ಕಾರ್ಗಿಲ್ ಯುದ್ಧವಲ್ಲ ; ಅದು ಭಾರತೀಯರೆಲ್ಲರ ಭಾವನೆ
Team Udayavani, Jul 26, 2020, 10:05 AM IST
1999ರ ಜುಲೈ 26, ಭಾರತದ ಅವಿಚ್ಛಿನ್ನ ನೆಲವಾದ ಕಾರ್ಗಿಲ್ ಗಿರಿಶ್ರೇಣಿಗಳ ಮೇಲೆ ಕೃತ್ರಿಮದಿಂದ ಕಾಲಿಟ್ಟ ಪಾಕಿಸ್ಥಾನಿ ಸೇನೆಯನ್ನು ಅಟ್ಟಾಡಿಸಿ ಓಡಿಸಿದ ಭಾರತೀಯ ಸೇನೆ ವಿಜಯದುಂದುಭಿ ಮೊಳಗಿಸಿದ ದಿನ ಇದು. ಈ ಕದನದಲ್ಲಿ ತಾವು ಜನಿಸಿದ ಪುಣ್ಯ ಭೂಮಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಯೋಧರೆಷ್ಟೋ. ಇಂದು ಅವರನ್ನೆಲ್ಲ ನೆನೆಯುವ ದಿನ.
ಅವ್ಯಕ್ತ ಭಾವನೆ
ಇತಿಹಾಸ ಎಂದಿಗೂ ಮರೆಯಲಾರದಂಥ ಘಟನೆ ಕಾರ್ಗಿಲ್. ಒಟ್ಟು 150 ಕಿ.ಮೀ. ವ್ಯಾಪ್ತಿಯ ಸೀಮಿತ ಪ್ರದೇಶದಲ್ಲಿ ಎರಡು ದೇಶಗಳ ನಡುವೆ ನಡೆದ ಹೋರಾಟ ಅದು. ಹಿಂದೆ ನಡೆದ ಎಷ್ಟೋ ಯುದ್ಧಗಳಿಗಿಂತ ಈ ಯುದ್ಧ ರೋಚಕವಾದುದು. “ಕಾರ್ಗಿಲ್’ ಎಂಬ ಹೆಸರು ಕೇಳಿದರೆ ಸಾಕು, ಪ್ರತಿಯೊಬ್ಬರ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳು ಉಕ್ಕಿ ಹರಿಯುತ್ತವೆ.
ಯಾಕೆ ನಡೆಯಿತು?
ಆರಂಭದಿಂದಲೂ ಭಾರತದ ವಿರುದ್ಧ ಪ್ರತ್ಛನ್ನ ಸಮರ ನಡೆ ಸುತ್ತಲೇ ಬಂದಿದ್ದ ಪಾಕಿಸ್ಥಾನ ಜಮ್ಮು-ಕಾಶ್ಮೀರ ಗಡಿಯಲ್ಲಿ
ನಿರಂತರವಾಗಿ ಕದನ ವಿರಾಮ, ಶಾಂತಿ ಒಪ್ಪಂದ ಉಲ್ಲಂ ಸುತ್ತಲೇ ಬಂದಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಎರಡೂ ದೇಶಗಳ ಸೈನಿಕರ ನಡುವೆ ಗುಂಡಿನ ಚಕಮಕಿ ಸರ್ವೇ ಸಾಮಾನ್ಯವಾಗಿತ್ತು. ಇಂಥ ಪರಿಸ್ಥಿತಿಯ ನಡುವೆಯೇ 1999ರ ಮಾರ್ಚ್ ತಿಂಗಳಿನಲ್ಲಿ ಕಾರ್ಗಿಲ್ ಪ್ರದೇಶದಲ್ಲಿ ಪಾಕ್ ಸೈನಿಕರು ಅಂತಾರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ನುಸುಳಿರುವ ಬಗೆಗೆ ಸ್ಥಳೀಯ ಕುರಿಗಾಹಿಗಳಿಂದ ಭಾರತೀಯ ಸೇನೆಗೆ ಮಾಹಿತಿ ಲಭಿಸಿತು. ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್ಟ್‌ಗಳ ಮುಖಾಂತರ ಸಿಯಾಚಿನ್ ಗಡಿವರೆಗೂ ನುಸುಳುವಿಕೆಗೆ ಪ್ರಯತ್ನಗಳು ಅವ್ಯಾಹತವಾಗಿ ಮುಂದುವರಿದವು. ಇದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಪಾಕ್ ತನ್ನ ದುಷ್ಕೃತ್ಯವನ್ನು ಸಮರ್ಥಿಸಿದ್ದೇ ಅಲ್ಲದೆ ಯುದ್ಧಕ್ಕೆ ಸಿದ್ಧ ಎಂಬ ಅಲ್ಲಿನ ನಾಯಕರ ಹೇಳಿಕೆಗಳು ಉಭಯ ರಾಷ್ಟ್ರಗಳ ನಡುವೆ ಯುದ್ಧಕ್ಕೆ ನಾಂದಿಯಾಯಿತು.
