Law: ನ್ಯಾಯಾಂಗದ ಮೂಲಕ ವಿಚ್ಛೇದನ, ಸಹ ಜೀವನ ನೋಂದಣಿ ಕಡ್ಡಾಯ?
ಉತ್ತರಾಖಂಡ ಸಮಾನ ನಾಗರಿಕ ಸಂಹಿತೆ ಮಸೂದೆ ಅಂಶ ಬಹಿರಂಗ
Team Udayavani, Jan 28, 2024, 1:03 AM IST
ಹೊಸದಿಲ್ಲಿ: ನ್ಯಾಯಾಂಗ ಪ್ರಕ್ರಿಯೆ ಮೂಲಕವೇ ವಿಚ್ಛೇದನಕ್ಕೆ ಅವಕಾಶ, ಪೂರ್ವ ಷರತ್ತಿನೊಂದಿಗೆ ಮರುವಿವಾಹಕ್ಕೆ ನಿರ್ಬಂಧ, ಸಹ ಜೀವನ (ಲಿವ್ ಇನ್ ರಿಲೇಶನ್‌ಶಿಪ್) ನೋಂದಣಿ ಕಡ್ಡಾಯ…
ಉತ್ತರಾಖಂಡ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯಲ್ಲಿ ಇರುವ ಅಂಶಗಳಿವು. ಇದರ ಜತೆಗೆ, ಎಲ್ಲ ಧರ್ಮಗಳಲ್ಲೂ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕಲ್ಪಿಸುವ ಅಂಶವೂ ಇದರಲ್ಲಿದೆ ಎಂದು ಮೂಲಗಳು ತಿಳಿಸಿವೆ. ಫೆ.5ರಂದು ಉತ್ತರಾಖಂಡ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಈ ವೇಳೆ, ಮಸೂದೆ ಮಂಡಿಸಿ ಅಂಗೀಕರಿಸಲಾಗುತ್ತದೆ.
ಹೆಣ್ಣುಮಕ್ಕಳ ವಿವಾಹದ ವಯೋಮಾನವನ್ನು ಈಗಿರುವ 18ರಿಂದ 21ಕ್ಕೇರಿಸುವ ಪ್ರಸ್ತಾವವನ್ನು ಸಂಹಿತೆಯಲ್ಲಿ ಸೇರಿಸಲಾಗಿಲ್ಲ. “ಎರಡು ಮಕ್ಕಳ ನೀತಿ’ ಕುರಿತ ವಿಚಾರವೂ ಯುಸಿಸಿಯಲ್ಲಿ ಇಲ್ಲ. ಮದುವೆಯಿಂದ ಹಿಡಿದು ಸಹ ಜೀವನದವರೆಗೆ ಮಹಿಳೆಯರಿಗೆ ಎಲ್ಲ ಹಂತಗಳಲ್ಲೂ ಸಮಾನ ಹಕ್ಕುಗಳು ದೊರೆಯಬೇಕು ಮತ್ತು ದೌರ್ಜನ್ಯ, ಬ್ಲ್ಯಾಕ್‌ವೆುಲ್. ಅಪರಾಧ, ಅನ್ಯಾಯದಿಂದ ಆಕೆಯನ್ನು ರಕ್ಷಿಸಬೇಕು ಎಂಬ ಉದ್ದೇಶವನ್ನು ಯುಸಿಸಿ ಹೊಂದಿದೆ. ಇದೇ ಕಾರಣಕ್ಕೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ವಿಚ್ಛೇದನ ಮತ್ತು ಲಿವ್ ಇನ್ ಸಂಬಂಧದ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾನೂನು ಮೂಲಕವೇ ವಿಚ್ಛೇದನ ಕಡ್ಡಾಯವಾಗುವ ಕಾರಣ, ಯುಸಿಸಿ ಜಾರಿಗೆ ಬಂದ ಬಳಿಕ ಇಸ್ಲಾಂ ಧರ್ಮದಲ್ಲಿರುವ ಇದ್ದತ್(ಪತ್ನಿಯು ತನ್ನ ಪತಿಯ ಮರಣಾನಂತರ ಅಥವಾ ವಿಚ್ಛೇದನದ ಅನಂತರ ಮರುಮದುವೆಯಾಗುವವರೆಗೆ ಕಾಯಬೇಕಾದ ನಿರ್ದಿಷ್ಟ ಅವಧಿ) ಮತ್ತು ಖುಲಾ(ಪತ್ನಿಯೇ ಪತಿಗೆ ವಿಚ್ಛೇದನ ನೀಡುವ ಕ್ರಮ) ಪದ್ಧತಿ ನಿಷೇಧಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
MUST WATCH
ಹೊಸ ಸೇರ್ಪಡೆ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.