ಕಲ್ಪನೆಯನ್ನೂ ಮೀರಿಸಿದ ಕಲ್ಪನಾ ಚಾವ್ಲಾ: ಬಾಹ್ಯಾಕಾಶಯಾನದ ಕನಸು ಆಕೆಗೆ ಹೇಗೆ ಬಂತು?


Team Udayavani, Jul 24, 2020, 8:00 AM IST

kalpana

ಅವಳು ಕನಸು ಕಂಗಳ ಹುಡುಗಿ. ಆಕಾಶದಲ್ಲಿ ಹಾರಾಡಬೇಕು ಎಂದು ಚಿಕ್ಕಂದಿನಲ್ಲೇ ಕನವರಿಸುತ್ತಿದ್ದಳು. ಅದಕ್ಕಾಗಿ ನಿರಂತರ ಪ್ರಯತ್ನ ಪಟ್ಟಿದ್ದಳು. ಶ್ರದ್ಧೆಯಿಂದ ಕೆಲಸ ಮಾಡಿದ್ದಳು.

ಮುಂದೊಂದು ದಿನ ಅದೇ ಆಕಾಶದಲ್ಲೇ ಲೀನವಾಗಿ ಅದೇಷ್ಟೋ ಯುವ ಜನರಿಗೆ ಸ್ಫೂರ್ತಿಯ ಸೆಲೆಯಾದಳು. ಹೌದು, ನಾವು ಹೇಳುತ್ತಿರುವುದು ಭಾರತದ ಹೆಮ್ಮೆಯ ಕುವರಿ ಕಲ್ಪನಾ ಚಾವ್ಲಾ ಬಗ್ಗೆ.

ಧ್ರುವತಾರೆ ಬೆಳಗಿದ ಬಗೆ ಇದು
1961, ಜುಲೈ 1ರಂದು ಹರ್ಯಾಣ ಕರ್ನಾಲ್‌ ಎಂಬ ಸಣ್ಣ ಪಟ್ಟಣದಲ್ಲಿ ಬನಾರಸಿ ಚಾವ್ಲಾ ಮತ್ತು ಸಂಜ್ಯೋತಿ ದಂಪತಿಯ ಮಗಳಾಗಿ ಕಲ್ಪನಾ ಚಾವ್ಲಾ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕಲ್ಪನಾ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದರು.

ತನ್ನ ಕನಸುಗಳಿಗೆ ಕಸೂತಿ ಹಣೆಯುವ ಕೆಲಸನ್ನು ಅಲ್ಲಿಂದಲೇ ಆಕೆ ಆರಂಭಿಸಿದ್ದರು. ಬಾಹ್ಯಾಕಾಶಕ್ಕೆ ಹೋಗಬೇಕು ಎಂದು ಹಲವರು ಕನಸು ಕಟ್ಟಿಕೊಳ್ಳುತ್ತಾರೆ. ಆದರೆ ಕೆಲವರು ಮಾತ್ರ ಅದರಲ್ಲಿ ಸಫ‌ಲರಾಗುತ್ತಾರೆ.

ಅವರಲ್ಲಿ ಕಲ್ಪನಾ ಮೊದಲಿನ ಸಾಲಿನಲ್ಲಿ ನಿಲ್ಲುತ್ತಾರೆ. ಗಗನಯಾತ್ರಿ ಆಗುವುದು ಸುಲಭವಲ್ಲ. ಅದು ಆಕೆಗೂ ತಿಳಿದಿತ್ತು. ಆದರೆ ಕಷ್ಟವಾದದ್ದನ್ನು ಸುಲಭವಾಗಿಸಿಕೊಳ್ಳುವುದು ಕೂಡ ನಮ್ಮ ಕೈಯಲ್ಲಿಯೇ ಇದೆ ಎಂಬುದು ಆಕೆಯ ನಿಲುವಾಗಿತ್ತು.

ಕರ್ನಾಲ್‌ನ ಸ್ಥಳೀಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಏರೋನಾ ಟಿಕಲ್‌ ಎಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಪೂರ್ಣಗೊಳಿಸಿದರು. ಗಮನಾರ್ಹ ಸಂಗತಿಯೆಂದರೆ ಇಡೀ ಬ್ಯಾಚ್‌ನಲ್ಲಿ ಅವಳೊಬ್ಬಳೇ ಬಾಲಕಿಯಾಗಿದ್ದಳು.

