ಆತ್ಮನಿರ್ಭರತೆಗಾಗಿ ಕಡಲಾಳದ ಗಣಿಗಾರಿಕೆ- ಕಡಲಾಳದ ಅನ್ವೇಷಣೆ ಕಾರ್ಯಾಗಾರದಲ್ಲಿ ಕಾಂತರಾವ್
Team Udayavani, Feb 16, 2024, 11:07 PM IST
ಮಂಗಳೂರು: ಭಾರತದ ವ್ಯಾಪ್ತಿಯ ಸಾಗರದ ಪ್ರತ್ಯೇಕ ಆರ್ಥಿಕ ವಲಯದಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪಗಳಿದ್ದು, ಅವುಗಳನ್ನು ಹೊರೆತೆಗೆದು ಉತ್ಪಾದನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಮುಂದಾಗಬೇಕು ಎಂದು ಕೇಂದ್ರ ಗಣಿ ಸಚಿವಾಲಯದ ಕಾರ್ಯದರ್ಶಿ ಕಾಂತರಾವ್ ಹೇಳಿದ್ದಾರೆ.
ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸಾಗರ ಮತ್ತು ಕರಾವಳಿ ಸಮೀಕ್ಷಾ ವಿಭಾಗದಿಂದ ಹಮ್ಮಿಕೊಳ್ಳಲಾದ “ಕಡಲಾಳದ ಅನ್ವೇಷಣೆಗಳು” ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಭಾರತದ ಭೂಭಾಗದಲ್ಲಿ 3 ಸಾವಿರಕ್ಕೂ ಅಧಿಕ ಬೃಹತ್ ಗಣಿಗಳು, 30 ಸಾವಿರಷ್ಟು ಸಣ್ಣ ಗಣಿಗಳು ಕಾರ್ಯವೆಸಗುತ್ತಿವೆ. ಭಾರತಕ್ಕೆ 20 ಲಕ್ಷ ಚದರ ಕಿ.ಮೀ.ನಷ್ಟು ವಿಶಾಲವಾದ ಪ್ರತ್ಯೇಕ ಆರ್ಥಿಕ ವಲಯ (ಎಕ್ಸ್‌ಕ್ಲೂಸಿವ್ ಇಕನಾಮಿಕ್ ಝೋನ್) ಇದ್ದು ಇದರಲ್ಲಿ ಖನಿಜ, ನಿರ್ಮಾಣಯೋಗ್ಯ ಮರಳು ಲಭ್ಯವಿದೆ. ಕಳೆದ 40 ವರ್ಷಗಳಿಂದ ಜಿಎಸ್‌ಐ ಈ ನಿಟ್ಟಿನಲ್ಲಿ ಕಡಲಾಳದ ಅನ್ವೇಷಣೆ ನಡೆಸುತ್ತಿದೆ, ಈಗಾಗಲೇ 35ರಷ್ಟು ಖನಿಜದ ಬ್ಲಾಕ್‌ಗಳನ್ನು ಗುರುತಿಸಿ ಸರಕಾರಕ್ಕೆ ನೀಡಿದೆ. ಪ್ರತೀ ವರ್ಷ ಇಂತಹ 4-5 ಬ್ಲಾಕ್‌ಗಳ ಅನ್ವೇಷಣೆ ನಡೆಯುತ್ತಿದೆ. ಈ ಬ್ಲಾಕ್‌ಗಳ ಸದ್ಬಳಕೆ ಮಾಡಿಕೊಳ್ಳಬೇಕು, ಅದಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇದನ್ನು ಬಳಸಿಕೊಂಡಾಗ ದೇಶಕ್ಕೆ ಪ್ರಯೋಜನ ಸಿಗಲಿದೆ ಎಂದರು.
ಯಾವುದೇ ಕೈಗಾರಿಕೆ ಸಾಗರದಾಳದ ಗಣಿಗಾರಿಕೆಗೆ ಮುಂದಾಗುವುದು ಸುಲಭ ಕಾರ್ಯವಲ್ಲ, ಅದಕ್ಕಾಗಿ ಸರಕಾರ ಸಹಕಾರ ನೀಡಲು ಸಿದ್ಧವಿದೆ, ವಿದೇಶದಿಂದ ಅಗತ್ಯ ನೆರವು ಬೇಕಾದರೂ ನೀಡಬಹುದು ಎಂದ ಅವರು ಕಡಲಾಳದ ಗಣಿಗಾರಿಕೆಗಾಗಿ ಕಡಲಾಳ ಪ್ರದೇಶ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಈ ಕಾಯ್ದೆ 20 ವರ್ಷ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ ಬಳಕೆಯಾಗಿರಲಿಲ್ಲ,
ಲೀಥಿಯಂ ಗಣಿಗಾರಿಕೆ ಮೂಲಕ ಆತ್ಮನಿರ್ಭರತೆ
ಪ್ರಸ್ತುತ ಇ-ವಾಹನಗಳಲ್ಲಿ ಅತ್ಯವಶ್ಯಕವಾದ ಲೀಥಿಯಂ ಬ್ಯಾಟರಿಗೆ ಲೀಥಿಯಂ ಆಮದಾಗುತ್ತಿದೆ, ಇದರಲ್ಲಿ ಆತ್ಮನಿರ್ಭರತೆ ಸಾಧಿಸುವ ಉದ್ದೇಶದಿಂದ ಕೇಂದ್ರವು ಸೂಕ್ಷ್ಮ ಖನಿಜವೆನಿಸಿರುವ ಲೀಥಿಯಂ ಗಣಿಗಾರಿಕೆ ಮಾಡಲು ಮುಂದಾಗಿದೆ. ಕಾಶ್ಮೀರದಲ್ಲಿ ಇದರ ಗಣಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕಾಂತರಾವ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.