ಏಕಾಂಗಿಯಾದ ಪಾಕ್
ಪಾಕ್‌ನ ಪರಮಾಪ್ತ ರಾಷ್ಟ್ರಗಳಾಗಿದ್ದ ಚೀನ ಮತ್ತು ಅಮೆರಿಕ ಕಾರ್ಗಿಲ್ ಕದನದ ಸಂದರ್ಭ ಅದರ ನೆರವಿಗೆ ಬರಲಿಲ್ಲ. ವಿಪರ್ಯಾಸ ಎಂದರೆ ಈ ದೇಶಗಳು ಪಾಕ್‌ಗೆ ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ರಫ್ತು ಮಾಡಿದ್ದವು. ಗಡಿಯಲ್ಲಿ ಹೋರಾಟ ಮುಂದುವರಿಯುತ್ತಾ ಸಾಗಿತ್ತು. ಭಾರತದ ಶಕ್ತಿ-ಸಾಮರ್ಥ್ಯ ಅರಿತಿದ್ದ ಪಾಕ್‌ನ ಒಂದು ಸೇನಾ ತುಕಡಿ (ಎನ್‌ಎಲ…ಐ) ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಇದು ಪಾಕ್ ಸೇನೆ ಯಲ್ಲಿನ ಭಿನ್ನಮತಕ್ಕೆ ಕನ್ನಡಿ ಹಿಡಿಯಿತು. ಇದರ ಫಲವಾಗಿ ಪಾಕಿಸ್ಥಾನಿ ಸೈನಿಕರು ಬರಿಗೈಯಲ್ಲಿ ಕಾರ್ಗಿಲ್ ಪ್ರದೇಶದಿಂದ ಹಿಂದೆ ಸರಿಯಲೇಬೇಕಾಯಿತು. ಈ ಮೂಲಕ ಭಾರತದ ತಿರಂಗ ಧ್ವಜ ಕಾರ್ಗಿಲ್ ಶಿಖರಾಗ್ರದಲ್ಲಿ ಹಾರಿಸಲ್ಪಟ್ಟು ದೇಶದ ಶಕ್ತಿ, ಸಾಮರ್ಥ್ಯ ಇಡೀ ವಿಶ್ವಕ್ಕೆ ತಿಳಿಯುವಂತಾಯಿತು.
