ಟೆಸ್ಟ್ ಪಂದ್ಯಾಟ : ಪ್ರವಾಸಿ ಪಾಕಿಸ್ಥಾನ ಎದುರು ವಿಲಿಯಮ್ಸನ್ ಸೆಂಚುರಿ ನಂ. 23
Team Udayavani, Dec 27, 2020, 11:24 PM IST
ಮೌಂಟ್ ಮೌಂಗನುಯಿ: ನಾಯಕ ಕೇನ್ ವಿಲಿಯಮ್ಸನ್ ಅವರ 23ನೇ ಶತಕದೊಂದಿಗೆ ಮೆರೆದಾಡಿದ ನ್ಯೂಜಿಲ್ಯಾಂಡ್, ಪ್ರವಾಸಿ ಪಾಕಿಸ್ಥಾನ ಎದುರಿನ ಟೆಸ್ಟ್ ಪಂದ್ಯದಲ್ಲಿ 431 ರನ್ ಪೇರಿಸಿದೆ. ಬಳಿಕ ಪ್ರವಾಸಿಗರ ಒಂದು ವಿಕೆಟನ್ನು 30 ರನ್ನಿಗೆ ಕಿತ್ತು ಮೇಲುಗೈ ಸೂಚನೆ ನೀಡಿದೆ.
ಮೊದಲ ದಿನ 94ರಲ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿಲಿಯಮ್ಸನ್ 297 ಎಸೆತ ಎದುರಿಸಿ 129 ರನ್ ಮಾಡಿದರು. ಇದು ಅವರ 23ನೇ ಹಾಗೂ ಅತ್ಯಂತ ನಿಧಾನಗತಿಯ ಟೆಸ್ಟ್ ಶತಕ. 100 ರನ್ನಿಗಾಗಿ 261 ಎಸೆತ ಎದುರಿಸಿದರು. ಒಟ್ಟು 12 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಮೊದಲ ಓವರಿನಲ್ಲೇ ಬ್ಯಾಟ್ ಹಿಡಿದು ಬಂದಿದ್ದ ವಿಲಿಯಮ್ಸನ್, 105ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡರು.
ಇದು ನ್ಯೂಜಿಲ್ಯಾಂಡ್ನಲ್ಲಿ ಆಡಲಾದ ಕಳೆದ 10 ಟೆಸ್ಟ್ಗಳಲ್ಲಿ ವಿಲಿಯಮ್ಸನ್ ಬಾರಿಸಿದ 3ನೇ ಶತಕ. ಇದರಲ್ಲೆರಡು ದ್ವಿಶತಕವಾಗಿದೆ. ಜತೆಗೆ 3 ಅರ್ಧ ಶತಕವೂ ಸೇರಿದೆ.
ಇದನ್ನೂ ಓದಿ:ತೇಜಸ್ವಿ ಸೂರ್ಯ ಫುಟ್ಬಾಲ್ ಕಪ್ : ಪ್ರಭಾ 7ಎಸ್ ತಂಡ ಜಯಶಾಲಿ
42ರಲ್ಲಿ ನಾಟೌಟ್ ಆಗಿದ್ದ ಹೆನ್ರಿ ನಿಕೋಲ್ಸ್ 56 ರನ್ ಹೊಡೆದರೆ, ಕೀಪರ್ ಬ್ರಾಡ್ಲಿ ವಾಟ್ಲಿಂಗ್ 73 ರನ್ ಕೊಡುಗೆ ಸಲ್ಲಿಸಿದರು. ಪಾಕ್ ಪರ ಅಫ್ರಿದಿ 4, ಯಾಸಿರ್ ಶಾ 3 ವಿಕೆಟ್ ಉರುಳಿಸಿದರು.
ಪಾಕಿಸ್ಥಾನ ಆರಂಭಕಾರ ಶಾನ್ ಮಸೂದ್ (10) ವಿಕೆಟ್ ಕಳೆದುಕೊಂಡಿದೆ. 19 ರನ್ ಮಾಡಿದ ಅಬಿದ್ ಅಲಿ ಹಾಗೂ ಖಾತೆ ತೆರೆಯದ ನೈಟ್ ವಾಚ್ಮನ್ ಮೊಹಮ್ಮದ್ ಅಬ್ಟಾಸ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.