ಡಾಕ್ಟರೇಟ್‌
ಹೆಚ್ಚಿನ ಅಧ್ಯಯನಕ್ಕೆ ಅಮೆರಿಕಾದ ಟೆಕ್ಸಾಸ್‌ ವಿ.ವಿ.ಯಲ್ಲಿ ಪ್ರವೇಶ ಪಡೆದು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಡಾಕ್ಟರೇಟ್‌ ಪದವಿ ಪಡೆಯಲು ಕೊಲೊರಾಡೋ ವಿ.ವಿ.ಗೆ ತೆರಳಿದರು. ಬಳಿಕ ನಾಸಾದ ಅಮೆಸ್‌ ಸಂಶೋಧನಾ ಕೇಂದ್ರದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ನೈಜ ವೃತ್ತಿ ಜೀವನ 1994ರಲ್ಲಿ ಆರಂಭವಾಗಿ ವರ್ಷದ ಬಳಿಕ ಅವರು ಬಾಹ್ಯಾಕಾಶ ವಲಯದ ಸದಸ್ಯರಾದರು. ಅವರ ಕನಸು ಚಂದ್ರನ ಮೇಲೆ ಇಳಿಯುವುದಾಗಿತ್ತು.ಕನಸಿನಂತೆ ಅವರಿಗೆ ಅಂತಹ ಅವಕಾಶವೂ ಅರಸಿ ಬಂತು. ಅವರ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ 1994ರ ನವೆಂಬರ್‌ 19ರಂದು ನಡೆಯಿತು.

ಕೊಲಂಬಿಯಾ ಡಿಸಾಸ್ಟರ್‌
ಕೊಲಂಬಿಯಾ ಫ್ಲೈಟ್‌ ಎಸ್‌ಟಿಎಸ್‌-87ರ 6 ಸದಸ್ಯರಲ್ಲಿ ಕಲ್ಪನಾ ಕೂಡಾ ಒಬ್ಬರಾಗಿದ್ದರು. ಸುಮಾರು 375 ಗಂಟೆಗಳ ಕಾಲ 6.5 ಮಿಲಿಯನ್‌ ಮೈಲುಗಳಷ್ಟು ಪ್ರಯಾಣಿಸಿ ಭೂಮಿಗೆ ಹಿಂದಿರುಗುತ್ತಿದ್ದಾಗ ಫೆಬ್ರವರಿ 1, 2003ರಂದು ಬಾಹ್ಯಾಕಾಶ ನೌಕೆ ವಿಭಜನೆಯಾಯಿತು. ಹೀಗೆ ಕಲ್ಪನಾ ಸೇರಿ 7 ಸದಸ್ಯರ ವೃತ್ತಿ ಜೀವನಕ್ಕೆ ಪೂರ್ಣವಿರಾಮ ವಿಡಬೇಕಾಯಿತು. ಆದ್ದರಿಂದ ಕಲ್ಪನಾ ಅವರ ಕನಸು ನಿರೀಕ್ಷೆಗಿಂತ ಬೇಗ ಕೊನೆಗೊಂಡಿತು.

ವಿಮಾನ ಹೇಗೆ ಹಾರುತ್ತದೆ?
ಮೆಗಾ ಐಕಾನ್ಸ್‌ ‌ ಟಿವಿ ಸರಣಿಯ ಭಾಗವಾಗಿ ನ್ಯಾಷನಲ್‌ ಜಿಯೋಗ್ರಾಫಿಕ್‌ ಚಾನಲ್‌ ಕಲ್ಪನಾ ಚಾವ್ಲಾ ಅವರ ಜೀವನ ವನ್ನು ಆಧರಿಸಿ ನಿರ್ಮಿಸಿದ 45 ನಿಮಿಷಗಳ ದ್ವಿಭಾಷಾ ಸಾಕ್ಷ್ಯ ಚಿತ್ರದಲ್ಲಿ ಅವರ ಕನಸು ಜೀವಂತವಾಗಿದೆ. ಕಲ್ಪನಾ 3ನೇ ವಯಸ್ಸಿನಲ್ಲಿ ಮನೆಯ ಟೆರೇಸ್‌ ಮೇಲೆ ನಿಂತು ವಿಮಾನ ಹಾರಾಟವನ್ನು ನೋಡಿ ಖುಷಿಪಡುತ್ತಿದ್ದರಂತೆ. ಬೆಳೆಯುತ್ತಾ ಬೆಳೆಯುತ್ತಾ ತಂದೆಯ ಬಳಿ, “ನಾನು ವಿಮಾನವನ್ನು ಹತ್ತಿರದಿಂದ ನೋಡಬೇಕು’ಎಂದು ಹೇಳುತ್ತಿದ್ದರಂತೆ. ಅದರಂತೆ ಒಂದು ದಿನ ಅವರ ತಂದೆ ಬನಾರಸಿ ಲಾಲ್‌ ಚಾವ್ಲಾ ಮಗಳನ್ನು ಮನೆ ಸಮೀಪದ ಕರ್ನಾಲ್‌ ಫ್ಲೈಯಿಂಗ್‌ ಕ್ಲಬ್‌ಗ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ಮಗಳಿಗಾಗಿ ಅವರು ಅಲ್ಲಿನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಕ್ಲಬ್‌ಗ ಭೇಟಿ ನೀಡಲು ಅನುಮತಿ ಪಡೆದುಕೊಂಡರು.

