ಕಡಬ: ಅವ್ಯವಸ್ಥೆಯ ಆಗರ ಸಾರ್ವಜನಿಕ ಶ್ಮಶಾನ
Team Udayavani, Jul 7, 2020, 5:31 AM IST
ವಿಶೇಷ ವರದಿ- ಕಡಬ: ಬೆಳೆಯುತ್ತಿರುವ ಕಡಬ ಪೇಟೆ ತಾ| ಕೇಂದ್ರವಾಗಿ ಹಲವು ಸಮಯ ಕಳೆಯಿತು. ಗ್ರಾ.ಪಂ. ವ್ಯವಸ್ಥೆ ಇದೀಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಆದರೆ ಇಲ್ಲಿನ ಸಾರ್ವಜನಿಕ ಶ್ಮಶಾನ ಮಾತ್ರ ಅಭಿವೃದ್ಧಿ ಕಾಣದೆ ಅವ್ಯವಸ್ಥೆಯ ಆಗರವಾಗಿದೆ.
ಇಲ್ಲಿನ ಶ್ಮಶಾನದಲ್ಲಿ ಯಾವುದೇ ರೀತಿಯ ಸಮರ್ಪಕ ವ್ಯವಸ್ಥೆಗಳು ಇಲ್ಲದೆ ಇರುವುದರಿಂದಾಗಿ ಗ್ರಾಮಸ್ಥರು ಶವ ಸಂಸ್ಕಾರಕ್ಕಾಗಿ ತೊಂದರೆ ಎದುರಿ ಸುವಂತಾಗಿದೆ. ಮೊದಲೇ ಶಿಥಿಲಗೊಂಡಿದ್ದ ಶ್ಮಶಾನದ ಕಟ್ಟಡ ಇದೀಗ ಚಿಂತಾಜನಕ ಸ್ಥಿತಿಯಲ್ಲಿದೆ. ಕಟ್ಟಡದ ಮೇಲ್ಛಾವಣಿಯ ಶೀಟುಗಳು ಗಾಳಿ, ಮಳೆಯಿಂದಾಗಿ ಹಾರಿ ಹೋಗಿ ಅಲ್ಲಿ ಮಳೆಗಾಲದಲ್ಲಿ ಶವ ದಹನ ಮಾಡಲು ಜನರು ಹರಸಾಹಸ ಪಡಬೇಕಿದೆ.
ಬೇಜವಾಬ್ದಾರಿಗೆ ಸಾಕ್ಷಿ
ಶ್ಮಶಾನವನ್ನು ಅಭಿವೃದ್ಧಿಪಡಿಸಲು ಸರಕಾರ ಮಂಜೂರು ಮಾಡಿದ 4 ಲ.ರೂ. ಅನುದಾನ ಬಳಕೆಯಾಗದೆ 9 ವರ್ಷಗಳಿಂದ ಕಡಬ ತಹಶೀಲ್ದಾರ್ ಖಾತೆ ಯಲ್ಲಿ ಉಳಿದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿ ಇಲ್ಲಿ ಎದ್ದುಕಾಣುತ್ತಿದೆ. ಇಲ್ಲಿನ ಅವ್ಯವಸ್ಥೆ ಯಿಂದಾಗಿ ಕಡಬ ಪರಿಸರದ ಜನರು ದೂರದ ಉಪ್ಪಿನಂಗಡಿಗೆ ಶವ ಸಂಸ್ಕಾರಕ್ಕಾಗಿ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಸಂಬಂಧಪಟ್ಟವರು ಇನ್ನಾದರೂ ಈ ಬಗ್ಗೆ ಗಮನಹರಿಸದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸುವುದು ಅನಿ ವಾರ್ಯವಾಗಲಿದೆ.
ನಾಚಿಕೆಗೇಡಿನ ಸಂಗತಿ
ಮೃತಪಟ್ಟವರಿಗೆ ಸಿಗುವ ಅಂತಿಮ ಗೌರವವಾದ ಅಂತ್ಯಸಂಸ್ಕಾರಕ್ಕೂ ಕಡಬ ದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವುದು ಕಡಬದ ರಾಜಕೀಯ ಪ್ರಮುಖರಿಗೆ, ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಕೆಲವು ದಿನಗಳ ಹಿಂದೆ ಮೃತಪಟ್ಟ ನಮ್ಮ ಸಂಬಂಧಿಕರೋರ್ವರ ಅಂತ್ಯಸಂಸ್ಕಾರಕ್ಕಾಗಿ 30 ಕಿ.ಮೀ. ದೂರದ ಉಪ್ಪಿನಂಗಡಿಯ ಶ್ಮಶಾನಕ್ಕೆ ತರಳಬೇಕಾಯಿತು ಎಂದು ಸ್ಥಳೀಯ ನಿವಾಸಿಯಾದ ಪ್ರಶಾಂತ್ ಕಡಬ ಅವರು ತಿಳಿಸಿದ್ದಾರೆ.
ಶೀಘ್ರ ಕ್ರಮ
ಬಿಡುಗಡೆಯಾಗಿರುವ 4 ಲಕ್ಷ ರೂ. ಅನುದಾನವನ್ನು ಬಳಸಿ ಶ್ಮಶಾನವನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳ ಅನುಮತಿಗಾಗಿ ಪತ್ರ ಬರೆಯ ಲಾಗಿತ್ತು. ಅನುದಾನ ಬಳಸಲು ಜಿಲ್ಲಾಧಿಕಾರಿಗಳ ಅನುಮತಿ ಲಭಿಸಿದ್ದು, ಲೋಕೋಪಯೋಗಿ ಇಲಾಖೆಯ ಮೂಲಕ ಶ್ಮಶಾನದ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
-ಜಾನ್‌ಪ್ರಕಾಶ್ ರೋಡ್ರಿಗಸ್,
ಕಡಬ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.