ಜೀವಯಾನ: ಅನುಭವದಿಂದ ಕಲಿತುಕೊಳ್ಳೋಣ
Team Udayavani, Aug 12, 2020, 12:30 PM IST
ದೇವರು ನಮಗೆ ಬದುಕನ್ನಷ್ಟೇ ಕೊಟ್ಟಿಲ್ಲ; ಅದರ ಜತೆ ಸಾಧ್ಯತೆಗಳ ವಿಶಿಷ್ಟವಾದ ಕೀಲಿ ಗೊಂಚಲನ್ನೂ ಕೊಟ್ಟಿದ್ದಾನೆ. ಅವುಗಳನ್ನು ಪ್ರಯೋಗಿಸಿ ಯಾವುದರಲ್ಲಿ ಯಾವ ಸಂಪತ್ತು ಇದೆ ಎಂದು ನೋಡಬೇಕು. ಅದೇ ನಮ್ಮ ಭವಿಷ್ಯ. ಈ ತಿಳಿವಿನ ಬೆಳಕು ನಮ್ಮೊಳಗೆ ಪ್ರಜ್ವಲಿಸಲು ಧರ್ಮ ಗ್ರಂಥಗಳು, ಸದ್ಗುರುಗಳ ಮಾರ್ಗದರ್ಶನ, ಹಿರಿಯರ ಅನುಭವದ ಮಾತುಗಳಲ್ಲಿನ ಸಾರ ಎಲ್ಲದರ ಸಹಾಯ ಖಂಡಿತ ಬೇಕು.
ಪ್ರತಿದಿನವೂ ಹೊಸದಾಗಿ ಮೂಡಣದಲ್ಲಿ ಮೂಡಿಬರುವ ನೇಸರನಂತೆ “ಜೀವಯಾನ’ವೂ ದಿನಂಪ್ರತಿಯ ಹೊಸ ಬದುಕಿಗೆ ಖುಷಿ ನೀಡುವ ವಿಚಾರಗಳೊಂದಿಗೆ ಈ ಅಂಕಣ ಮೂಡಿಬರಲಿದೆ.
ಜ್ಞಾನಿಗಳು, ವಿಜ್ಞಾನಿಗಳು, ಚಿಂತಕರು, ಸಾಧಕರ ಪ್ರೇರಣದಾಯಕ ಸಂಗತಿಗಳಲ್ಲಿ ಆಯ್ದವುಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತೇವೆ. ನಮ್ಮೆಲ್ಲರ ಸಂತಸದ ಬದುಕಿಗೆ ದೀವಿಗೆಯಾಗಲೆಂಬುದು ನಮ್ಮ ಆಶಯ. ಹೊಸೆದ ಬತ್ತಿ ಜ್ಞಾನದ ತೈಲದಲ್ಲಿ ಉರಿಯುವ ಸ್ಫೂರ್ತಿದೀಪ “ಜೀವಯಾನ’ ಇಂದಿನಿಂದ ಆರಂಭ.
ಒಮ್ಮೆ ರಾಮಕೃಷ್ಣ ಪರಮಹಂಸರ ಬಳಿಗೆ ಒಬ್ಟಾಕೆ ಹೆಂಗಸು ತನ್ನ ಮಗನೊಂದಿಗೆ ಬಂದಳು.
ಗುರುದೇವಾ, ನನ್ನ ಮಗನಿಗೆ ಸಿಹಿತಿಂಡಿ ತಿನ್ನುವುದು ಚಟದಂತೆ ಆಗಿಬಿಟ್ಟಿದೆ. ದಿನಂಪ್ರತಿ ಸಿಹಿಗಾಗಿ ನನ್ನನ್ನು ಪೀಡಿಸುತ್ತಾನೆ. ಅವನಿಗೆ ಜಿಲೇಬಿ, ಮಿಠಾಯಿ, ಹೋಳಿಗೆ ಕೊಟ್ಟು ಕೊಟ್ಟು ಸಾಕಾಗಿದೆ. ಮೇಲಾಗಿ ನಾನೇನೂ ಸ್ಥಿತಿವಂತಳಲ್ಲ. ಪ್ರತೀ ದಿನ ಇವನಿಗೆ ಸಿಹಿ ತಿಂಡಿ ಕೊಡುವುದೆಲ್ಲಿಂದ? ಅಲ್ಲದೆ ಸಿಹಿ ತಿಂದು ಅವನ ಹಲ್ಲುಗಳೂ ಹಾಳಾಗಿವೆ. ನಾನು ಹೇಳಿದರೆ ಕೇಳುತ್ತಿಲ್ಲ, ನೀವಾದರೂ ಹೇಳಿ ಎಂದಳು ಆಕೆ.
