ಇಂದು ಕಡಿಯಾಳಿ ದೇಗುಲದಲ್ಲಿ ಬ್ರಹ್ಮಕಲಶ; ಶ್ರೀ ಮಹಿಷಮರ್ದಿನಿಗೆ ವಿಶೇಷ ಅಲಂಕಾರ
ನಿರಂತರ ಅನ್ನದಾನ
Team Udayavani, Jun 8, 2022, 2:10 AM IST
ಉಡುಪಿ: ಕಡಿಯಾಳಿ ಮಹಿಷಮರ್ದಿನಿ ದೇಗುಲದಲ್ಲಿ ಜೂ. 8ರಂದು ಬ್ರಹ್ಮಕಲಶೋತ್ಸವ ನೆರವೇರಲಿದ್ದು, ಬೇಕಾದ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಬ್ರಹ್ಮಕಲಶೋತ್ಸವದ ಅಂಗವಾಗಿ ದೇಗುಲದ ಒಳಭಾಗ ಮತ್ತು ಹೊರಭಾಗವನ್ನು ವಿವಿಧ ಪುಷ್ಪ, ಹಣ್ಣು, ತರಕಾರಿಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಉಡುಪಿಯ ಆದಿಶಕ್ತಿ ಫ್ಲವರ್ ಸ್ಟಾಲ್‌ನ ದಾಮೋದರ್ ಸುವರ್ಣರ ನೇತೃತ್ವದಲ್ಲಿ ಸುಮಾರು 31 ಮಂದಿ ಅಲಂಕಾರ ತಜ್ಞರು ವಿಶೇಷ ಅಲಂಕಾರ ಮಾಡಿದ್ದರು.
ಮಹಾ ಅನ್ನಸಂತರ್ಪಣೆ
ಜೂ. 8ರಂದು ಬೆಳಗ್ಗೆ 11ರಿಂದ ರಾತ್ರಿ 11ರ ತನಕ ನಿರಂತರವಾಗಿ ಮಹಾ ಅನ್ನಸಂತರ್ಪಣೆ ನಡೆಯಲಿದೆ. ನೂಕುನುಗ್ಗಲು ಆಗದಂತೆ, ಆಗಮಿಸಿದ ಭಕ್ತರೆಲ್ಲರೂ ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆಗೊಳಿಸಲಾಗಿದೆ. ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8, ಶರ್ವಾಣಿ ಕಲ್ಯಾಣ ಮಂಟಪದಲ್ಲಿ 2 ಬಫೆ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ದಕ್ಷಿಣ ದ್ವಾರದಿಂದ ಪ್ರವೇಶಿಸಿ ದೇವರ ದರ್ಶನ ಪಡೆದು ಉತ್ತರ ಬಾಗಿಲಿನಿಂದ ಹೊರಗೆ ಬಂದು ಕಡಿಯಾಳಿ ಶಾಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 35 ಸಾವಿರ ಭಕ್ತರಿಗೆ ಅನ್ನಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಸುಮಾರು 14,000 ಭಕ್ತರು ಭೋಜನಪ್ರಸಾದ ಸ್ವೀಕರಿಸಿದ್ದು, ಇದುವರೆಗೆ ಸುಮಾರು 85,000 ಜನರು ಭೋಜನಪ್ರಸಾದ ಸ್ವೀಕರಿಸಿದ್ದಾರೆ. ಭೋಜನದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪಾರ್ಕಿಂಗ್ – ಬಸ್ ವ್ಯವಸ್ಥೆ