ಅನಂತರ ಆಕೆಯನ್ನು ಸೈಕಲ್‌ ಮೇಲೆ ಮುಂದೆ ಕೂರಿಸಿಕೊಂಡು ಹೊರಟರು. ಖುಷಿಯಿಂದ ತೇಲಾಡಿದ ಕಲ್ಪನಾ ಅಲ್ಲಿಗೆ ತಲುಪುವವರೆಗೆ ನನ್ನ ಬಳಿ ಸಾವಿರ ಪ್ರಶ್ನೆ ಕೇಳಿದ್ದಳು ಎಂದು ಬನಾರಸಿ ಲಾಲ್‌ ನೆನಪು ಹಂಚಿಕೊಳ್ಳುತ್ತಾರೆ.
ಭಿನ್ನವಾಗಿದ್ದಳು
ಕಲ್ಪನಾ ತನ್ನ ಗೆಳೆಯರೊಂದಿಗೆ ವೃತ್ತಿ ಜೀವನದ ಬಗ್ಗೆ ಚರ್ಚಿಸುವಾಗ ಆಕಾಶದತ್ತ ಬೊಟ್ಟು ಮಾಡುತ್ತಾ ನಾನು ಹಾರಲು ಹೋಗುತ್ತೇನೆ ಎನ್ನುತ್ತಿದ್ದರಂತೆ. ನನ್ನ ಮಗಳು ಎಲ್ಲ ಹೆಣ್ಣು ಮಕ್ಕಳಿಗಿಂತ ಭಿನ್ನವಾಗಿದ್ದಳು ಎಂದು ಅವರ ಹೆತ್ತವರು ಹಲವು ಬಾರಿ ಹೇಳಿದ್ದಿದೆ. ಆಕೆ ತನ್ನ ಕೂದಲ ನ್ನು ತಾನೇ ಕತ್ತರಿಸಿಕೊಳ್ಳುತ್ತಿದ್ದಳು. ಕಾಲೇಜಿಗೆ ಹೋಗು ವಾಗ ಅಥವಾ ಹೊರಗಡೆ ಹೋಗುವಾಗ ಎಂದೂ ಆಕೆ ಇಸ್ತ್ರೀ ಮಾಡಿದ ಬಟ್ಟೆ ತೊಡುತ್ತಿರಲಿಲ್ಲ ಎಂದು ಸ್ಮರಿಸಿಕೊಳ್ಳುತ್ತಾರೆ.

ವಿಮಾನ, ಆಗಸ ನೆಚ್ಚಿನ ಚಿತ್ರ
ಶಿಕ್ಷಕರು ಚಿತ್ರ ಬಿಡಿಸಲು ಹೇಳಿದರೆ ಬೇರೆಯವರೆಲ್ಲಾ ಮನೆ, ಪರ್ವತ, ನದಿ ಗಳನ್ನು ಬಿಡಿಸಿದರೆ ಕಲ್ಪನಾ ಮಾತ್ರ ವಿಮಾನ ಆಕಾಶದಲ್ಲಿ ಹಾರಾಡುತ್ತಿರುವ ಚಿತ್ರ ಬಿಡಿಸುತ್ತಿದ್ದರಂತೆ. ಆಕೆಯ ಪಾಲಕರು ಬ್ಯುಸಿಯಾಗಿದ್ದರಿಂದ ನಾಮಕರಣವನ್ನು ಔಪಚಾರಿಕವಾಗಿ ಮಾಡಿರಲಿಲ್ಲ. ಹತ್ತಿರದ ನರ್ಸರಿ ಶಾಲೆಯ ಪ್ರವೇಶಕ್ಕೆಂದು ಅವಳ ಸಹೋದರಿ ಮತ್ತು ಚಿಕ್ಕಮ್ಮ ಕರೆದುಕೊಂಡು ಹೋಗಿದ್ದರು.

