ಜೋರ್ಡಾನ್‌ನಲ್ಲೂ ಲಾಕ್‌ಡೌನ್ ಸಡಿಲಿಕೆ
Team Udayavani, Jun 7, 2020, 12:38 PM IST
ಅಮ್ಮಾನ್: ಜಗತ್ತಿನೆಲ್ಲೆಡೆ ಕೋವಿಡ್ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಅತ್ತ ಮಧ್ಯಪ್ರಾಚ್ಯದ ಪ್ರಮುಖ ದೇಶ, ಅತಿ ಪ್ರಾಚೀನ ನಗರಿಗಳನ್ನು ಹೊಂದಿದ ಜೋರ್ಡಾನ್‌ನಲ್ಲೂ ಲಾಕ್‌ಡೌನ್ ಸಡಿಲಿಕೆಯಾಗಿದೆ. ಇದರೊಂದಿಗೆ ಆ ದೇಶ ಮತ್ತೆ ಕೋವಿಡ್ ಹರಡದಂತೆ ಎಚ್ಚರಿಕೆಯ ಹೆಜ್ಜೆಗಳನ್ನೂ ಇಟ್ಟಿದೆ.
ಶನಿವಾರದಿಂದ ಇಲ್ಲಿ ವ್ಯಾಪಾರ-ವಹಿವಾಟು ಆರಂಭವಾಗಿದ್ದು, ಕೆಫೆ, ರೆಸ್ಟೋರೆಂಟ್‌ಗಳು ತೆರೆದುಕೊಂಡಿವೆ. ನಗರಗಳ ಮಧ್ಯೆ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ನಗರದಲ್ಲಿರುವ ಜನರು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ತಮ್ಮ ವಾಹನಗಳನ್ನು ಉಪಯೋಗಿಸುವುದಕ್ಕೆ ಅವಕಾಶವಿದೆ. ಇದಕ್ಕೆ ಯಾವುದೇ ವಿಶೇಷ ಪರವಾನಿಗೆ ಬೇಡ. ಜತೆಗೆ ದೇಶೀಯ ವಿಮಾನ ಯಾನಕ್ಕೂ ಅವಕಾಶ ಕಲ್ಪಿಸಲಾಗಿದೆ.
ದೇಶದ ವಿವಿಧ ಮಸೀದಿ, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಂ.ರಾ. ವಿಮಾನಗಳಿಗೆ ನಿರ್ಬಂಧ, ಪ್ರಯಾಣ ನಿರ್ಬಂಧ ಮುಂದುವರಿದಿದಿದೆ.
ಅಂಗನವಾಡಿ, ಶಾಲಾ ಕಾಲೇಜುಗಳು, ಪಾರ್ಕ್‌ಗಳು, ಥಿಯೇಟರ್‌ಗಳು, ಹಬ್ಬ ಆಚರಣೆಗೆ ನಿಷೇಧ ಮುಂದುವರಿದಿದೆ.
ಹಾಗೆ ನೋಡಿದರೆ ಜೋರ್ಡಾನ್‌ನಲ್ಲಿ ಕೋವಿಡ್ ಅಟ್ಟಹಾಸ ಅಷ್ಟೊಂದು ಇರಲಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಅಲ್ಲಿ ಲಾಕ್‌ಡೌನ್ ಮತ್ತು ಇತರ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಒಟ್ಟು 784 ಪ್ರಕರಣಗಳು ಅಲ್ಲಿ ವರದಿಯಾಗಿದ್ದು, 571 ಮಂದಿ ಚೇತರಿಸಿ ಕೊಂಡಿದ್ದರು. ಮಾ.17ರ ಬಳಿಕ ಹಂತಹಂತವಾಗಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಆದರೂ ಅಲ್ಲಿ ಮಿಲಿಟರಿ ತುರ್ತುಪರಿಸ್ಥಿತಿ ಕಾನೂನುಗಳ ಜಾರಿ ಆಜ್ಞೆಯನ್ನು ಹಿಂಪಡೆದಿಲ್ಲ.
ಆರ್ಥಿಕತೆ ಹಿಂಜರಿತದ ಭೀತಿ
ಕೋವಿಡ್ ಅಷ್ಟೊಂದು ತಲ್ಲಣ ಮೂಡಿಸದಿದ್ದರೂ ಮಾರುಕಟ್ಟೆ ಗಳು ಬಂದ್ ಆದ್ದರಿಂದ ಅಲ್ಲಿ ಆರ್ಥಿಕತೆ ಮೇಲೆ ಕರಿಛಾಯೆ ಬಡಿಸಿದೆ. ಇದನ್ನು ಸರಿಪಡಿಸಲು ಇಲ್ಲಿನ ಆಡಳಿತ ಹೆಣಗಾಡುತ್ತಿದೆ.
ಮಾಜಿ ಉಪ ಪ್ರಧಾನಿ ಜವಾದ್ ಅನಾಮಿ ಅವರು, ಸರಕಾರದ ದುರ್ಬಲ ಆರ್ಥಿಕ ನೀತಿಗಳನ್ನು ಇಂತಹ ಸೋಂಕುಗಳು ಬಯಲು ಮಾಡಿವೆ. ಈ ವರ್ಷ ಜೋರ್ಡಾನ್‌ನ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.3-4ರಷ್ಟು ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.