ಪಕ್ಷದಲ್ಲಿ ಹಿರಿಯರನ್ನು ಬಳಸಿಕೊಳ್ಳುತ್ತಿಲ್ಲ: ಕಾಗೋಡು ಅಸಮಾಧಾನ
Team Udayavani, Jan 29, 2020, 8:13 PM IST
ಬೆಂಗಳೂರು: ಪಕ್ಷದಲ್ಲಿ ಹಿರಿಯರನ್ನು ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿರಿಯರ ಮಾರ್ಗದರ್ಶನ ಪಡೆಯದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಸ್ಥಿತಿ ಬಂದಿದೆ ಎಂದು ಹೇಳಿದರು.
ಎಲ್ಲದಕ್ಕೂ ಹೈಕಮಾಂಡ್ ಭೇಟಿ ಮಾಡುವ ಸ್ಥಿತಿ ಬರಬಾರದು. ಇಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸಿದ್ದರಾಮಯ್ಯ ಏನು ಬೆಳೆದು ನಿಂತವರಲ್ಲ, ಎಲ್ಲರಿಂದಾಗಿಯೇ ಅವರು ಅಧಿಕಾರ ಪಡೆದಿದ್ದು. ಪರಮೇಶ್ವರ್ ಕೂಡ ಸಂಸ್ಥೆ ಕಟ್ಟಿಕೊಂಡಿದ್ದವರು ಅದರ ಮೂಲಕವೇ ರಾಜಕೀಯಕ್ಕೆ ಬಂದದವರು ಎಂದು ತಿಳಿಸಿದರು.
ಕಾಂಗ್ರೆಸ್ ಜವಾಬ್ದಾರಿಯುತ ಪಕ್ಷ. ಪಕ್ಷವನ್ನು ಸಂಘಟಿಸಬೇಕಾದ ಅವಶ್ಯಕತೆಯಿದೆ. ಇದರತ್ತ ಎಲ್ಲರೂ ಗಮನಹರಿಸಬೇಕು. ಹೈಕಮಾಂಡ್ ಅಧಿಕಾರ ಇದ್ದಾಗ ಒಂದು ರೀತಿ, ಇಲ್ಲದಾಗ ಮತ್ತೂಂದು ರೀತಿ ಕಾಣುತ್ತಿದೆ.
ಅಧಿಕಾರ ಇದ್ದಾಗ ಬಹಳ ಉತ್ಸಾಹದಿಂದ ಇರುತ್ತಾರೆ. ಅಧಿಕಾರ ಇಲ್ಲ ಎಂದರೆ ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.