ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ :181 ಮಂಜೂರಾತಿ ಹುದ್ದೆಗಳಲ್ಲಿ 106 ಹುದ್ದೆ ಭರ್ತಿ


Team Udayavani, Jan 6, 2021, 11:19 AM IST

ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ :181 ಮಂಜೂರಾತಿ ಹುದ್ದೆಗಳಲ್ಲಿ 106 ಹುದ್ದೆ ಭರ್ತಿ

ಹಾವೇರಿ: ಅಗ್ನಿ ಅವಘಡದಂತಹ ತುರ್ತು ಸಂದರ್ಭದಲ್ಲಿ ಶೀಘ್ರ ನೆರವಿಗೆ ಬರಬೇಕಾದ ಅಗ್ನಿಶಾಮಕದಳ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಇದರಿಂದ ಸಕಾಲಕ್ಕೆ ಸಮರ್ಪಕ ಸೇವೆ ಒದಗಿಸಲು ಅಡಚಣೆಯಾಗುತ್ತಿದೆ.

ಜಿಲ್ಲಾ ಅಗ್ನಿಶಾಮಕ ಅಧಿ ಕಾರಿಗಳ ಕಚೇರಿಯಲ್ಲಿ ಒಟ್ಟು 181 ಮಂಜೂರಾತಿ ಹುದ್ದೆಗಳಿದ್ದು, ಇದರಲ್ಲಿ 106 ಹುದ್ದೆಗಳು
ಭರ್ತಿಯಾಗಿವೆ. ಉಳಿದ 75 ಹುದ್ದೆಗಳು ಖಾಲಿ ಇವೆ. ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ 6, ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ 13, ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ 13, ಹಿರೇಕೆರೂರು ಅಗ್ನಿಶಾಮಕ ಠಾಣೆಯಲ್ಲಿ 12, ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ 11, ಬ್ಯಾಡಗಿ ಅಗ್ನಿಶಾಮಕ ಠಾಣೆಯಲ್ಲಿ 10, ಸವಣೂರು ಅಗ್ನಿಶಾಮಕ ಠಾಣೆಯಲ್ಲಿ 10 ಹುದ್ದೆಗಳು ಖಾಲಿ ಇವೆ.

ಮೂರು ಕಡೆ ಠಾಣಾಧಿ ಕಾರಿಗಳೇ ಇಲ್ಲ:
ಹಿರೇಕೆರೂರು, ಬ್ಯಾಡಗಿ, ಸವಣೂರು ಅಗ್ನಿಶಾಮಠ ಠಾಣೆಗಳಲ್ಲಿ ಠಾಣಾ ಧಿಕಾರಿಗಳೇ ಇಲ್ಲ. ಹಾನಗಲ್ಲನಲ್ಲಿ ಸಹಾಯಕ ಠಾಣಾ ಧಿಕಾರಿಯೂ ಇಲ್ಲದ ಪರಿಸ್ಥಿತಿ ಇದೆ. ಹಾನಗಲ್ಲ, ಹಿರೇಕೆರೂರು ಹಾಗೂ ಬ್ಯಾಡಗಿ ಠಾಣೆಗಳಲ್ಲಿ ಚಾಲಕ ತಂತ್ರಜ್ಞರು ಒಬ್ಬರೂ
ಇಲ್ಲ. ಹಾನಗಲ್ಲ ಹಾಗೂ ಶಿಗ್ಗಾವಿ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರ ಕೊರತೆಯೂ ಇದೆ. ಈ ತುರ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಗ್ನಿಶಾಮಕರ ಸಂಖ್ಯೆಯೂ ಅರ್ಧಕ್ಕರ್ಧ ಖಾಲಿ ಇದೆ.

ಇದನ್ನೂ ಓದಿ:ಪಾಕ್ ಪರ ಘೋಷಣೆ ವಿಚಾರ:ಬೆಳ್ತಂಗಡಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ನೂರಾರುSDPI ಕಾರ್ಯಕರ್ತರು

ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿ ಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾ ಧಿಕಾರಿಗಳು 7, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳು 6, ಚಾಲಕ ತಂತ್ರಜ್ಞರು 6, ಪ್ರಮುಖ ಅಗ್ನಿಶಾಮಕರು 27, ಅಗ್ನಿಶಾಮಕ ಚಾಲಕರು 32, ಅಗ್ನಿಶಾಮಕರು 102 ಹೀಗೆ ಒಟ್ಟು 181 ಮಂಜೂರಾತಿ ಹುದ್ದೆಗಳಿವೆ. ಆದರೆ, ಅಗ್ನಿಶಾಮಕ ಠಾಣಾಧಿಕಾರಿಗಳ 3 ಹುದ್ದೆ, ಸಹಾಯಕ ಠಾಣಾಧಿ ಕಾರಿಗಳ ಒಂದು ಹುದ್ದೆ, ಚಾಲಕ ತಂತ್ರಜ್ಞರ 3 ಹುದ್ದೆ, ಪ್ರಮುಖ ಅಗ್ನಿಶಾಮಕರ 2 ಹುದ್ದೆ, ಅಗ್ನಿಶಾಮಕ ಚಾಲಕರ 10 ಹುದ್ದೆ ಹಾಗೂ ಅಗ್ನಿಶಾಮಕರ 56 ಹುದ್ದೆಗಳು ಖಾಲಿ ಇವೆ.

ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅ ಧಿಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾಧಿ ಕಾರಿಗಳು 4, ಸಹಾಯಕ ಠಾಣಾಧಿಕಾರಿಗಳು 5, ಚಾಲಕ ತಂತ್ರಜ್ಞರು 3, ಪ್ರಮುಖ ಅಗ್ನಿಶಾಮಕರು 25, ಅಗ್ನಿಶಾಮಕ ಚಾಲಕರು 22, ಅಗ್ನಿಶಾಮಕರು 46 ಹೀಗೆ ಒಟ್ಟು 106 ಹುದ್ದೆಗಳು ಮಾತ್ರ ಭರ್ತಿಯಾಗಿವೆ.

ಸಿಬ್ಬಂದಿ ಕೊರತೆಯ ನಡುವೆಯೂ ಅಗ್ನಿಶಾಮಕ ದಳ ಇರುವಷ್ಟು ಸಿಬ್ಬಂದಿ ಬಳಸಿಕೊಂಡು ತುರ್ತು ಸೇವೆಯಲ್ಲಿ ನಿರತವಾಗಿದೆ. ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವ ಮೂಲಕ
ಅಗ್ನಿಶಾಮಕ ದಳಕ್ಕೆ ಇನ್ನಷ್ಟು ಬಲ ತುಂಬಬೇಕಿದೆ.

ಅಗ್ನಿಶಾಮಕ ಠಾಣೆ-ಹುದ್ದೆಗಳ ವಿವರ:
ಹಾವೇರಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 25 ಮಂಜೂರಾತಿ ಹುದ್ದೆಗಳಿದ್ದು 19 ಹಾಲಿ ಹುದ್ದೆಗಳು ಭರ್ತಿಯಾಗಿವೆ. 6 ಹುದ್ದೆಗಳು ಖಾಲಿ ಇವೆ. ರಾಣೆಬೆನ್ನೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳು ಖಾಲಿ ಇವೆ. ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 13 ಹುದ್ದೆಗಳು ಖಾಲಿ ಇವೆ. ಹಿರೇಕೆರೂರು ಹಾನಗಲ್ಲ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 15 ಹಾಲಿ ಹುದ್ದೆಗಳು ಭರ್ತಿಯಾಗಿವೆ. 12 ಹುದ್ದೆಗಳು ಖಾಲಿ ಇವೆ. ಶಿಗ್ಗಾವಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 27 ಮಂಜೂರಾತಿ ಹುದ್ದೆಗಳಿದ್ದು, 16 ಹಾಲಿ ಹುದ್ದೆಗಳು ಭರ್ತಿಯಾಗಿವೆ. 11 ಹುದ್ದೆಗಳು ಖಾಲಿ ಇವೆ. ಬ್ಯಾಡಗಿ ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 24 ಮಂಜೂರಾತಿ ಹುದ್ದೆಗಳಿದ್ದು, 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು
ಖಾಲಿ ಇವೆ. ಸವಣೂರು ಅಗ್ನಿಶಾಮಕ ಠಾಣೆಯಲ್ಲಿ ಒಟ್ಟು 24 ಮಂಜೂರಾತಿ ಹುದ್ದೆಗಳಿದ್ದು 14 ಹಾಲಿ ಹುದ್ದೆಗಳು ಭರ್ತಿಯಾಗಿವೆ. 10 ಹುದ್ದೆಗಳು ಖಾಲಿ ಇವೆ.

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.