K-SET: ನಾಳೆ ಕೆ-ಸೆಟ್ ಪರೀಕ್ಷೆ: ಕಟ್ಟುನಿಟ್ಟಿನ ನಿಗಾ
41 ವಿಷಯಗಳಿಗೆ ಪರೀಕ್ಷೆ ಬರೆಯಲಿರುವ 1.17 ಲಕ್ಷ ಅಭ್ಯರ್ಥಿಗಳು
Team Udayavani, Jan 12, 2024, 12:04 AM IST
ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಶನಿವಾರ (ಜ.13) ನಡೆಯಲಿದ್ದು, ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ಒಟ್ಟು 41 ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದ್ದು, 1,17,302 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಬೆಂಗಳೂರು ನಗರ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಎಲ್ಲೆಡೆಯೂ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶನಿವಾರ ಬೆಳಗ್ಗೆ 10ರಿಂದ 11 ಗಂಟೆವರೆಗೆ ಎಲ್ಲರಿಗೂ ಸಾಮಾನ್ಯ ಪರೀಕ್ಷೆ (ಪೇಪರ್-1) ಇರುತ್ತದೆ. ಅದಾದ ಬಳಿಕ ಅದೇ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರತ್ಯೇಕ ಪರೀಕ್ಷೆ (ಪೇಪರ್-2) ನಡೆಯಲಿದೆ. ಅದು ಮಧ್ಯಾಹ್ನ 12ರಿಂದ 2ರ ವರೆಗೆ ಇರುತ್ತದೆ. ಒಮ್ಮೆ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ಹೋದ ಮೇಲೆ ಎರಡೂ ಪತ್ರಿಕೆಗಳ ಪರೀಕ್ಷೆ ಮುಗಿದ ಬಳಿಕವೇ ಹೊರಹೋಗಲು ಬಿಡುವುದು ಎಂದು ಅವರು ವಿವರಿಸಿದರು.
ಕಟ್ಟುನಿಟ್ಟಿನ ತಪಾಸಣೆ ಇರುವ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎರಡು ತಾಸು ಮೊದಲೇ ಬರಬೇಕು. ಪರೀಕ್ಷೆ ನಡೆಯುವ 41 ವಿಷಯಗಳಲ್ಲಿ ವಾಣಿಜ್ಯ ಶಾಸ್ತ್ರದ ಪರೀಕ್ಷೆಯನ್ನು ಅತಿ ಹೆಚ್ಚು ಅಂದರೆ 16,000 ಮಂದಿ ತೆಗೆದುಕೊಂಡಿದ್ದಾರೆ. 11 ಸಾವಿರ ಮಂದಿ ಕನ್ನಡ ಪರೀಕ್ಷೆ ಬರೆಯಲಿದ್ದಾರೆ. ಭಾಷಾಶಾಸ್ತ್ರದಲ್ಲಿ ಅತಿ ಕಡಿಮೆ, ಅಂದರೆ 25 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದರು.
800 ಇ- ಮೇಲ್
ನೋಂದಣಿ ಸಂಖ್ಯೆ ಕಳೆದುಕೊಂಡ 800ಕ್ಕೂ ಹೆಚ್ಚು ಮಂದಿ ಕೆ-ಸೆಟ್ ಪರೀಕ್ಷೆಯ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳದ ಕಾರಣ ಅವರ ಎಲ್ಲ ಇ-ಮೇಲ್‌ಗಳಿಗೆ ನೋಂದಣಿ ಸಂಖ್ಯೆ ರವಾನಿಸುವ ಕೆಲಸವನ್ನು ಕೆಇಎ ಮಾಡಿದೆ. ಎಲ್ಲರೂ ಪರೀಕ್ಷೆ ತೆಗೆದುಕೊಳ್ಳಲು ಇದು ನೆರವಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.