ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ: ಕಾಳಹಸ್ತೇಂದ್ರ ಶ್ರೀ
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
Team Udayavani, Jun 11, 2022, 2:22 AM IST
ಉಡುಪಿ: ಯುವ ಜನತೆಯನ್ನು ಧಾರ್ಮಿಕ ಕೇಂದ್ರಗಳಿಗೆ ಕರೆ ತರುವ ಮೂಲಕ ಅವರಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ -ವಿಚಾರಗಳನ್ನು ಪರಿಚಯ ಮಾಡಿಸುವ ಕೆಲಸವನ್ನು ಹೆತ್ತವರು ಮಾಡಿದರೆ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಲು ಸಹಾಯವಾಗಲಿದೆ ಎಂದು ಕಟಪಾಡಿ ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವ ಸಮಾರೋಪದ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ದೇಗುಲಗಳಲ್ಲಿ ಬಾಲ ಸಂಸ್ಕಾರ ಕೇಂದ್ರ ತೆರೆಯುವ ಕೆಲಸ ವಾಗಬೇಕು. ಇದರಿಂದ ಮಕ್ಕಳಿಗೆ ಆರಂಭದಿಂದಲೇ ಧಾರ್ಮಿಕ ಪ್ರಜ್ಞೆ ಬೆಳೆದು ಧರ್ಮದ ಉದ್ದೇಶ ತಿಳಿಯ ಲಿದೆ. ಈ ದೇಗುಲವು ಸ್ವಯಂ ಸೇವಕರು, ದಾನಿಗಳು, ಆಡಳಿತ ಮಂಡಳಿ, ಅರ್ಚಕರು ಮತ್ತು ಸರ್ವರ ಸಮರ್ಪಣ ಭಾವದ ಸೇವೆ ಯಿಂದ ಇಷ್ಟೊಂದು ಭವ್ಯವಾಗಿ ಮೂಡಿ ಬರಲು ಸಾಧ್ಯವಾಗಿದೆ. ಈ ದೇಗು ಲದ ಮೂಲಕ ನಿತ್ಯ ನಿರಂತರ ಧರ್ಮ ಕಾರ್ಯ ನಡೆಯಲಿ ಎಂದರು.
ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಕಟ್ಟೆ ರವಿರಾಜ್ ವಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಮಣಿಪಾಲ ದಶರಥನಗರ ಶ್ರೀ ವೈಷ್ಣವಿದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಜಯರಾಜ್ ಹೆಗ್ಡೆ, ನಗರಸಭೆ ಸದಸ್ಯರಾದ ಸಂತೋಷ್‌ಜತ್ತನ್, ಕಲ್ಪನಾ ಸುಧಾಮ, ಅರ್ಚಕ ರಾಧಾಕೃಷ್ಣ ಉಪಾಧ್ಯಾಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯು.ಮೋಹನ ಉಪಾಧ್ಯಾಯ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಸದಸ್ಯೆ ಶಶಿಕಲಾ ಭರತ್‌ರಾಜ್ ಉಪಸ್ಥಿತರಿದ್ದರು.
ಸಮ್ಮಾನ
ಎಲ್ಲೂರು ವಿಷ್ಣುಮೂರ್ತಿ ಭಟ್, ದೊಡ್ಡಣಗುಡ್ಡೆ ಸುದರ್ಶನ ಆಚಾರ್ಯ, ಹರಿ ಪ್ರಸಾದ್ ಕಡಿಯಾಳಿ ಸೇರಿದಂತೆ ದಾನಿಗಳು, ವಿವಿಧ ಕೆಲಸ ನಿರ್ವಹಿಸಿದವರನ್ನು ಗೌರವಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿದರು. ನ್ಯಾಯವಾದಿ ರಾಜಶೇಖರ ಪಿ. ಶಾಮರಾವ್, ನಾಗರಾಜ್ ವರ್ಕಾಡಿ ನಿರೂಪಿಸಿದರು. ರಾಕೇಶ್ ಜೋಗಿ ವಂದಿಸಿದರು.
ಮೂಲ ನಂಬಿಕೆ- ಮೂಢನಂಬಿಕೆ
ದೇವರಿದ್ದಾನೆ ಎನ್ನುವುದು ಮೂಲ ನಂಬಿಕೆಯಾದರೆ, ದೇವರಿಲ್ಲ ಎನ್ನುವುದು ಮೂಢನಂಬಿಕೆ. ಅದಕ್ಕೆ ನಮ್ಮ ದೇಗುಲಗಳು ಜೀವಂತ ಸಂದೇಶ ಸಾರುತ್ತಿವೆ. ಧರ್ಮ ಎಂದರೆ ಮಾಡಲೇಬೇಕಾದ ಕರ್ತವ್ಯ ಎಂದರ್ಥ.
ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸಬೇಕಾಗಿದೆ. ಭಗವಂತ ಸರ್ವತ್ರ ಮತ್ತು ಸಾರ್ವಕಾಲಿಕ ಸತ್ಯ ಎನ್ನುವ ಮೂಲ ನಂಬಿಕೆಯುಳ್ಳವರು ಭಾರತೀಯರು. ದೇಶದಲ್ಲಿ ಭಗವಂತನನ್ನು ನಂಬುವವನಿಗೆ ಮಾತ್ರ ಮಾನ್ಯತೆ ಇದೆ ವಿನಾ ನಂಬದವನಿಗೆ ಮಾನ್ಯತೆ ಸಿಗುವುದಿಲ್ಲ ಎಂದು ಧಾರ್ಮಿಕ ಉಪನ್ಯಾಸದಲ್ಲಿ ಆರೆಸ್ಸೆಸ್‌ನ ಜೇಷ್ಠ ಪ್ರಚಾರಕ ಸು. ರಾಮಣ್ಣ ಪ್ರತಿಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.