ಜಾವೆಲಿನ್ ತ್ರೋ ಭಾರತದ ಭವಿಷ್ಯ ಉಜ್ವಲ
Team Udayavani, Oct 13, 2023, 12:13 AM IST
ಅದು 2021ರ ಆಗಸ್ಟ್ 7. ಅಂದು ಭಾರತೀಯರೆಲ್ಲರ ಚಿತ್ತ ನೆಟ್ಟಿದ್ದು ಟೋಕಿಯೊ ದತ್ತ. ದೇಶವಾಸಿಗಳ ನಿರೀಕ್ಷೆ ಹುಸಿಯಾಗದಂತೆ ಒಲಿಂಪಿಕ್ಸ್ ಜಾವೆಲಿನ್ ಸ್ಪರ್ಧೆಯ ಫೈನಲ್‌ನಲ್ಲಿ ನೀರಜ್ ಚೋಪ್ರಾ 87.58 ಮೀ. ದೂರಕ್ಕೆ ಜಾವೆಲಿನ್ ಎಸೆದು ಚಿನ್ನಕ್ಕೆ ಮುತ್ತಿಟ್ಟರು. ಇದು ಒಲಿಂಪಿಕ್ಸ್‌ನಲ್ಲಿ ಭಾರತದ ಆ್ಯತ್ಲೀಟ್ ಒಬ್ಬರಿ ಗೊಲಿದ ಮೊದಲ ಪದಕ. ಅಲ್ಲಿಯವರೆಗೂ ಜಾವೆಲಿನ್ ತ್ರೋ ಸ್ಪರ್ಧೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಭಾರತೀಯರು ಚೋಪ್ರಾರ ಈ ಸಾಧನೆಯಿಂದಾಗಿ ಜಾವೆಲಿನ್‌ನತ್ತ ಕುತೂ ಹಲದ ದೃಷ್ಟಿ ಬೀರಿದರು.
ಚೋಪ್ರಾ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿಯನ್ನಷ್ಟೇ ತರಲಿಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತದ ಆ್ಯತ್ಲೀಟ್ ಒಬ್ಬ ಪದಕವನ್ನು ಜಯಿಸ ಬಹುದೆಂಬ ನಂಬಿಕೆಯ ಬೀಜವನ್ನು ದೇಶವಾಸಿ ಗಳಲ್ಲಿ ಬಿತ್ತಿದರು. ಆ ಬೀಜ ಇಂದು ಗಿಡವಾಗಿದೆ. ಜಾವೆಲಿನ್‌ನಲ್ಲಿ ಭವಿಷ್ಯವಿಲ್ಲವೆಂಬ ಭಾವನೆ ಬದ ಲಾಗಿದೆ. ಪಟ್ನಾದಲ್ಲಿ ನಡೆದ ರಾಷ್ಟ್ರೀಯ ಅಂತರ್ ಜಿಲ್ಲಾ ಆ್ಯತ್ಲೆಟಿಕ್ ಮೀಟ್‌ನಲ್ಲಿ ಜಾವೆಲಿನ್ ತ್ರೋಗೆ 1,137 ಬಾಲಕರು ಮತ್ತು 849 ಬಾಲಕಿಯರು ಹೆಸರು ನೊಂದಾಯಿಸಿದ್ದೇ ಇದಕ್ಕೆ ಸಾಕ್ಷಿ.
ಹಂಗೇರಿಯಲ್ಲಿ ನಡೆದ ವಿಶ್ವ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲೂ ನೀರಜ್ ಚೋಪ್ರಾ ಸ್ವರ್ಣ ಸಾಧನೆಗೈದು ಮತ್ತೂಂದು ಇತಿಹಾಸ ನಿರ್ಮಿಸಿದರು. ಇಲ್ಲಿ ಮೊದಲ ಆರು ಸ್ಥಾನ ಪಡೆದವರ ಯಾದಿಯಲ್ಲಿ ಭಾರತದ ಮೂವ ರಿದ್ದುದ್ದನ್ನು ಮರೆಯುವಂತಿಲ್ಲ. ಇದೊಂದು ದಾಖಲೆ. ಕಿಶೋರ್ ಜೆನ, ಡಿ.ಪಿ.ಮನು ಕ್ರಮ ವಾಗಿ 5 ಮತ್ತು 6ನೇ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದ ಚೋಪ್ರಾ, ಈ ಬಾರಿಯೂ ಚಿನ್ನ ಗೆದ್ದಿದ್ದಾರೆ. ಇಲ್ಲಿ ಬೆಳ್ಳಿ ಪದಕ ಗೆದ್ದವರೂ ಭಾರತದವರೇ ಆದ ಕಿಶೋರ್ ಜೆನ.