ಪ್ರಾಂಶುಪಾಲರು ಮಗುವಿನ ಹೆಸರು ಕೇಳಿದಾಗ ಸಹೋದರಿ, ನಾವು ಅವಳಿಗೆ ಹೆಸರಿಟ್ಟಿಲ್ಲ. ಕಲ್ಪನಾ, ಜ್ಯೋತ್ಸ್ನಾ  ಮತ್ತು ಸುನೈನಾ ಎಂಬ ಮೂರು ಹೆಸರು ಯೋಚಿಸಿದ್ದೇವೆ ಎಂದರು. ಆಗ ಪ್ರಾಂಶುಪಾಲರು ಪುಟ್ಟ ಹುಡುಗಿಯಲ್ಲಿ ಯಾವ ಹೆಸರು ಬೇಕೆಂದು ಕೇಳಿದಾಗ “ಕಲ್ಪನಾ’ ಹೆಸರು ಆಯ್ಕೆ ಮಾಡಿಕೊಂಡಿದ್ದಳಂತೆ.

“ಬಾಹ್ಯಾಕಾಶದಲ್ಲಿ ಕಳೆದುಹೋಗುತ್ತೇನೆ’
ಒಂದು ದಿನ ನಾನು ಬಾಹ್ಯಾಕಾಶದಲ್ಲಿ ಕಳೆದುಹೋಗುತ್ತೇನೆ ಎಂದು ಕಲ್ಪನಾ ಹಾಸ್ಯವಾಗಿ ಹೇಳುತ್ತಿದ್ದನ್ನು ಸ್ಮರಿಸಿ ಕೊಳ್ಳುವ ಬನಾರಸಿ ಲಾಲ್‌, ಅಕ್ಷರಶಃ ಆಕೆ ಇಂದು ಬಾಹ್ಯಾಕಾಶದಲ್ಲಿ ಸಂಪೂರ್ಣವಾಗಿ ಕಳೆದುಹೋಗಿದ್ದಾಳೆ ಎಂದು ಭಾವುಕರಾಗುತ್ತಾರೆ. ಬಾಹ್ಯಾಕಾಶಯಾನದಿಂದ ಮಗಳು ಮರಳುವುದನ್ನೇ ಕಾತರದಿಂದ ಕಾಯುತ್ತಿದ್ದ ಬನಾರಸಿ ಲಾಲ್‌ ಕಿವಿಗೆ ಅಪ್ಪಳಿಸಿದ್ದು ಬ್ಯಾಹಾಕಾಶ ನೌಕೆ ನುಚ್ಚು ನೂರಾದ ಸುದ್ದಿ.

ಮಗಳು ತಮ್ಮ ಪಾಲಿಗಿಲ್ಲ ಎಂಬ ಸತ್ಯವನ್ನೂ ಧೈರ್ಯದಿಂದ ಎದುರಿಸಿದ್ದರು. ಕಲ್ಪನಾ ಅವರ ಆಸೆ ಯಂತೆ ಆಕೆಯ ಸಾವಿನ ಅನಂತರ ಚಿತಾ ಭಸ್ಮವನ್ನು ಜಿಯಾನ್‌ ರಾಷ್ಟ್ರೀಯ ಉದ್ಯಾ ವನ ದಲ್ಲಿ ಇರಿಸಲಾಗಿದೆ. ಇಂದಿಗೂ ಬನಾರಸಿ ಲಾಲ್‌ ಪ್ರಕಾರ ಆಕೆ ನಕ್ಷತ್ರವಾಗಿ ಹೊಳೆಯುತ್ತಿದ್ದಾಳೆ.

-ಪ್ರೀತಿ ಭಟ್‌

ಟಾಪ್ ನ್ಯೂಸ್

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.