ದೇಗುಲಕ್ಕೆ ಆಗಮಿಸುವ ಭಕ್ತರ ಎಲ್ಲ ದ್ವಿಚಕ್ರವಾಹನಗಳನ್ನು ಓಷಿಯನ್ ಪರ್ಲ್ ಹೊಟೇಲ್ ಮುಂಭಾಗ, ಕಟ್ಟೆ ಆಚಾರ್ಯ ಮಾರ್ಗ ಮತ್ತು ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿಯಲ್ಲಿ ಹಾಗೂ ಕಾರುಗಳಿಗೆ ಎಂಜಿಎಂ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಂಜಿಎಂ ಮೈದಾನದಿಂದ ದೇಗುಲಕ್ಕೆ ಬರಲು ಉಚಿತವಾಗಿ ಎಲೆಕ್ಟ್ರಿಕಲ್ ರಿಕ್ಷಾ ಸೇವೆ ಒದಗಿಸಲಾಗಿದೆ. ಜೂ. 8ರಂದು ಬ್ರಹ್ಮಾವರ, ಹಿರಿಯಡಕ, ಕಾಪು, ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಬರುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್‌ನಲ್ಲಿ ಬ್ಯಾನರ್ ಅಳವಡಿಸಲಾಗುವುದು. ಆ ಬಸ್‌ನವರು ಎಂಜಿಎಂ ಮೈದಾನದವರೆಗೆ ಕರೆತರುತ್ತಾರೆ. ಅಲ್ಲಿಂದ ಎಲೆಕ್ಟ್ರಿಕಲ್ ರಿಕ್ಷಾ ಸೇವೆ ಸಿಗಲಿದೆ. ಬಳಿಕ ಅವರನ್ನು ಬಂದ ಸ್ಥಳಗಳಿಗೆ ಬಿಟ್ಟು ಬರುವ ವ್ಯವಸ್ಥೆ ಇದೆ.
ಸ್ವಯಂಸೇವಕರ ನಿಷ್ಠೆ
ಹಗಲು ರಾತ್ರಿಯೆನ್ನದೆ ಯಾವುದೇ ನಿರ್ದೇಶನವಿಲ್ಲದೆ, ವ್ಯವಸ್ಥೆಯಲ್ಲಿ ಲೋಪವಾಗದಂತೆ ದುಡಿಯುತ್ತಿರುವ ಸುಮಾರು 1,300 ಸ್ವಯಂಸೇವಕರ ನಿಸ್ವಾರ್ಥ ಸೇವೆಯನ್ನು ಭಕ್ತರು ಮುಕ್ತ ಕಂಠದಿಂದ ಶ್ಲಾ ಸುತ್ತಿದ್ದಾರೆ.
ಮಲ್ಲಿಗೆ ಅಟ್ಟೆಯಲ್ಲಿ ಶಯನೋತ್ಸವ
ಜೂ. 8ರ ರಾತ್ರಿ ದೇವರ ದರ್ಶನ, ಬಲಿ ಉತ್ಸವ, ಏಕಾಂತ ಸೇವೆಯ ಅನಂತರ ದೇವರು ಶಯನಕ್ಕೆ ತೆರಳುವುದು ವಾಡಿಕೆ. ಮಲ್ಲಿಗೆಯ ಅಟ್ಟೆಯ ಮೇಲೆ ದೇವಿಗೆ ಶಯನದ ವ್ಯವಸ್ಥೆ ಮಾಡಲಾಗುವುದು. ಜೂ. 9ರ ಬೆಳಗ್ಗೆ ಅದೇ ಮಲ್ಲಿಗೆ ಹೂವನ್ನು ದೇವಿಗೆ ಅಲಂಕಾರ ಮಾಡಲಾಗುವುದು. ಅನಂತರ ಬ್ರಹ್ಮಕಲಶೋತ್ಸವಕ್ಕೆ ಆಗಮಿ
ಸುವ ಭಕ್ತರಿಗೆ ಪ್ರಸಾದ ರೂಪವಾಗಿ ಅದೇ ಮಲ್ಲಿಗೆ ಹೂವನ್ನು ವಿತರಿಸಲಾ ಗುವುದು. ಬಾಳೆನಾರಿನಿಂದ ಕಟ್ಟಲ್ಪಟ್ಟ
ಶಂಕರಪುರ ಮಲ್ಲಿಗೆ ಹೂವನ್ನು ಮಾತ್ರ ಭಕ್ತರಿಂದ ಸ್ವೀಕರಿಸಲಾಗುವುದು. ಮಲ್ಲಿಗೆ ಸಮರ್ಪಿಸಲು ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಒಳಗೆ ಮಲ್ಲಿಗೆ ಹೂವಿನ ಮಾರಾಟ ಕೌಂಟರ್ ತೆರೆಯಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕಾಮತ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.