3ತಿಂಗಳ ಸತತ ಯುದ್ಧ
ಸರಿ ಸುಮಾರು 3 ತಿಂಗಳುಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 500ಕ್ಕೂ ಅಧಿಕ ಮಂದಿ ಭಾರತೀಯ ಯೋಧರು
ಹುತಾತ್ಮರಾದರು. ಪಾಕಿಸ್ಥಾನ ಬಣದಲ್ಲಿ ಸುಮಾರು 656 ಸೈನಿಕರು ಹತರಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ ಯೋಧರು, ಮುಜಾಹಿದೀನ್‌ಗಳು ಮತ್ತು ನುಸುಳುಕೋರರ ಸಹಿತ ಪಾಕಿಸ್ಥಾನದ ಸುಮಾರು 3,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಆದರೆ ಪಾಕಿಸ್ಥಾನ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದಲ್ಲಾದ ಪ್ರಾಣಹಾನಿ ಬಗೆಗಿನ ಅಂಕಿ ಅಂಶವನ್ನು ಇನ್ನೂ ಗುಟ್ಟಾ ಗಿಯೆ ಇಟ್ಟಿದೆ. ಭಾರತೀಯ ಸೇನೆಯ ಈ ಪರಾಕ್ರಮ ದೇಶ ಮಾತ್ರವಲ್ಲದೆ ಇಡೀ ವಿಶ್ವ ಸಮುದಾಯದ ಪ್ರಶಂಸೆಗೆ ಪಾತ್ರವಾಯಿತಲ್ಲದೆ ಕುತಂತ್ರಿ ಪಾಕಿಸ್ಥಾನ ತೀವ್ರ ಮುಖಭಂಗ ಅನುಭವಿಸಿತು.
ದ್ರಾಸ್‌ನಲ್ಲಿ ಕಾರ್ಗಿಲ್ ಕದನ ಚಿತ್ರಣ
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರ ನೆನಪಿಗಾಗಿ ಭಾರತೀಯ ಸೇನೆ ದ್ರಾಸ್ ಪಟ್ಟಣದಲ್ಲಿ ಸ್ಮಾರಕ ವೊಂದನ್ನು ನಿರ್ಮಿಸಿದೆ. ಇದು ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ-1ಡಿ ಸಮೀಪದಲ್ಲಿದ್ದು ನಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಇದು “ಟೈಗರ್ ಹಿಲ್’ನ ಸನಿಹವೇ ಇದ್ದು, 1999ರ ಯುದ್ಧ ನೆನಪು ಇಲ್ಲಿ ಇಂದಿಗೂ ಜೀವಂತ.
ವಿಶೇಷತೆ: ಸ್ಮಾರಕದ ಗೋಡೆಗಳನ್ನು ಗುಲಾಬಿ ಬಣ್ಣದ ಕಲ್ಲುಗಳಿಂದ ಕಟ್ಟಲಾಗಿದೆ. ಇದು ಹಿತ್ತಾಳೆ ತಟ್ಟೆ ಹೊಂದಿದ್ದು, ಇದರಲ್ಲಿ “ಆಪ ರೇಷನ್ ವಿಜಯ್’ ಸಂದರ್ಭ ಹುತಾತ್ಮರಾದ ಯೋಧರ ಹೆಸರುಗಳನ್ನು ಕೆತ್ತಲಾಗಿದೆ. ಮರಣೋತ್ತರ ವಾಗಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದ ಕ್ಯಾಪ್ಟನ್ ಮನೋಜ್ ಪಾಂಡೆ ಅವರ ಗ್ಯಾಲರಿಯೂ ಇಲ್ಲಿದೆ.
2012ರಲ್ಲಿ “ಭಾರತೀಯ ಧ್ವಜ ಪ್ರತಿಷ್ಠಾನ’ಇಲ್ಲಿ ಧ್ವಜಸ್ತಂಭ ಸ್ಥಾಪಿಸಿದೆ. 2014ರ ನವೆಂಬರ್‌ನಲ್ಲಿ ಸ್ಮಾರಕ ನಿರ್ಮಾಣ ಗೊಂಡಿತು. “ವಿಜಯ್ ಪಥ್’ ಎಂದೂ ಕರೆ ಯಲ್ಪಡುವ ಇದು ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರತೀ ವರ್ಷ ದ್ರಾಸ್‌ನ ಈ ಯುದ್ಧ ಸ್ಮಾರಕಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡಿ ಕಾರ್ಗಿಲ್ ಯುದ್ಧದ ಚಿತ್ರಣವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ.
