![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 21, 2020, 7:40 PM IST
ಸಿದ್ದಾಪುರ: ಪಶ್ಚಿಮಘಟ್ಟದ ತಪ್ಪಲಿಲ್ಲಿ ಸುರಿದ ಭಾರೀ ಮಳೆಗೆ ರವಿವಾರ ಸಂಜೆ ಕುಬ್ಜಾ ನದಿ ಉಕ್ಕಿ ಹರಿದು, ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದೆ. ಕಳೆದ ಒಂದುವರೆ ತಿಂಗಳಲ್ಲಿ ಎರಡನೇ ಬಾರಿಗೆ ಕುಬ್ಜಾ ನದಿಯ ನೀರು ದೇವಸ್ಥಾನದ ಗರ್ಭಗುಡಿಗೆ ಒಳ ಭಾಗಗಕ್ಕೆ ನುಗ್ಗಿದೆ.
ದೇವಲೋಕದ ನರ್ತಕಿ ಪಿಂಗಳೆ ಶಾಪಗೃಸ್ಥಳಾಗಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಕುಬ್ಜಾ ನದಿಯಾಗಿ ಹುಟ್ಟಿ, ಗಂಗೊಳ್ಳಿ ಸಮೀಪದ ಪಂಚಗಂಗಾವಳಿ ಬಳಿ ಸಮುದ್ರವನ್ನು ಸೇರುತ್ತಾಳೆ. ಪಶ್ಚಿಮಘಟ್ಟದಲ್ಲಿ ಹುಟ್ಟಿ ಕುಬ್ಜಾ ನದಿಯಾಗಿ ಹರಿಯುವ ಪಿಂಗಳೆಯು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಿಯನ್ನು ಸ್ನಾನಮಾಡಿಸುದು ಪ್ರತಿವರ್ಷದ ವಾಡಿಕೆ.
ಈ ಬಾರೀ ಕೂಡ ಕಳೆದ ತಿಂಗಳು ಅ. 4ರಂದು ಕುಬ್ಜೆಯು ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿಯನ್ನು ಸ್ನಾನಗೈದಿದ್ದಾಳೆ. ರವಿವಾರ ಗರ್ಭಗುಡಿಯ ಒಳಭಾಗಕ್ಕೆ ನುಗ್ಗಿದ ಕುಬಾj ನದಿಯ ನೀರು ದೇವಿಯ ಸ್ನಾನಗೈಯಲು ಕೆಲವೇ ಇಂಚು ನೀರು ಬಾಕಿ ಇರುವಾಗಲೇ ಮಳೆಯ ಪ್ರಮಾಣ ಕಡಿಮೆಯಾಗಿ, ನೀರು ಇಳಿದುಹೋಗಿದೆ.
You seem to have an Ad Blocker on.
To continue reading, please turn it off or whitelist Udayavani.