ಇರಲಿ ಪ್ರತೀಕ್ಷಣ ಹೊಸತನಕ್ಕೆ ತೆರೆದುಕೊಳ್ಳುವ ತಹತಹ


Team Udayavani, Sep 28, 2020, 4:36 PM IST

ಇರಲಿ ಪ್ರತೀಕ್ಷಣ ಹೊಸತನಕ್ಕೆ ತೆರೆದುಕೊಳ್ಳುವ ತಹತಹ

ಬದುಕು ನಿಂತ ನೀರಾಗುವುದು ಬಹಳ ಬೇಗ. ನಮ್ಮ ಅರಿವಿಗೆ ಬಾರದಂತೆಯೇ ಅದು ಆಗಿಬಿಡುತ್ತದೆ. ನಮ್ಮೊಳಗನ್ನು ನಾವು ನಿರಂತರವಾಗಿ ಅವಲೋಕನ ಮಾಡಿಕೊಳ್ಳದೆ ಇದ್ದರೆ ಬಹಳ ಬೇಗನೆ ಕೂಪ ಮಂಡೂಕ ಗಳಾಗಿಬಿಡುತ್ತೇವೆ. ಬಾವಿಯೊಳಗಿನ ಕಪ್ಪೆ ಯಾಗುವುದು ಎಂದರೆ ಹೊಸತಾದದ್ದು, ನವೀನವಾಗಿರುವುದರ ಅರಿವು ಇಲ್ಲದೆ ಇರುವುದು. ಸದಾ ಬದಲಾಗುವ ಜಗತ್ತಿ ನೊಂದಿಗೆ ಸಾಂಗತ್ಯ ಕಳೆದುಕೊಳ್ಳುವುದು, ಹಿಂದುಳಿಯುವುದು. ಅದು ಯಾಕೆ ಆಗುತ್ತದೆ ಎಂದರೆ ನಾವಿರುವ ಬಾವಿಯೊಳಗಿಂದ ನಮಗೆ ಹೊರಗೆ ಬರಲು ಆಗುವುದಿಲ್ಲ. ಆ ಬಾವಿಯನ್ನು, ಸೀಮಿತವಾದ ಪರಿಧಿಯನ್ನು, ಗೋಡೆಗಳನ್ನು ನಾವೇ ಕಟ್ಟಿಕೊಳ್ಳು ವುದು ಇದರ ವೈಚಿತ್ರ್ಯ. ಅದರಿಂದ ಹೊರಬರಲಾಗದೆ ಸಿಕ್ಕಿಬೀಳುವುದು ಇನ್ನೂ ವಿಚಿತ್ರ.

ನಮಗೆ ನಾವೇ ತೋಡಿಕೊಂಡಿರುವ ಕೂಪದಿಂದ ಹೊರಬರುವುದು ಹೇಗೆ?
ಒಮ್ಮೆ ಸೂಫಿ ಸಂತ ಮುಲ್ಲಾ ನಾಸಿರುದ್ದೀನ್‌ ಶಿಷ್ಯನೊಬ್ಬ ಪ್ರಶ್ನಿಸಿದನಂತೆ, “ಈ ಜ್ಞಾನ ಮಾರ್ಗಕ್ಕೆ ನಿಮ್ಮನ್ನು ಕರೆತಂದದ್ದು ಯಾರು?’

“ಒಂದು ನಾಯಿ!’ ಮುಲ್ಲಾ ಹೇಳಿದರು. “ನಾನು ಆ ನಾಯಿಯನ್ನು ನೋಡುವಾಗ ಅದು ಬಾಯಾರಿ ಬಳಲಿ ಬೆಂಡಾಗಿ ಕೊಳದ ಬಳಿ ನಿಂತಿತ್ತು.’

“ಪ್ರತೀ ಬಾರಿ ಅದು ನೀರು ಕುಡಿಯಲು ಮುಂದೆ ಬಂದಾಗಲೂ ಕೊಳದ ನೀರಿನಲ್ಲಿ ಮುಳುಗಿದ್ದ ಕನ್ನಡಿ ತುಂಡಿನಲ್ಲಿ ಆ ನಾಯಿಗೆ ತನ್ನದೇ ಪ್ರತಿಬಿಂಬ ಕಾಣಿಸುತ್ತಿತ್ತು. ಇನ್ನೊಂದು ನಾಯಿ ಅಲ್ಲಿದೆ ಎಂದುಕೊಂಡು ಅದು ಹೆದರುತ್ತಿತ್ತು.’