ರಾಮಕೃಷ್ಣರು ಬಾಲಕನ ಕಡೆಗೊಮ್ಮೆ, ಅವನ ತಾಯಿಯ ಕಡೆಗೊಮ್ಮೆ ನೋಡಿದರು. ಹುಡುಗನಿಗೆ ಏನೂ ಹೇಳದೆ ಎರಡು ವಾರ ಬಿಟ್ಟು ಬರುವಂತೆ ತಿಳಿಸಿದರು.
ಎರಡು ವಾರ ಕಳೆದವು. ತಾಯಿ ಮಗನೊಂದಿಗೆ ಮತ್ತೆ ಪರಮಹಂಸರ ಬಳಿ ಬಂದಳು. ಆಗ ಶ್ರೀ ರಾಮಕೃಷ್ಣ ಪರಮ ಹಂಸರು ಹುಡುಗನನ್ನು ವಾತ್ಸಲ್ಯದಿಂದ ಹತ್ತಿರ ಕುಳ್ಳಿರಿಸಿ ಕೊಂಡು ಅತಿಯಾಗಿ ಸಿಹಿ ತಿನ್ನುವುದರಿಂದ ಆಗುವ ತೊಂದರೆ, ಅಮ್ಮನಿಗೆ ಉಂಟಾಗುವ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಅವರ ಮಾತುಗಳು ಬಾಲಕನ ಹೃದಯಕ್ಕೆ ನಾಟಿದವು. ಇನ್ನು ಮುಂದೆ ದಿನವೂ ಅಮ್ಮನನ್ನು ಸಿಹಿಗಾಗಿ ಪೀಡಿಸುವುದನ್ನು ಬಿಟ್ಟುಬಿಡುತ್ತೇನೆ ಎಂದು ಒಪ್ಪಿಕೊಂಡ ಆತ. ರಾಮಕೃಷ್ಣರು ಅವನನ್ನು ಹರಸಿ, ಆಟವಾಡಲು ಹೊರಕ್ಕೆ ಕಳುಹಿಸಿದರು.
“ನೀವು ಇದನ್ನು ಮೊನ್ನೆಯೇ ಹೇಳಬಹುದಿತ್ತಲ್ಲ ಗುರುದೇವಾ’ ಎಂದು ಮಗ ಹೊರಗೆ ಹೋದ ಮೇಲೆ ಅವನಮ್ಮ ಪ್ರಶ್ನಿಸಿದಳು. ರಾಮಕೃಷ್ಣ ಪರಮಹಂಸರು ಮುಗುಳ್ನಕ್ಕು ಹೇಳಿದರು, “ದಿನವೂ ಸಿಹಿ ತಿನ್ನುವ ಅಭ್ಯಾಸ ನನಗೂ ಇತ್ತು. ಎರಡು ವಾರಗಳ ಹಿಂದೆ ನೀವು ಬಂದಾಗ ಅದೇ ನನಗೆ ಸಮಸ್ಯೆ ಯಾದದ್ದು. ನಾನೇ ಪ್ರತೀ ದಿನ ಸಿಹಿ ತಿನ್ನುವವನಾಗಿ “ನೀನು ತಿನ್ನಬಾರದು’ ಎಂದು ಅವನಿಗೆ ಉಪದೇಶಿಸುವುದು ಹೇಗೆ? ನಮ್ಮ ನಡೆಯೂ ನುಡಿಯೂ ಒಂದೇ ಆಗಿದ್ದಾಗ ಮಾತ್ರ ಮಾತಿಗೆ ಬೆಲೆ. ಆಗ ಮಾತ್ರ ಮಾತು ಪ್ರಾಮಾಣಿಕವಾಗಿರುತ್ತದೆ, ಪರಿಣಾಮ ಬೀರುತ್ತದೆ’ ಎಂದರು ಶ್ರೀ ರಾಮಕೃಷ್ಣರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.