ಅರವಿಂದ್ ಕೇಜ್ರಿವಾಲ್ ಸರ್ವಾಧಿಕಾರಿ, ಕಪಟ ಕ್ರಾಂತಿಕಾರಿ: ಸುಖ್ ಪಾಲ್ ಸಿಂಗ್ ಖೈರಾ ಕಿಡಿ
ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
Team Udayavani, Jun 4, 2021, 8:24 AM IST
ನವದೆಹಲಿ:ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರೊಬ್ಬ ಹುಸಿ ಕ್ರಾಂತಿಕಾರಿ ಎಂದು ಗುರುವಾರ(ಜೂನ್ 03) ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಪಂಜಾಬ್ ಶಾಸಕ ಸುಖ್ ಪಾಲ್ ಸಿಂಗ್ ಖೈರಾ ತಿಳಿಸಿದ್ದು, ಕೇಜ್ರಿವಾಲ್ ಸರ್ವಾಧಿಕಾರಿ ಹಾಗೂ ಆರ್ ಎಸ್ ಎಸ್-ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಿದ್ದಾರೆ.
2015ರಲ್ಲಿ ತಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ರಾಜಕೀಯ ಪ್ರಮಾದ ಎಂದು ಖೈರಾ ಹೇಳಿದ್ದಾರೆ. ಭಾರತದ ರಾಜಕೀಯ ಸಂಸ್ಕೃತಿಯಲ್ಲಿ ಕೇಜ್ರಿವಾಲ್ ಪ್ರಾಮಾಣಿಕವಾಗಿ ಗುಣಮಟ್ಟದ ಬದಲಾವಣೆ ತರಲಿದ್ದಾರೆ ಎಂಬ ಭಾವನೆ ನನ್ನದಾಗಿತ್ತು. ಆದರೆ ಕೇಜ್ರಿವಾಲ್ ಜತೆ ಕೆಲಸ ಮಾಡಿದ ನಂತರ ಆಪ್ ವರಿಷ್ಠ ಎರಡು ಮುಖ ಹೊಂದಿರುವ ಕಪಟ ನಾಯಕ ಎಂಬ ಸತ್ಯ ಅರಿವಾಗಿದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರವನ್ನು ನಾಶ ಮಾಡುವಲ್ಲಿ ಕೇಜ್ರಿವಾಲ್ ಬಿಜೆಪಿಯನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ ಕೇಜ್ರಿವಾಲ್ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೊಬ್ಬ ಅಲ್ಪಸಂಖ್ಯಾತ ವಿರೋಧಿ ಧೋರಣೆಯ ನಾಯಕರಾಗಿದ್ದಾರೆ. ಅದಕ್ಕಾಗಿಯೇ ಸಿಎಎ ಮತ್ತು ಯುಎಪಿಎ ಕಾಯ್ದೆಯನ್ನು ಕೇಜ್ರಿವಾಲ್ ಬೆಂಬಲಿಸಿದ್ದಾರೆ ಎಂದು ಸುಖ್ ಪಾಲ್ ಸಿಂಗ್ ಆರೋಪಿಸಿದ್ದಾರೆ.
ಭೋಲಾಥ್ ವಿಧಾನಸಭಾ ಕ್ಷೇತ್ರದ ಶಾಸಕ ಸುಖ್ ಪಾಲ್ ಸಿಂಗ್ ಮತ್ತು ಆಪ್ ಶಾಸಕ ಜಗದೇವ್ ಸಿಂಗ್, ಪಿರ್ಮಾಲ್ ಸಿಂಗ್ ಗುರುವಾರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.