Marriage: ಕೋಲ್ಕತಾ ನಿವಾಸಿಯನ್ನು ವರಿಸಲು ಭಾರತಕ್ಕೆ ಬಂದ ಜವೇರಿಯಾ !
Team Udayavani, Dec 6, 2023, 12:35 AM IST
ಚಂಡೀಗಢ: ಭಾರತ-ಪಾಕಿಸ್ಥಾನಗಳ ನಡುವಿನ ಪ್ರೇಮಪ್ರಸಂಗಗಳು ಹೆಚ್ಚುತ್ತಿವೆ. ಕೆಲವು ತಿಂಗಳ ಹಿಂದೆ ಪಾಕಿಸ್ಥಾನಿ ಸೀಮಾ ಹೈದರ್ ಭಾರತಕ್ಕೆ ಆಗಮಿಸಿ, ಸಚಿನ್ ಮೀನಾರನ್ನು ವಿವಾಹ ವಾಗಿದ್ದಾರೆ. ಅದರ ಬೆನ್ನಲ್ಲೇ ರಾಜಸ್ಥಾನದ ಅಂಜು ಎಂಬಾಕೆ ಪಾಕಿಸ್ಥಾನಕ್ಕೆ ತೆರಳಿದ್ದರು. ಇದೀಗ ಕರಾಚಿಯ ಜವೇರಿಯಾ ಖಾನುಮ್ ವಾಘಾ-ಅಟ್ಟಾರಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಮಂಗಳವಾರ ಭಾರತಕ್ಕೆ ಆಗಮಿಸಿದ್ದಾರೆ. ಅವರ ಉದ್ದೇಶ ಕೋಲ್ಕತಾದಲ್ಲಿರುವ ತಮ್ಮ ಪ್ರಿಯಕರ ಸಮೀರ್ ಖಾನ್‌ರನ್ನು ವಿವಾಹವಾಗುವುದು. ಜವೇರಿಯಾರನ್ನು ಅಮೃತಸರ ಜಿಲ್ಲೆಯ ಅಟ್ಟಾರಿಯಲ್ಲಿ ವರನ ಕಡೆಯವರು ಆತ್ಮೀಯವಾಗಿ ಬರಮಾಡಿಕೊಂಡರು. ಮುಂದಿನ ವರ್ಷ ಜನವರಿಯಲ್ಲಿ ಸಮೀರ್ ಖಾನ್‌ರೊಂದಿಗೆ ಜವೇರಿಯಾ ಮದುವೆ ನಿಶ್ಚಯವಾಗಿದೆ. “ಐದು ವರ್ಷಗಳ ಪ್ರಯತ್ನ ಫಲ ನೀಡಿದೆ. ಎರಡು ಬಾರಿ ವೀಸಾಗಾಗಿ ಪ್ರಯತ್ನಿಸಿದೆ. ಆದರೆ ಅದು ತಿರಸ್ಕಾರಗೊಂಡಿತು. ಮೂರನೇ ಬಾರಿ ನನಗೆ ವೀಸಾ ದೊರೆಯಿತು. 45 ದಿನಗಳ ವೀಸಾ ಲಭ್ಯವಾಗಿದೆ. ಮದುವೆಗಾಗಿ ಭಾರತಕ್ಕೆ ಆಗಮಿಸಿರುವುದು ಖುಷಿ ತಂದಿದೆ’ ಎಂದು ಜವೇರಿಯಾ ಹೇಳಿದ್ದಾರೆ.
“ಕಲಿಕೆ ಅನಂತರ ಜರ್ಮನಿಯಿಂದ ಭಾರತಕ್ಕೆ ಮರಳಿದೆ. 2018ರ ಮೇಯಲ್ಲಿ ನನ್ನ ತಾಯಿಯ ಮೊಬೈಲ್‌ನಲ್ಲಿ ಜವೇರಿಯಾ ಫೋಟೋ ನೋಡಿದೆ. ಆಗಲೇ ಆಕೆಯನ್ನೇ ಮದುವೆಯಾಗುವುದಾಗಿ ನಿರ್ಧರಿಸಿದೆ. ಈ ಹಿಂದೆ ಕೊರೊನಾ ಸಮಯದಲ್ಲಿ ಎರಡು ಬಾರಿ ವೀಸಾ ತಿರಸ್ಕಾರಗೊಂಡಿತು. ಇದೀಗ ವೀಸಾ ದೊರೆತಿದ್ದು, ಇದ್ದಕ್ಕಾಗಿ ಭಾರತ ಸರಕಾರಕ್ಕೆ ಧನ್ಯವಾದಗಳು’ ಎಂದು ಸಮೀರ್ ಖಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.