ಯುದ್ಧ ನೆನಪಿಸುವ ಮ್ಯೂಸಿಯಂ: ದ್ರಾಸ್ ಸ್ಮಾರಕದ ಸಮೀಪದ ಮ್ಯೂಸಿಯಂನಲ್ಲಿ ಹುತಾತ್ಮರಾದ ಭಾರತೀಯ ಯೋಧರ ಭಾವಚಿತ್ರ, ಯುದ್ಧಕ್ಕೆ ಸಂಬಂಧ ಪಟ್ಟ ದಾಖಲೆಗಳು, ಯುದ್ಧ ಸಂದರ್ಭ ಪಾಕ್ ಪಡೆಗಳಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಸಂರಕ್ಷಿಸಿಡಲಾಗಿದೆ. ಕಾರ್ಗಿಲ್ ಕದನವನ್ನು ನಮ್ಮ ಸೇನೆ ಹೇಗೆ ಎದುರಿಸಿತು ಎನ್ನುವುದರ ಸಮಗ್ರ ಮಾಹಿತಿಯೂ ಪ್ರವಾಸಿಗರಿಗೆ ಇಲ್ಲಿ ಲಭ್ಯ. ಜತೆಗೆ ನಿಯಮಿತವಾಗಿ ಯುದ್ಧದ ಕುರಿತಾದ ಸಾಕ್ಷ್ಯ ಚಿತ್ರವನ್ನೂ ಪ್ರದರ್ಶಿಸಲಾಗುತ್ತದೆ. ಇನ್ನು ಮರಳಿನಿಂದ ಮಾಡಿದ ಯುದ್ಧ ಭೂಮಿಯ ಮಾದರಿಯು ಅಲ್ಲಿನ ಕಠಿನ ಭೂ ಭಾಗದ ಚಿತ್ರಣವನ್ನು ಒದಗಿಸುತ್ತದೆ.
ಕಾರ್ಗಿಲ್ ವಿಜಯ ಎಂದೆಂದೂ ಭಾರತೀಯರ ಪಾಲಿನ ಹೆಮ್ಮೆಯ ದಿನ
ಕಾರ್ಗಿಲ್, ಭಾರತದ ಇತಿಹಾಸ ಪುಟ ಗಳಲ್ಲಿ ಸಂಭ್ರಮಿಸುವ ಹೆಸರಿದು. ವೈರಿ ರಾಷ್ಟ್ರ ಪಾಕಿಸ್ಥಾನವನ್ನು ಹಿಮ್ಮೆಟ್ಟಿಸಿ ನಾವು ಗಳಿಸಿದ ವಿಜಯದ ದಿನ. ಈ ಕದನ ಕಥನದ ನಡುವೆಯೂ ಕಾರ್ಗಿಲ್ ಎಂಬ ಪುಟ್ಟ ಪಟ್ಟಣವೊಂದು ಈಗ ಸಾಕಷ್ಟು
ಸುಧಾರಣೆ ಕಂಡು ಬೆಳೆದು ನಿಂತಿದೆ.
ಶ್ರೀನಗರ-ಲೇಹ್‌ನ ನಡುವೆ ಸಿಗುವ ಪಟ್ಟಣವೇ ಕಾರ್ಗಿಲ್. ಶ್ರೀನಗರದಿಂದ ಸುಮಾರು 205 ಕಿ.ಮೀ. ದೂರದಲ್ಲಿದೆ. ಕಾರ್ಗಿಲ್ 2.5 ಚದರ ಅಡಿಯಲ್ಲಿ ಹರಡಿಕೊಂಡಿರುವ ಚಿಕ್ಕ ಪಟ್ಟಣ. ಸಮುದ್ರ ಮಟ್ಟದಿಂದ ಸುಮಾರು 9 ಸಾವಿರ ಅಡಿ ಎತ್ತರದಲ್ಲಿದೆ.
