![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 1, 2022, 6:03 PM IST
ಕೋಲಾರ: ಬೆಂಗಳೂರಿಗೆ ಸಮೀಪವಿರುವ ಕೋಲಾರದ ಶತಶೃಂಗ ಬೆಟ್ಟವೆಂದು ಕರೆಯಲ್ಪಡುವ ಅಂತರ ಗಂಗೆ ಬೆಟ್ಟವನ್ನು ಹೇಗಾದರೂ ಮಾಡಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂಬ ಪಣತೊಟ್ಟಿರುವ ಎಸ್‌ಪಿ ದೇವರಾಜ್ ಅವರು, ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಎಂಡಿ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನ ಜೊತೆಗೆ ಕರೆದುಕೊಂಡು ಬೆಟ್ಟ ಹತ್ತಿಸಿ ಪ್ರಕೃತಿ ಸ್ವರ್ಗದಂತಿರುವ ಸ್ಥಳಗಳನ್ನು ತೋರಿಸಿದರು.
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಅಂತರಗಂಗೆ ಬೆಟ್ಟಕ್ಕೆ ಬೆಳ್ಳಂಬೆಳಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೆ ಕೆಲವು ಅಧಿಕಾರಿಗಳು ಟ್ರಕ್ಕಿಂಗ್‌ಗೆ ಬಂದಿದ್ದರು. ಇನ್ನು ಕೆಲವರು ಬೆಟ್ಟದ ಮೇಲೆ ಸಿಗುವ ಹಣ್ಣು ಕಾಯಿ ತಿನ್ನುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದರು.
ಬಹಳ ವರ್ಷದಿಂದ ನನೆಗುದಿಗೆ: ಕೋಲಾರದ ಶತಶೃಂಗ ಬೆಟ್ಟವೆಂದು ಕರೆಯುವ ಅಂತರಗಂಗೆ ಬೆಟ್ಟ ಪ್ರವಾಸಿ ತಾಣವಾಗದೆ, ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅಂತರಗಂಗೆ ಬೆಟ್ಟದಲ್ಲಿ ಇತ್ತೀಚಿಗೆ ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ಸುಮಾರು 20 ಸಾವಿರ ಮಂದಿ ಭಾಗಿಯಾಗಿ ವಿಶ್ವ ಯೋಗ ದಿನಾಚರಣೆ ಆಚರಿಸಿದ ಬೆನ್ನಲ್ಲೇ ಈಗ ಜಿಲ್ಲೆಯವರೇ ಆದ ಎಸ್‌ಪಿ ಡಿ. ದೇವರಾಜ್ ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಎಂಡಿ ಮನೋಜ್ ಕುಮಾರ್ ರೆಡ್ಡಿ, ಅರಣ್ಯ ಇಲಾಖೆ ಸಿಸಿಎಫ್ ಲಿಂಗಾರಾಜು, ಡಿಎಫ್‌ಒ ಶಿವಶಂಕರ್ ಸೇರಿದಂತೆ ಇತರೆ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದರು.
ಬೆಳ್ಳಂಬೆಳಗ್ಗೆ ಅಂತರಗಂಗೆ ಬೆಟ್ಟವನ್ನು ಟ್ರೆಕ್ಕಿಂಗ್ ಮಾಡಿಸಿ, ಬೆಟ್ಟದಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯ ದರ್ಶಿಸಿ, ಬಸವನ ಬಾಯಲ್ಲಿ ನೀರು ಬರುವುದು, ಬೆಟ್ಟದಿಂದ ನೀರು ಹರಿದು ಧುಮುಕುವ ಫಾಲ್ಸ್, ಗುಹೆ, ಕೋಟೆ, ಬಾವಿ, ಔಷಧ ಗಿಡ ಮರಗಳು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
ಸುಂದರವಾದ ಸ್ಥಳಗಳು: ಬೆಂಗಳೂರಿಗೆ ಬಹಳ ಹತ್ತಿರವಾದ ಅಂತರಗಂಗೆ ಬೆಟ್ಟದಲ್ಲಿ ಸುಂದರವಾದ ಸ್ಥಳಗಳು ಇವೆ. ಪರಿಸರ ಜೊತೆ ಬೆರೆಯುವುದಕ್ಕೆ ಜಂಗಲ್ ಲಾಡ್ಜ್ ಕಡೆಯಿಂದ ಏನಾದರೂ ಅಭಿವೃದ್ಧಿ ಮಾಡಬೇಕು ಎಂದು ಎಂಡಿ ಮನೋಜ್ ಕುಮಾರ್ ರೆಡ್ಡಿ ಅವರಲ್ಲಿ ಮನವಿ ಮಾಡಿದರು.
ಜಂಗಲ್ ಲಾಡ್ಜ್$ ಅಂಡ್ ರೆಸಾರ್ಟ್ಸ್ನ ಎಂಡಿ ಮನೋಜ್ ಕುಮಾರ್ ಮಾತನಾಡಿ, ಅಂತರಗಂಗೆ ಬೆಟ್ಟ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಬೆಂಗಳೂರಿನ ಯುವಕ, ಯುವತಿಯರು ಟ್ರಕ್ಕಿಂಗ್‌ಗೆ ಇಂತಹ ಜಾಗಗಳಿಗೆ ಬರುತ್ತಾರೆ. ಇನ್ನು ಅವರಿಗೆ ಮಾತ್ರವಲ್ಲದೆ ಜನಸಾಮಾನ್ಯರು ಬಂದು ಈ ಪರಿಸರ ವಾತಾವರಣದಲ್ಲಿ ಸಂತಸಪಟ್ಟು ಹೋಗುವ ದೃಷ್ಟಿ ಇಟ್ಟುಕೊಂಡು ಮೊದಲು ಜಂಗಲ್ ಕ್ಯಾಂಪ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಂತರಗಂಗೆ ಬೆಟ್ಟ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗ. ಯುವತಿಯರು ಟ್ರಕ್ಕಿಂಗ್‌ಗೆ ಬರುತ್ತಾರೆ. ಅಲ್ಲದೆ, ಸಾಮಾನ್ಯರು ಈ ಪರಿಸರ ವಾತಾವರಣದಲ್ಲಿ ಸಂತಸಪಟ್ಟು ಹೋಗುವ ದೃಷ್ಟಿಯಿಂದ ಜಂಗಲ್ ಕ್ಯಾಂಪ್ ಮಾಡುತ್ತೇವೆ.
●ಮನೋಜ್ ಕುಮಾರ್,
ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ಎಂಡಿ
Kolar: ಬಾಲಕಿ ಮೇಲೆ ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ
BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು
Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.