Job scam Case: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Team Udayavani, Oct 14, 2024, 7:40 AM IST

Job scam Case: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

ಉಪ್ಪಿನಂಗಡಿ: ಕಾಸರ ಗೋಡು ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಉದ್ಯೋಗ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಬಾಹು ಉಪ್ಪಿನಂಗಡಿಗೂ ವ್ಯಾಪ್ತಿಸಿದ್ದು, ಉದ್ಯೋಗ ಬಯಸಿದ ತನ್ನ ಗೆಳತಿಯಿಂದಲೇ 13,11,600 ರೂ ಪಡೆದು ವಂಚಿಸಿದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಸಚಿತಾ ರೈ ವಿರುದ್ದ ರಕ್ಷಿತಾ ಎಂಬವರು ಪೊಲೀಸರಿಗೆ ಲಿಖೀತ ದೂರು ನೀಡಿದ್ದು, ಕೇರಳದ ನೀರಾ ವರಿ ಇಲಾಖೆ ಅಥವಾ ಎಸ್‌ಬಿಐ ಬ್ಯಾಂಕಿನಲ್ಲಿ ಉದ್ಯೋಗ ಒದಗಿಸುವ ಅವಕಾಶವಿದೆ ಎಂದು ನಂಬಿಸಿ ಒಟ್ಟು 13,11,600 ರೂಪಾಯಿ ಪಡೆಯಲಾಗಿದೆ ಎಂದೂ, ಸದ್ರಿ ಹಣದ ಪೈಕಿ 8,66,868ನ್ನು ಬ್ಯಾಂಕ್‌ ಖಾತೆ ಮೂಲಕ ವರ್ಗಾಯಿಸಲಾಗಿದ್ದರೆ, ಉಳಿಕೆ ಮೊತ್ತವನ್ನು ಗೂಗಲ್‌ ಪೇ ಮೂಲಕ ಪಾವತಿಸಿರುತ್ತೇನೆಂದು ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಸಚಿತಾ ರೈ ಪ್ರಸಕ್ತ ವಿವಾಹಿತರಾಗಿ ಕಾಸರಗೋಡಿನ ಬಾಡೂರಿನಲ್ಲಿ ಶಿಕ್ಷಕಿಯಾಗಿದ್ದು, ಅಲ್ಲಿನ ಆಡಳಿತ ಪಕ್ಷದ ಪ್ರಭಾವಿ ವ್ಯಕ್ತಿಯೋರ್ವನನ್ನು ವಿವಾಹಿತಳಾಗಿ ಸರಕಾರಿ ಉದ್ಯೋಗ ಒದಗಿಸಿಕೊಡಲು ತಾನು ಸಮರ್ಥಳೆಂದು ಬಿಂಬಿಸಿ ಹಾಗೂ ನಂಬಿಸಿ ತನಗೆ ಸರಕಾರಿ ಇಲಾಖೆಯಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿ ಒಂದಷ್ಟು ಖರ್ಚು ತಗಲುತ್ತದೆ ಎಂದು ಮೊದಲನೇ ಕಂತು ಪಡೆದು, ಬಳಿಕ ವಿವಿಧ ನೆಪಗಳನ್ನು ಮುಂದಿರಿಸಿ ಒಟ್ಟು 13 ಲಕ್ಷಕ್ಕೂ ಮಿಕ್ಕಿದ ಹಣವನ್ನು ಪಡೆದಿರುತ್ತಾಳೆಂದು ತಿಳಿಸಿರುತ್ತಾರೆ.

ನಿವೃತ್ತಿ ಜೀವನದ ನೆಮ್ಮದಿ ಕಸಿಯಿತು
ರಕ್ಷಿತಾರ ತಂದೆ ನಿಗಮವೊಂದರ ಉದ್ಯೋಗಿಯಾಗಿದ್ದು , ಇತ್ತೀಚೆಗೆ ನಿವೃತಿಯಾಗಿರುತ್ತಾರೆ. ನಿವೃತ್ತಿ ವೇಳೆ ದೊರಕಿದ ಹಣದಲ್ಲಿ ಮಗಳ ಭವಿಷ್ಯ ಉಜ್ವಲವಾಗಲಿ ಎಂದು ಮೊದಲ ಕಂತು ನೀಡಿದ್ದರು. ಬಳಿಕ ನಂಬಿಕೆ ಮೂಡಿಸುವಂತೆ ಮತ್ತೆ ಮತ್ತೆ ಹಣ ಕೇಳಿದಾಗ , ಮೊದಲು ಕೊಟ್ಟ ಹಣದ ಸುರಕ್ಷೆ ನೆಲೆಯಲ್ಲಿ ಮತ್ತೆ ಮತ್ತೆ ಹಣವನ್ನು ಪಾವತಿಸುತ್ತಾ ಹೋದ ಅವರು ಈಗ ವಂಚನಾ ಜಾಲ ಬಹಿರಂಗಗೊಂಡ ಬಳಿಕ ಆಘಾತಕ್ಕೆ ಒಳಗಾಗಿದ್ದು, ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದಾರೆ.

ಟಾಪ್ ನ್ಯೂಸ್

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

Drone Strike: ಇಸ್ರೇಲ್ ಸೇನಾ ನೆಲೆ ಮೇಲೆ ಡ್ರೋನ್ ದಾಳಿ: 4 ಯೋಧರು ಮೃತ್ಯು, 60 ಮಂದಿಗೆ ಗಾಯ

Drone Strike: ಇಸ್ರೇಲ್ ಸೇನಾ ನೆಲೆ ಮೇಲೆ ಡ್ರೋನ್ ದಾಳಿ: 4 ಯೋಧರು ಮೃತ್ಯು, 60 ಮಂದಿಗೆ ಗಾಯ

01

BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

kollur12

Holiday Trip: ಹಬ್ಬ, ವಾರಾಂತ್ಯ ರಜೆ: ಪ್ರವಾಸಿ ತಾಣಗಳಲ್ಲಿ ದಟ್ಟಣೆ

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

Special Train: ಮಂಗಳೂರು ಜಂಕ್ಷನ್‌- ಕೊಚ್ಚುವೇಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು

CM-siddu

Tax Injustice: 5 ವರ್ಷದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ಅನ್ಯಾಯ: ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nidle: ಕಾಡುಕೋಣ ಹತ್ಯೆ; ಶಂಕಿತ ಆರೋಪಿಗಳು ಪರಾರಿ

Nidle: ಕಾಡುಕೋಣ ಹತ್ಯೆ; ಶಂಕಿತ ಆರೋಪಿಗಳು ಪರಾರಿ

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Belthangady: ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

Belthangady: ಭಾರೀ ಮಳೆ; ವಾಹನ ಸಂಚಾರ ಅಸ್ತವ್ಯಸ್ತ

Belthangady: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Belthangady: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

Drone Strike: ಇಸ್ರೇಲ್ ಸೇನಾ ನೆಲೆ ಮೇಲೆ ಡ್ರೋನ್ ದಾಳಿ: 4 ಯೋಧರು ಮೃತ್ಯು, 60 ಮಂದಿಗೆ ಗಾಯ

Drone Strike: ಇಸ್ರೇಲ್ ಸೇನಾ ನೆಲೆ ಮೇಲೆ ಡ್ರೋನ್ ದಾಳಿ: 4 ಯೋಧರು ಮೃತ್ಯು, 60 ಮಂದಿಗೆ ಗಾಯ

01

BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

kollur12

Holiday Trip: ಹಬ್ಬ, ವಾರಾಂತ್ಯ ರಜೆ: ಪ್ರವಾಸಿ ತಾಣಗಳಲ್ಲಿ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.