Covid: ಜೆಎನ್.1- ಕರ್ನಾಟಕದಲ್ಲೇ ಗರಿಷ್ಠ ಕೇಸು
ದೇಶದಲ್ಲಿ 511 ಕೇಸು -ಕರ್ನಾಟಕದಲ್ಲಿ 199 ಮೊದಲ ಸ್ಥಾನದಲ್ಲಿದ್ದ ಕೇರಳ ದ್ವಿತೀಯ ಸ್ಥಾನಕ್ಕೆ
Team Udayavani, Jan 4, 2024, 12:25 AM IST
ಹೊಸದಿಲ್ಲಿ/ಬೆಂಗಳೂರು: ದೇಶದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣಗಳ ಸಂಖ್ಯೆ 511ಕ್ಕೆ ಏರಿಕೆಯಾಗಿದೆ. ಈ ಪೈಕಿ ಕರ್ನಾಟಕ ದಲ್ಲಿಯೇ 199 ಪ್ರಕರಣ ಇರುವುದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಪ್ರಕಟಿಸಿದೆ.
ಇದುವರೆಗೆ ಅತ್ಯಂತ ಹೆಚ್ಚು ಪ್ರಕರಣ ಗಳಿದ್ದ ಕೇರಳದಲ್ಲಿ ಈಗ 148 ಕೇಸು ಗಳಿದ್ದು, ಆ ರಾಜ್ಯ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಗೋವಾದಲ್ಲಿ 47, ಗುಜರಾತ್‌ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದಿಲ್ಲಿಯಲ್ಲಿ 15 ಪ್ರಕರಣಗಳು ದೃಢಪಟ್ಟಿವೆ. ದಿನವಹಿ ಪ್ರಕರಣಕ್ಕೆ ಸಂಬಂಧಿಸಿ ದೇಶದಲ್ಲಿ ಸಕ್ರಿಯ ಸೋಂಕು ಸಂಖ್ಯೆ 4,440ಕ್ಕೆ ಏರಿಕೆಯಾಗಿದ್ದು, ಐವರು ಅಸುನೀಗಿದ್ದಾರೆ. ಈ ಪೈಕಿ ಕೇರಳದಲ್ಲಿ ಇಬ್ಬರಿದ್ದಾರೆ. ಹೊಸದಾಗಿ 602 ಪ್ರಕರಣಗಳು ದೃಢಪಟ್ಟಿವೆ.
ರಾಜ್ಯದಲ್ಲಿ ಒಂದೇ ದಿನ 260 ಕೇಸು
ಕರ್ನಾಟಕದಲ್ಲಿ ಬುಧವಾರ 260 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಈ ಪೈಕಿ ಬೆಂಗಳೂರಲ್ಲೇ 134 ಕೋವಿಡ್ ಕೇಸುಗಳಿವೆ. ಕೊಪ್ಪಳದಲ್ಲಿ ಓರ್ವರು ಮೃತಪಟ್ಟಿದ್ದಾರೆ. 7,497 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಶೇ. 3.46 ಪಾಸಿಟಿವಿಟಿ ದರ ದಾಖ ಲಾಗಿದೆ. 228 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಸದ್ಯ 1,175 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಹೋಮ್ ಐಸೊಲೇಷನ್‌ನಲ್ಲಿ 1,107 ಮಂದಿ, ಆಸ್ಪತ್ರೆಯಲ್ಲಿ 68, ವೆಂಟಿಲೇಟರ್ ಸಹಿತ ಐಸಿಯುನಲ್ಲಿ ನಾಲ್ವರು ಮತ್ತು ಐಸಿಯುನಲ್ಲಿ 17 ಮಂದಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.