ಭಾರಿ ಮಳೆಯಿಂದ ಕಪಿಲತೀರ್ಥಕ್ಕೆ ಜೀವ ಕಳೆ
Team Udayavani, Sep 28, 2020, 11:09 AM IST
ಹನುಮಸಾಗರ: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥವು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಕಲ್ಯಾಣ-ಕರ್ನಾಟಕದ ಜೋಗ ಜಲಪಾತಮಿನಿ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕಪಿಲತೀರ್ಥ ಈ ವರ್ಷವೂ ಮೈದುಂಬಿದೆ. ಸತತ ಬರಗಾಲದಿಂದ ಮಳೆಯನ್ನೆ ಕಾಣದೇ ಕುಡಿಯುವ ನೀರಿಗೆ ಪರಿತಪಿಸುತ್ತಿರುವ ಈ ಭಾಗದಲ್ಲಿ ಕಪೀಲ ತೀರ್ಥ ಎರಡನೇ ವರ್ಷವೂ ಧುಮುಕುತ್ತಿದ್ದು, ಜಲಪಾತಕ್ಕೆ ಜೀವ ಕಳೆ ಬಂದಿದೆ.ಇಲ್ಲಿ ನೀರು ಬಂದರೆ ಸುತ್ತಮುತ್ತಲಿನ ಕೊಪ್ಪಳ, ಬಾಗಲಕೋಟ, ಗದಗ ಜಿಲ್ಲೆಯ ಪ್ರವಾಸಿಗರು ಆಗಮಿಸುತ್ತಾರೆ. ಹನುಮಸಾಗರ ಸಮೀಪವಿರುವ ಈ ಕಬ್ಬರಗಿ ಕಪಲೆಪ್ಪನ ಜಲಪಾತ ಗುಡ್ಡಬೆಟ್ಟಗಳ ಮಧ್ಯೆ ಇದೆ. ಹಚ್ಚು ಹಸಿರಿನ ನಡುವೆ ಧುಮುಕುವ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಬಾರಿ ಸ್ವಲ್ಪ ತಡವಾಗಿ ಜಲಪಾತಕ್ಕೆ ಜೀವಕಳೆ ಬಂದಿದೆ.
ನೀರಿನ ಮೂಲ: ಕಪಿಲತೀರ್ಥ ಗುಡ್ಡವು ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು, ಬಾದಾಮಿಯಿಂದ ಬೆಳಗಾವಿಯವರೆಗೂ ಇದೆ. ಈ ಗುಡ್ಡಗಳ ಮೇಲೆ ವೆಂಕಟಾಪೂರ, ಗಾಣದಾಳ ಎಂಬ ಗ್ರಾಮಗಳು ಹಾಗೂ ನಡುವೆ ಬರುವ ಸಣ್ಣ ಕೆರೆಗಳು ಇವೆ. ಮಳೆಗಾಲದಲ್ಲಿ ಗುಡ್ಡದ ಮೇಲಿಂದ ಹರಿದು ಬರುವ ನೀರು ಕಪಿಲ ತೀರ್ಥದ ಬಳಿ ಸುಮಾರು 15-20 ಅಡಿ ಎತ್ತರದಿಂದ ಧರೆಗೆ ಧುಮುಕುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.