![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 25, 2021, 9:23 PM IST
ಉಡುಪಿ: ಕರಾವಳಿ ಗ್ರಾಮೀಣ ಶೈಲಿಯಾದ ಸೀರೆ ಧರಿಸಿ ಮಣ್ಣು ಹೊರಲೂ ಗೊತ್ತು, ಕೇಂದ್ರ ಸಚಿವೆಯಾಗಿ ಕಾರ್ಯನಿರ್ವಹಿಸಲೂ ಗೊತ್ತು ಎಂಬುದನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತೋರಿಸಿಕೊಟ್ಟಿದ್ದಾರೆ.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ನಿಮಿತ್ತ ಶುಕ್ರವಾರ ಸಂಜೆ 6ರಿಂದ 9 ಗಂಟೆಯ ವರೆಗೆ ನಡೆದ ಸುತ್ತುಪೌಳಿಯ ಮಣ್ಣಿನ ಕೆಲಸ ಮತ್ತು ದೇವಸ್ಥಾನ ಸ್ವಚ್ಛಗೊಳಿಸುವ ಕೆಲಸದಲ್ಲಿ ಸಾರ್ವಜನಿಕರ ಜತೆ ಶೋಭಾ ಕರಂದ್ಲಾಜೆಯವರೂ ಪಾಲ್ಗೊಂಡಿದ್ದರು.
ದೇವಸ್ಥಾನಕ್ಕೆ ಬಂದ ಶೋಭಾ ಮೊದಲು ದೇವಿ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಸೀರೆ ಕಟ್ಟಿ, ಟೀ ಶರ್ಟ್ ಧರಿಸಿ ಮಣ್ಣು ಹೊತ್ತು ಕರ ಸೇವೆ ನಡೆಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ರವಿರಾಜ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಗಣೇಶ ರಾವ್, ನಗರಸಭೆ ಸದಸ್ಯರಾದ ಗಿರೀಶ ಅಂಚನ್, ರಜನಿ ಹೆಬ್ಟಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮೋಹನ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಶಿಲ್ಪಾ ರಘುಪತಿ ಭಟ್, ಬಿಜೆಪಿ ಮುಖಂಡರಾದ ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು.
You seem to have an Ad Blocker on.
To continue reading, please turn it off or whitelist Udayavani.