2ನೇ ವಾರಕ್ಕೆ ಗ್ರೂಫಿ ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ
Team Udayavani, Aug 28, 2021, 2:04 PM IST
ಕಳೆದ ವಾರ ತೆರೆಕಂಡಿದ್ದ ಬಹುತೇಕ ಹೊಸ ಪ್ರತಿಭೆಗಳ “ಗ್ರೂಫಿ’ ಚಿತ್ರ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಎರಡನೇ ವಾರಕ್ಕೆ
ಕಾಲಿಟ್ಟಿದೆ. ಮುಂದುವರೆದ ಕೋವಿಡ್ ಆತಂಕ, ವೀಕೆಂಡ್ ಲಾಕ್‌ಡೌನ್, ಶೇಕಡ ಐವತ್ತರಷ್ಟು ಪ್ರೇಕ್ಷಕರ ಪ್ರವೇಶಾತಿ ಇವೆಲ್ಲ ಸವಾಲುಗಳ ನಡುವೆಯೂ ತೆರೆಗೆ ಬಂದಿದ್ದ “ಗ್ರೂಫಿ’ಯ ಬಗ್ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲೂ ಚಿತ್ರದ ಬಗ್ಗೆ
ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಇದು ಸಹಜವಾಗಿಯೇ ಚಿತ್ರತಂಡದಲ್ಲಿ ಒಂದಷ್ಟುಕಾನ್ಫಿಡೆನ್ಸ್ ಹೆಚ್ಚಿಸಿದ್ದು, ಖುಷಿಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡುವ ನಿರ್ಮಾಪಕಕೆ. ಜಿ ಸ್ವಾಮಿ, “ಗ್ರೂಫಿ’ಯ ಸಬ್ಜೆಕ್ಟ್ ,ಕ್ಯಾಮರಾ, ಲೊಕೇಶನ್ಸ್, ಮ್ಯೂಸಿಕ್ ಎಲ್ಲದರ ಬಗ್ಗೆಯೂ ಆಡಿಯನ್ಸ್
ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಆಡಿಯನ್ಸ್ ಸಂಖ್ಯೆಕೂಡ ಹೆಚ್ಚಾಗುತ್ತಿದೆ. ಹೊಸಬರ ಸಿನಿಮಾಕ್ಕೆ ಆಡಿಯನ್ಸ್ ಕಡೆಯಿಂದ ಇಷ್ಟೊಂದು ಸಪೋರ್ಟ್ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.
ಬಿ ಮತ್ತು ಸಿ ಸೆಂಟರ್ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಸಿನಿಮಾ ರಿಲೀಸ್ ಮಾಡಲು ಬೇಡಿಕೆ ಬರುತ್ತಿದೆ. ಶೀಘ್ರದಲ್ಲಿಯೇ ಸಿಂಗಲ್ ಸ್ಕ್ರೀನ್
ಥಿಯೇಟರ್‌ಗಳನ್ನು “ಗ್ರೂಫಿ’ ರಿಲೀಸ್ ಮಾಡುವ ಯೋಚನೆ ಇದೆ’ ಎನ್ನುತ್ತಾರೆ. ಆದರೆ ಇದೇ ವೇಳೆ ಆಡಿಯನ್ಸ್ ಮೆಚ್ಚಿಕೊಳ್ಳುತ್ತಿದ್ದರೂ,
ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷೆಯ ಸಿನಿಮಾಗಳಿಂದಾಗಿ “ಗ್ರೂಫಿ’ಗೆ ಹೆಚ್ಚಿನ ಸ್ಕ್ರೀನ್‌ಗಳು ಸಿಗುತ್ತಿಲ್ಲ ಎಂಬ ಬೇಸರನ್ನು ಹೊರಹಾಕಿದೆ ಚಿತ್ರತಂಡ.
ಇದನ್ನೂ ಓದಿ:ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ: ಬಿಎಸ್‌ವೈ
“ಲಿಯಾ ಗ್ಲೋಬಲ್ ಮೀಡಿಯಾ’ ಬ್ಯಾನರ್‌ನಲ್ಲಿ ನಿರ್ಮಾಣವಾದ “ಗ್ರೂಫಿ’ಗೆ ಡಿ. ರವಿ ಅರ್ಜುನ್ ನಿರ್ದೇಶನವಿದೆ. ಆರ್ಯನ್, ಪದ್ಮಶ್ರೀ ಜೈನ್, ಗಗನ್, ಉಮಾ ಮಯೂರಿ, ಸಂದ್ಯಾ, ಪ್ರಜ್ವಲ್, ಶ್ರೀಧರ್, ಹನುಮಂತೇಗೌಡ, ಸಂಗೀತಾ, ರಘು ಪಾಂಡೇಶ್ವರ್,
ರಜನಿಕಾಂತ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.