ಕಾರಟಗಿ ರೈಲ್ವೆ ನಿಲ್ದಾಣ ಹಸೀರಿಕರಣಗೊಳಿಸಿದ ಪತ್ತಾರ
Team Udayavani, Jun 5, 2022, 1:06 PM IST
ಕಾರಟಗಿ: ವೃತ್ತಿಯಲ್ಲಿ ಅಕ್ಕಸಾಲಿಗನಾಗಿದ್ದರೂ ಬಿಡುವಿನ ವೇಳೆ ಸದಾ ಹಸಿರು ಸೇವೆಯಲ್ಲಿ ನಿರತನಾಗಿರುವ ಪರಿಸರ ಪ್ರೇಮಿ. ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿ ವೀರಭದ್ರಪ್ಪ ಪತ್ತಾರ ಹಲವು ದಶಕಗಳಿಂದ ಅಕ್ಕಸಾಲಿಗ ವೃತ್ತಿ ಮಾಡುತ್ತ ಬಂದಿದ್ದು, ಇದರೊಂದಿಗೆ ಗ್ರಾಮದ ಸರಕಾರಿ ಶಾಲಾ-ಕಾಲೇಜ್, ಸೇರಿದಂತೆ ರೈಲ್ವೆ ನಿಲ್ದಾಣವನ್ನು ನಿಸ್ವಾರ್ಥವಾಗಿ ಹಸೀರಿಕರಣಗೊಳಿಸುವಲ್ಲಿ ಸತತವಾಗಿ ಶ್ರಮಿಸುತ್ತಿದ್ದಾರೆ.
ವೀರಭದ್ರಪ್ಪ ಪತ್ತಾರ ಬರಿ ಪರಿಸರ ಪ್ರೇಮಿ ಅಷ್ಟೇ ಅಲ್ಲ. ಶಿಕ್ಷಣ ಪ್ರೇಮಿಯೂ ಹೌದು. ಗ್ರಾಮದ ಹೊರವಲಯದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು ಕೆಲ ತಿಂಗಳ ಹಿಂದೆ ರೈಲ್ವೆ ಸಂಚಾರವೂ ಆರಂಭವಾಗಿದೆ. ರೈಲ್ವೆ ನಿಲ್ದಾಣದಲ್ಲಿ ಗಿಡ-ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಲಾಖೆ ವಿವಿಧ ಬಗೆಯ ಸಸಿಗಳನ್ನು ತಂದು ಇಟ್ಟಿದ್ದರು. ಆದರೆ ಎರಡ್ಮೂರು ದಿನಗಳಾದರೂ ಸಸಿ ನೆಟ್ಟಿರಲಿಲ್ಲ. ರೈಲ್ವೆ ನಿಲ್ದಾಣದ ಕಡೆ ನಿತ್ಯ ಹೊಗುತ್ತಿದ್ದ ವೀರಭದ್ರಪ್ಪ ಪತ್ತಾರ ಅವರು ಗಿಡಗಳು ಬಾಡುತ್ತಿರುವುದು ಕಂಡು ಸಂಬಂಧಿ ಸಿದವರನ್ನು ಭೇಟಿಯಾಗಿ ಅವುಗಳನ್ನು ನಾಟಿ ಮಾಡಿ ಪೋಷಿಸುತ್ತೇನೆ ಎಂದು ಕೇಳಿಕೊಂಡರು. ಅವರು ಒಪ್ಪಿಗೆ ಪಡೆದು ರೈಲ್ವೆ ನಿಲ್ದಾಣ ಇಕ್ಕೆಲಗಳಲ್ಲಿ ಸಸಿ ನಾಟಿ ಮಾಡಿ ಅವುಗಳನ್ನು ಪೋಷಿಸಿದರು.
ಅವುಗಳು ಈಗ ಬೆಳೆದು ಒಂದು ಹಂತಕ್ಕೆ ಬಂದಿದ್ದು, ರೈಲ್ವೆ ನಿಲ್ದಾಣಕ್ಕೆ ಬರುವ ಬರುವ ಪ್ರಯಾಣಿಕರಿಗೆ ಹಸಿರು, ಗಿಡ-ಮರಗಳು ಮನಸ್ಸಿಗೆ ಮದ ನೀಡುತ್ತಿವೆ. ಅಲ್ಲದೇ ವೀರಭದ್ರಪ್ಪ ಪತ್ತಾರ ಮೊದಲಿನಿಂದಲೂ ಮನೆಯ ಅಕ್ಕಪಕ್ಕ, ಶಾಲೆಗಳ ಆವರಣದಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಪಕ್ಷಿ ಸಂಕುಲವೂ ಹೆಚ್ಚಲಿ ಅವುಗಳು ಎಂಬ ದೃಷ್ಟಿಯಿಂದ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್ನಲ್ಲಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಿಕೊಳ್ಳಲು ಸಣ್ಣಸಣ್ಣ ಬಟ್ಟಲುಗಳಲ್ಲಿ ನೀರು ಇಡುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಜನತೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದು, ನಿಲ್ದಾಣದ ಹೊರಗೆ ಮತ್ತು ಒಳಗೆ ಕೂಡಲು ಪ್ರಶಾಂತವಾದ ಸ್ಥಳ, ಸೋಂಪಾದ ಗಾಳಿ ಬೀಸುತ್ತಿದ್ದರಿಂದ ಬೆಳಗ್ಗೆ ನಿಲ್ದಾಣದಲ್ಲಿ ಧ್ಯಾನ, ಯೋಗ ಮಾಡುತ್ತಾರೆ. ವಾಯುವಿಹಾರ ನಡೆಸುತ್ತಾರೆ.
ಮೊದಲಿನಿಂದಲೂ ಉತ್ತಮ ಪರಿಸರ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಹಾಗೆಯೇ ರೈಲ್ವೆ ನಿಲ್ದಾಣದಲ್ಲಿ ಗಿಡಮರಗಳನ್ನು ಬೆಳೆಸಿ ಪ್ರಯಾಣಿಕರಿಗೆ ನೆರಳು, ಶುದ್ಧ ಗಾಳಿ ಸಿಗಲಿ, ಪಕ್ಷಿ ಸಂಕುಲ ಬೆಳೆಯಲಿ ಎಂಬ ಉದ್ದೇಶದಿಂದ ಸ್ವಯಂ ಪ್ರೇರಿತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥ ಇಲ್ಲ. ಯಾರಿದಂಲೂ ನಾನು ಯಾವುದೇ ಸಹಾಯ ಪಡೆದಿಲ್ಲ. ಯಾರು ಸಹಾಯ ಮಾಡಲು ಬಂದಿಲ್ಲ. ಸಿದ್ದಾಪುರ ರೈಲ್ವೆ ನಿಲ್ದಾಣ ಮಾದರಿ ನಿಲ್ದಾಣವನ್ನಾಗಿ ಮಾಡಬೇಕೆಂಬುದು ನನ್ನ ಆಶಯ ವೀರಭದ್ರಪ್ಪ ಪತ್ತಾರ, ಪರಿಸರ ಪ್ರೇಮಿ
ದಿಗಂಬರ ಎನ್. ಕುರ್ಡೆಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.