“ಹೆದರಿಕೆ ತುಂಬಾ ಹೊತ್ತು ನಾಯಿಯನ್ನು ಆವರಿಸಿತ್ತು. ಕೊನೆಗೆ ತೃಷೆಯನ್ನು ತಡೆಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಉಂಟಾದಾಗ ನಾಯಿ ಆದದ್ದಾಗಲಿ ಎಂದು ಕೊಳಕ್ಕೆ ಜಿಗಿಯಿತು. ಹಾಗೆ ಅದು ಹಾರಿದ್ದೇ ತಡ, ನೀರು ಅಲ್ಲೋಲಕಲ್ಲೋಲವಾಗಿ ಅದುವರೆಗೆ ಅದನ್ನು ಹೆದರಿಸುತ್ತಿದ್ದ ನಾಯಿಯ ಪ್ರತಿಬಿಂಬ ಚೆಲ್ಲಾಪಿಲ್ಲಿಯಾಯಿತು.’

“ನಾನು ಇರುವುದು ಆ ನಾಯಿಯ ಸ್ಥಿತಿ ಯಲ್ಲಿ ಮತ್ತು ನನ್ನ ವಿಕಾಸಕ್ಕೆ ಅಡ್ಡಿ ನಾನೇ ಎಂಬುದು ಅರಿವಾದ ತತ್‌ಕ್ಷಣ ನನ್ನ ಜೀವನದ ದಾರಿ ಬದಲಾಯಿತು’ ಎಂದು ಮಾತು ಮುಗಿಸಿದರು ಮುಲ್ಲಾ ನಾಸಿರುದ್ದೀನ್‌.

ನಾವು ಕಟ್ಟಿಕೊಂಡಿರುವ ಚೌಕಟ್ಟಿನಿಂದ ಹೊರಬರಲು ಇರುವ ಅಡ್ಡಿ ನಾವೇ. ಹತ್ತಾರು ವರ್ಷಗಳಿಂದ ಒಂದೇ ಉದ್ಯೋಗದಲ್ಲಿ ಇರುತ್ತೇವೆ, ಹೊಸತೇನಾದರೂ ಮಾಡಲು ಹೊರಟರೆ ಸೋಲು ಉಂಟಾಗುವ ಭಯ ಕಾಡುತ್ತದೆ. ಹಾಗಾಗಿ ಅತ್ತ ಯೋಚಿಸುವುದೂ ಇಲ್ಲ. ಬಂದಿರುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಅದಕ್ಕೆ ಒಗ್ಗಿಕೊಳ್ಳಲು “ನನಗೆ ವಯಸ್ಸಾಯಿತು’ ಎಂಬ ಅಳುಕು ಅಡ್ಡಿ ಯಾಗುತ್ತದೆ. ವ್ಯವಹಾರದಲ್ಲಿ ನಷ್ಟವಾದರೆ ಬದುಕು ಮುಗಿಯಿತು ಎಂದು ಕೊಳ್ಳುತ್ತೇವೆ, ಜೀವನಕ್ಕೆ ನೂರು ದಾರಿಗಳು ತೆರೆದಿರು ವುದು ನಮಗೆ ಗೊತ್ತಿರುವುದಿಲ್ಲ.

ಬದುಕು ಚೆನ್ನಾಗಿರಲು, ಸದಾ ಲವಲವಿಕೆಯಿಂದಿರಲು ಪ್ರತೀ ಕ್ಷಣವೂ ನಮ್ಮಲ್ಲಿ ಆಗುವುದಾಗಲಿ ಎಂದುಕೊಂಡು ನೀರಿಗೆ ಜಿಗಿದ ನಾಯಿಯಂತಹ ತುರ್ತು, ಜಿಗಿ ಯುವ ಮನೋಭಾವ ಇರಬೇಕು. ಪ್ರತೀ ಕ್ಷಣವೂ ಹೊಸತನ್ನು ಎದುರು ನೋಡುವ ತಹತಹವಿರಬೇಕು. ನವೀನವಾದುದಕ್ಕೆ ತುಡಿಯುವ ಮನೋಭಾವವನ್ನು ಕಳೆದುಕೊಳ್ಳಬಾರದು.

ಎದುರು ಕಂದಕವಿದೆ ಎಂದುಕೊಳ್ಳಿ, “ನಾನು ಬೀಳುತ್ತೇನೆ’ ಎಂದುಕೊಂಡು ಹಾರುವಾತ ಬಿದ್ದೇ ಬಿಡುತ್ತಾನೆ. “ಆಚೆ ದಡ ಸೇರುತ್ತೇನೆ’ ಎಂಬ ವಿಶ್ವಾಸವನ್ನು ಹೃದಯದಲ್ಲಿ ತುಂಬಿಕೊಂಡು ದೀರ್ಘ‌ ಉಸಿರೆಳೆದು, ಎಲ್ಲ ಶಕ್ತಿಸಾಮರ್ಥ್ಯಗಳನ್ನು ಕ್ರೋಡೀಕರಿಸಿ ಹಾರುವವನು ಖಂಡಿತ ಅದನ್ನು ದಾಟುತ್ತಾನೆ.

(ಸಂಗ್ರಹ)

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.