ನೇಣು ಬಿಗಿದ ಸ್ಥಿತಿಯಲ್ಲಿ ಎಳನೀರು ವ್ಯಾಪಾರಿಯ ಶವ ಪತ್ತೆ
Team Udayavani, Feb 16, 2022, 7:26 PM IST
ಕೆ.ಆರ್.ಪೇಟೆ : ಎಳನೀರು ವ್ಯಾಪಾರಿಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಐಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಎಳನೀರು ವ್ಯಾಪಾರ ಹಾಗೂ ಚಿಕನ್ ಅಂಗಡಿ ನಡೆಸುತ್ತಿದ್ದ ಕೃಷ್ಣೇಗೌಡ ಬಿನ್ ನಂಜೇಗೌಡ(52) ಮೃತ ವ್ಯಕ್ತಿ. ಮಂಗಳವಾರ ರಾತ್ರಿ ಕುಟುಂಬದ ಸದಸ್ಯರೊಂದಿಗೆ ಊಟ ಮುಗಿಸಿದ ನಂತರ ಕೃಷ್ಣೇಗೌಡರ ಮಗ ಸಮೀಪದಲ್ಲಿಯೇ ಇರುವ ಚಿಕನ್ ಅಂಗಡಿಯಲ್ಲಿ ಮಲಗಲು ತೆರಳಿದ್ದಾನೆ. ಪತ್ನಿ ಮತ್ತು ಮೃತ ಕೃಷ್ಣೇಗೌಡ ಮನೆಯಲ್ಲಿಯೇ ಮಲಗಿದ್ದರು ಎನ್ನಲಾಗಿದೆ.
ಪತ್ನಿ ಬೆಳಿಗ್ಗೆ ಮುಂಜಾನೆ ಎದ್ದು ನೋಡಿದಾಗ ಗಂಡ ಇಲ್ಲದಿರುವುದನ್ನು ಗಮನಿಸಿ ಮಗನಿಗೆ ಪೋನ್ ಮಾಡಿದ್ದಾರೆ. ಮಗ ತನ್ನ ತಂದೆಯು ಹೊಲ ಗದ್ದೆಗಳಿಗೆ ಹೋಗಿರಬಹುದೆಂದು ಹುಡುಕಾಟ ನಡೆಸಿದ್ದು ಫೋನ್ ಮಾಡಿದಾಗ ಸ್ವಿಚ್‌ಆಫ್ ಆಗಿದೆ. ಹುಡುಕಾಟ ನಡೆಸಿದ ವೇಳೆ ಕೊನೆಗೆ ಎಳನೀರು ತೋಟದಲ್ಲಿರುವ ಸೀಬೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಕೃಷ್ಣೇಗೌಡರ ಶವ ಪತ್ತೆಯಾಗಿದೆ.
ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದು ಗ್ರಾಮಾಂತರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್‌ಪಿ ನವೀನ್ ಕುಮಾರ್, ತಹಶೀಲ್ದಾರ್ ಎಂ.ವಿ.ರೂಪ. ಪೊಲೀಸ್ ನಿರೀಕ್ಷಕ ನಿರಂಜನ್, ಪಿಎಸ್‌ಐ ಪ್ರಮೋದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : ಸಾಲಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಬೇಡಿ: ಶಾಸಕ ಕೆ.ಮಹದೇವ್
ಮೃತ ಕೃಷ್ನೇಗೌಡನ ಜೇಬಿನಲ್ಲಿ ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿರುವ ಸ್ಥಿತಿಯಲ್ಲಿ ದೊರಕಿದೆ. ಸಮೀಪದಲ್ಲಿಯೇ ತನ್ನ ಚಪ್ಪಲಿಗಳನ್ನು ಬಿಟ್ಟು ನೇಣು ಹಾಕಿದ ಸ್ಥಿತಿಯಲ್ಲಿ ಶವ ದೊರಕಿದ್ದು ಹಸಿರು ಟವಲ್‌ಅನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡಿರುವ ಸ್ಥಿತಿಯಲ್ಲಿ ಇರುವುದು ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ದರಿಂದ ಪೊಲೀಸರು ಶ್ವಾನದಳವನ್ನು ಹಾಗೂ ಮೈಸೂರಿನಿಂದ ವಿಧಿವಿಜ್ಞಾನ ಪ್ರಯೋಗಾಲಯದ ಬೆರಳಚ್ಚು ತಜ್ಞರನ್ನು ಕರೆಯಿಸಿ ಮಾಹಿತಿ ಕಲೆಹಾಕಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು ಕೃಷ್ಣೇಗೌಡರ ಫೋನ್ ಕರೆಗಳ ಮಾಹಿತಿ ಪಡೆಯಲು ಸಿದ್ದತೆ ನಡೆಸಿದ್ದಾರೆ. ಮೃತ ಕೃ಼ಷ್ಣೇಗೌಡರಿಗೆ ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.