ಕಂಬಳ ಕರೆಗೆ ನೂರು ಜೊತೆ ಮರಿ ಮಹಿಷ ಪ್ರವೇಶ


Team Udayavani, May 1, 2022, 7:43 AM IST

ಕಂಬಳ ಕರೆಗೆ ನೂರು ಜೊತೆ ಮರಿ ಮಹಿಷ ಪ್ರವೇಶ

ಮಂಗಳೂರು: ಕಂಬಳ ಕರೆಗೆ ಪ್ರಸ್ತುತ ಋತುವಿನಲ್ಲಿ ಸುಮಾರು 100 ಜೋಡಿ ಮರಿಕೋಣಗಳು ಪ್ರವೇಶಿಸಿದ್ದು, ತುಳುನಾಡಿನ ಈ ಜಾನಪದ ಕ್ರೀಡೆಯ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಹಲವು ಸವಾಲುಗಳು ಎದುರಾದರೂ ಸಮರ್ಥವಾಗಿ ನಿಭಾಯಿಸಿ ಮುನ್ನಡೆಯುವಲ್ಲಿ ಕಂಬಳ ಯಶಸ್ವಿಯಾಗಿದೆ. ಇದರ ಜನಪ್ರಿಯತೆ ದಿನದಿಂದ ದಿನಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಿಸುತ್ತಿದೆ. ಕಂಬಳ ಕ್ರೀಡೆಯನ್ನು ಮುಂದಿನ ಪೀಳಿಗೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಮರಿಕೋಣಗಳನ್ನು ಪಳಗಿಸಲಾಗುತ್ತಿದೆ.

ಕಾರ್ಕಳದ ಮಿಯ್ಯಾರಿನಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಎರಡು ಸ್ನೇಹ ಕಂಬಳಗಳಲ್ಲಿ ಸುಮಾರು 100 ಜೊತೆ ಸಬ್‌ ಜೂನಿಯರ್‌ ಕೋಣಗಳು ಭಾಗವಹಿಸಿದ್ದವು. ಮೂರು ವರ್ಷಕ್ಕಿಂತ ಕೆಳಗಿನ, ಹಲ್ಲು ಬಂದಿರದ (ತುಳುವಿನಲ್ಲಿ ಪರು ಪಾಡಂದಿನ) ಮರಿಕೋಣಗಳನ್ನು ಕಂಬಳದ ಪರಿಭಾಷೆಯಲ್ಲಿ ಸಬ್‌ ಜೂನಿಯರ್‌ ಕೋಣಗಳೆಂದು ಕರೆಯಲಾಗುತ್ತದೆ. ಇತ್ತೀಚಿನ ಮೂಡೂರು- ಪಡೂರು ಕಂಬಳದಲ್ಲೂ 45 ಜೊತೆ ಮರಿ ಕೋಣಗಳು ಭಾಗವಹಿಸಿದ್ದವು.

ಪ್ರಸ್ತುತ ವರ್ಷಂಪ್ರತಿ ನಡೆಯುತ್ತಿರುವ ಕಂಬಳಗಳ ಜತೆಗೆ ಹೊಸದಾಗಿ ಕಂಬಳಗಳು ಆಯೋಜನೆ ಗೊಳ್ಳುತ್ತಿವೆ. ನಗರ ಪ್ರದೇಶಗಳಲ್ಲೂ ಹೆಚ್ಚು ಆಕರ್ಷಣೆ ಪಡೆಯುತ್ತಿದ್ದು, ಮಂಗಳೂರಿನ ಹೃದ¿ ಭಾಗದಲ್ಲಿ ನಡೆಯುತ್ತಿರುವ ಬಂಗ್ರಕೂಳೂರು ಕಂಬಳಕ್ಕೆ ಸೇರುತ್ತಿರುವ ಜನಸಮೂಹ ಇದಕ್ಕೆ ನಿದರ್ಶನ ವಾಗಿದೆ. ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೂಡೂರು-ಪಡೂರು ಕಂಬಳ ಮತ್ತೆ ಆರಂಭಗೊಂಡಿದೆ. ಮುಂದಿನ ವರ್ಷ ಹೊಸದಾಗಿ ಮೂಡುಬಿದಿರೆಯ ಪಣಪಿಲು, ಬಂಟ್ವಾಳ ತಾಲೂಕಿನ ಬೋಳಿಯಾರಿನಲ್ಲೂ ಕಂಬಳ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರತೀ ಕಂಬಳದಲ್ಲಿ 150ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸುತ್ತಿರುವುದು ಕಂಬಳ ಕ್ರೀಡೆಯ ಜನಪ್ರಿಯತೆಗೆ ಸಾಕ್ಷಿ.

140ಕ್ಕೂ ಅಧಿಕ ಮರಿಕೋಣಗಳು ತರಬೇತಿ ಪಡೆಯುತ್ತಿವೆ ಎಂದು ತೀರ್ಪುಗಾರ ವಿಜಯ ಕುಮಾರ್‌ ಕಂಗಿತ್ತಿಲು ತಿಳಿಸಿದ್ದಾರೆ.

ಕಂಬಳಕ್ಕೆ ಸಬ್‌ಜೂನಿಯರ್‌ ಕೋಣಗಳ ಪ್ರವೇಶ ಉತ್ತಮ ಬೆಳವಣಿಗೆ. ಕಂಬಳದ ಆಕರ್ಷಣೆ ವ್ಯಾಪಕವಾಗುತ್ತಿದ್ದು, ಕಂಬಳದ ಕೋಣಗಳನ್ನು ಸಾಕುವ ಒಲವು ಕೂಡ ಹೆಚ್ಚುತ್ತಿದೆ. ಮರಿ ಕೋಣಗಳು ತರಬೇತಾಗಿ ಮುಂದೆ ಜೂನಿಯರ್‌ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಳುತ್ತವೆ. ಜಿಲ್ಲಾ ಕಂಬಳ ಸಮಿತಿ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ.
– ಎರ್ಮಾಳು ರೋಹಿತ್‌ ಹೆಗ್ಡೆ ,
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.