ದೇಶದ ಜಾವೆಲಿನ್ ಪಟುಗಳಾದ ಚೋಪ್ರಾ, ಶಿವಪಾಲ್ ಸಿಂಗ್, ಜೆನ, ಮನು, ರೋಹಿತ್, ಯಶ್‌ವೀರ್ ಸಿಂಗ್, ವಿಕ್ರಾಂತ್ ಮಲ್ಲಿಕ್, ಸಾಹಿಲ್ ಸಿಲ್ವಾನ್, ಸಚಿನ್ ಯಾದವ್ ಈಗಾಗಲೇ 80 ಮೀ. ದೂರಕ್ಕೆ ಜಾವೆಲಿನ್ ಎಸೆದಿರುವುದು ಗಮನಾರ್ಹ.
ಭಾರತದಲ್ಲಿ ಜಾವೆಲಿನ್ ಪ್ರತಿಭೆಗಳಿಗೆ ಮೊದಲಿನಿಂದಲೂ ಕೊರತೆ ಇರಲಿಲ್ಲ. ಚೋಪ್ರಾ ಸಾಧನೆ ಅವರೆಲ್ಲರನ್ನೂ ಮುನ್ನೆಲೆಗೆ ತಂದಿದೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಜಾವೆಲಿನ್ ಸ್ಪರ್ಧೆಯ ವಿಜೇತರ ಪಟ್ಟಿಯ ಮೊದಲ 3 ಸ್ಥಾನಗಳಲ್ಲಿಯೂ ಭಾರತೀಯರ ಹೆಸರೇ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.
ಜಾವೆಲಿನ್ ಇತಿಹಾಸ
ಹಿಂದಿನ ಕಾಲದಲ್ಲಿ ಬೇಟೆ ಆಡಲು ಮತ್ತು ಹೋರಾಟದಲ್ಲಿ ಬಳಕೆಯಾಗುತ್ತಿದ್ದ ಈಟಿ ಕಾಲಾನುಕ್ರಮದಲ್ಲಿ ಮಾರ್ಪಾಡುಗೊಂಡು ಜಾವೆಲಿನ್ ಕ್ರೀಡೆ ಹುಟ್ಟಿಕೊಂಡಿತು. ಇದು ಪ್ರಾಚೀನ ಗ್ರೀಸ್‌ನಲ್ಲಿ ಜನಪ್ರಿಯತೆ ಪಡೆದಿತ್ತು. 708 ಡಿ.ಸಿ.ಯಲ್ಲಿ ಪೆಂಟಾಥ್ಲಾನ್ ಭಾಗವಾಗಿ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಂಡಿತು. ಆಧುನಿಕ ಒಲಿಂಪಿಕ್ಸ್‌ನಲ್ಲಿ ಇದು ಕಾಣಿಸಿಕೊಂಡಿದ್ದು 1908ರಲ್ಲಿ ಪುರುಷರ ವಿಭಾಗ, ಮುಂದೆ 1932ರಲ್ಲಿ ವನಿತೆಯರ ವಿಭಾಗವನ್ನು ಸ್ಪರ್ಧೆಯಲ್ಲಿ ಪರಿಚಯಿಸಲಾಯಿತು. 1986ರ ಅನಂತರ ಪುರುಷರ ವಿಭಾಗದಲ್ಲಿ, 1999ರಲ್ಲಿ ವನಿತೆಯರ ವಿಭಾಗದ ಸ್ಪರ್ಧೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಯಿತು.
ಜಾವೆಲಿನ್‌ನಲ್ಲಿ ಭಾರತೀಯರು
ನೀರಜ್ ಚೋಪ್ರಾರನ್ನು ಹೊರತು ಪಡಿಸಿದಂತೆ ಜಾವೆಲಿನ್‌ನಲ್ಲಿ ಹಲವರು ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಡೋಪಿಂಗ್ ಉಲ್ಲಂಘನೆಗಾಗಿ 4 ವರ್ಷ ಅಮಾನತು ಶಿಕ್ಷೆ ಅನುಭವಿಸುತ್ತಿರುವ ಶಿವಪಾಲ್ ಸಿಂಗ್ 2019ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕಾಶಿನಾಥ್ ನಾಯ್ಕ 2010ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ವನಿತಾ ವಿಭಾಗದಲ್ಲಿ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಉತ್ತರ ಪ್ರದೇಶದ ಅನ್ನು ರಾಣಿ 2023ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊ ಡ್ಡಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದು.
6 ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಟೆಸ್ಸಾ ಸ್ಯಾಂಡರ್ಸನ್
1984ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು, ಈ ಸಾಧನೆ ಮಾಡಿದ ಮೊದಲ ಕಪ್ಪು ಬ್ರಿಟಿಷ್ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದ ಟೆಸ್ಸಾ ಸ್ಯಾಂಡರ್ಸನ್ 1976ರಿಂದ 1996ರ ವರೆಗಿನ ಎಲ್ಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮೂಲಕ ಆ್ಯತ್ಲೆಟಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಆ್ಯತ್ಲೀಟ್ ಎನಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.