ಭಿಕ್ಷಾಟನೆ ಜೊತೆಗೆ ದುಷ್ಟಟಗಳಿಗೆ ಒಳಗಾಗಿದ್ದ 15 ಮಂದಿಯನ್ನು ರಕ್ಷಿಸಿದ ನ್ಯಾಯಾಧೀಶರು
Team Udayavani, Oct 27, 2021, 8:20 PM IST
ಕುಣಿಗಲ್ : ಪಟ್ಟಣದ ವಿವಿದೆಡೆ ಭಿಕ್ಷಾಟನೆ ಮಾಡುತ್ತಾ, ಮಾದಕ ದ್ರವ್ಯದ ದುಷ್ಟಟಗಳಿಗೆ ಒಳಗಾಗಿದ್ದ 15 ಮಂದಿ ಭಿಕ್ಷಕರನ್ನು ನ್ಯಾಯಾಧೀಶರು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ ಅಪರೂಪದ ಪ್ರಸಂಗ ಬುಧವಾರ ಪಟ್ಟಣದಲ್ಲಿ ನಡೆಯಿತು,
ಪಟ್ಟಣದ ವಿವಿಧ ಬಡಾವಣೆ ಹಾಗೂ ರಸ್ತೆಗಳಲ್ಲಿ ಹಲವು ದಿನಗಳಿಂದ ಭಿಕ್ಷಕರು ಭಿಕ್ಷಾಟನೆ ಮಾಡುತ್ತಾ, ಮಾದಕ ಸೇವನೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ನಾಗರೀಕರು ತಾಲೂಕು ಕಾನೂನು ಸೇವಾ ಸಮಿತಿಗೆ ಮೌಖಿಕ ದೂರಿನ ಹಿನ್ನಲೆಯಲ್ಲಿ ಕುಣಿಗಲ್ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ರಾಘವೇಂದ್ರ, ಪ್ರಧಾನ ಸಿವಿಲ್ ನ್ಯಾಯಧೀಶೆ ಓ.ಎ.ಅನಿತಾ, ಅಪಾರ ಸಿವಿಲ್ ನ್ಯಾಯಾಧೀಶ ಲಕ್ಷ್ಮೀ ನರಸಿಂಹ ಅವರು ಕಾನೂನು ಸೇವಾ ಸಮಿತಿಯ ದುರ್ಬಲರ ರಕ್ಷೆ ಕಾನೂನಿನ ಪ್ರಥಮ ದೀಕ್ಷೆ ಅಡಿಯಲ್ಲಿ ಕಾರ್ಯಚರಣೆ ನಡೆಸಿ ಪಟ್ಟಣದ ಮಲ್ಲಾಘಟ್ಟ, ಮದ್ದೂರು ರಸ್ತೆ, ಖಾಸಗಿ ಬಸ್ ನಿಲ್ದಾಣದ ಬಳಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ಮಕ್ಕಳು ಹಾಗೂ ಮೂರು ಮಂದಿ ಅಪ್ರಾಪ್ತರು ಸೇರಿದಂತೆ ೧೫ ಮಂದಿಯನ್ನು ರಕ್ಷಿಸಿ ಬಳಿಕ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನುಷಾ, ಸಮಾಜ ಕಲ್ಯಾಣ ಉಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದರು,
ಅಧಿಕಾರಿಗಳು ಹನುಮಂತ (23), ಗಂಗಾ (7), ಕಾಳಮ್ಮ (1), ಮಂಜಮ್ಮ (35), ನಾಗಮ್ಮ (35), ರಾಧಮ್ಮ (25) ಐಶ್ವರ್ಯ (14) ರಾಧ (14) ಲಕ್ಷ್ಮೀ (25), ಗಂಗಾ (18), ಮಿಥಲಿ (15) ಚಿಕ್ಕಣ್ಣ (17), ರವಿ (15), ರಮೇಶ್ (19), ಗಂಗಪ್ಪ (50) ಅವರನ್ನು ತುಮಕೂರು ಬಾಲಕ ಹಾಗೂ ಬಾಲಕಿಯರ ಬಾಲ ಮಂದಿರ ಮತ್ತು ಸ್ವಾಧಾರ ಗೃಹ, ನಿರಾಶ್ರಿತ ಕೇಂದ್ರಕ್ಕೆ ಕಳಿಸಿಕೊಟ್ಟರು,
ಇದನ್ನೂ ಓದಿ : ಆಟೋರಿಕ್ಷಾ ಚಾಲಕನೊಂದಿಗೆ ಪರಾರಿಯಾದ ಕೋಟ್ಯಧಿಪತಿಯ ಪತ್ನಿ!
ಭಿಕ್ಷಾಟನೆ ಅಪರಾಧ : ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ರಾಘವೇಂದ್ರ ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಬಗ್ಗೆ ಅರಿವು ಮೂಡಿಸಿ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಕಾನೂನಿನು ಅರಿವು ಅಗತ್ಯವಿದೆ, ಬಡತನದಿಂದಾಗಿ ಅಮಿಷಗಳಿಗೆ ಒಳಗಾಗಿ ತಂದೆ, ತಾಯಿ ಪೋಷಕರೇ ಮಕ್ಕಳನ್ನು ಭಿಕ್ಷಾಟನೆ ಮಾದಕ ದ್ರವ್ಯಗಳ ಬಳಸಿಕೊಳ್ಳುವ ಮೂಲಕ ಅವರ ಭವಿಷ್ಯವನ್ನು ಬಲಿ ಕೊಡುತ್ತಿದ್ದಾರೆ, ಇದು ಅಪರಾಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶರು ತಮ್ಮ ಸುತ್ತಾ ಮುತ್ತಾಲು ಇಂತಹ ಪ್ರಕರಣಗಳು ಜೀತ, ಪದ್ದತಿ, ಶಿಕ್ಷಣದಿಂದ ವಂಚಿಸಿ ದುಡಿಮೆಗೆ ಹಾಕಿರುವುದು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಬೇಕೆಂದು ನಾಗರೀಕರಿಗೆ ತಿಳಿಸಿದರು.
ಕಾರ್ಯಚಣೆಯಲ್ಲಿ ಎಪಿಪಿ ಶೋಭ, ವಕೀಲರ ಸಂಘದ ಅಧ್ಯಕ್ಷರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.