ನಾನು ಕಾರ್ಗಿಲ್‌ನಲ್ಲಿದ್ದದ್ದು 1980ರ ದಶಕದಲ್ಲಿ. ಕೆಲಸದ ನಿಮಿತ್ತ ಸ್ವಲ್ಪ ದಿನ ಉಳಿಯುವ ಅವಕಾಶ ಸಿಕ್ಕಿತ್ತು. ಆಗ ಸರಿಯಾದ ರಸ್ತೆಯಾಗಲಿ, ಸಂವಹನ ಸೌಲಭ್ಯವಾಗಲಿ ಇರಲಿಲ್ಲ. ಗುಡ್ಡಗಳಲ್ಲೇ ಮನೆಗಳು, ಕುರಿ, ಯಾಕ್ ಪ್ರಾಣಿ ಸಾಕಣೆೆಯೊಂದಿಗೆ ಬದುಕು ಕಟ್ಟಿಕೊಳ್ಳುತ್ತಿದ್ದ ಮುಗ್ಧ ಜನರು ಅಲ್ಲಿನ ಸೌಂದರ್ಯ ಮುಕುಟಗಳು. ಆದರೆ ಈಗ ತುಂಬಾ ಸುಧಾರಣೆಯಾಗಿದೆ. ಶಾಲೆ, ಸಂವಹನ ಮಾಧ್ಯಮಗಳು, ಶಾಪಿಂಗ್ ಮಾಲ್‌ಗಳೊಂದಿಗೆ ತುಂಬಾ ಬೆಳೆದಿದೆ ಕಾರ್ಗಿಲ್. ಚಳಿಗಾಲದಲ್ಲಿ ಮೈ ಕೊರೆಯುವಂಥ ಮೈನಸ್ 20 ಡಿಗ್ರಿ ಸೆಲ್ಸಿಯಸ್ ಚಳಿ ಅಲ್ಲಿರುತ್ತದೆ.
ಅತ್ಯುತ್ತಮ ಕಾನೂನು ಸುವ್ಯವಸ್ಥೆ: ಕಾರ್ಗಿಲ್‌ನ ಕಾನೂನು ಸುವ್ಯವಸ್ಥೆ ಅಂದಿಗೂ, ಇಂದಿಗೂ ಮಾದರಿಯಾಗಿರುವಂಥದ್ದು. ಯಾವುದೇ ಅಪರಾಧಗಳು ನಡೆಯುವುದಿಲ್ಲ. ತುಂಬಾ ಸಭ್ಯ ನಾಗರಿಕರನ್ನು ಹೊಂದಿರುವ ಪಟ್ಟಣ. 1999ರ ಬಳಿಕ ಅಲ್ಲಿ ಜನ ನಿಶ್ಚಿಂತೆಯಿಂದ ಬದುಕು ಸಾಗಿಸುತ್ತಿದ್ದಾರೆ.
ಜು.26-ಭಾರತೀಯರ ಹೆಮ್ಮೆಯ ದಿನ: 1999ರ ಜು. 26 ಎಲ್ಲ ಭಾರತೀಯರ ಪಾಲಿಗೆ ಹೆಮ್ಮೆಯ ದಿನ. ಭಾರತದ ಸೊತ್ತಾದ ಕಾರ್ಗಿಲ್ ಪ್ರದೇಶವನ್ನು ಅನ್ಯಾಯವಾಗಿ ವಶಪಡಿಸಿಕೊಳ್ಳಲು ಯತ್ನಿಸಿದ್ದ ಪಾಕಿಸ್ಥಾನದ ಸೇನಾ ಪಡೆಗಳನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ ದಿನ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸದಿದ್ದರೂ ಕಾರ್ಗಿಲ್ ಆಸುಪಾಸಿನಲ್ಲೇ ಕೆಲಸ ಮಾಡಿದ ಅನುಭವ ನನ್ನ ಮಟ್ಟಿಗೆ ಅತ್ಯಂತ ಸ್ಮರಣೀಯ.
ಆಪರೇಷನ್ ವಿಜಯ್: 1984ರಲ್ಲಿ ಭಾರತೀಯ ಸೇನೆ “ಆಪರೇಷನ್ ಮೇಘಧೂತ್’ ಕೈಗೊಂಡು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿದ ಪರಿಣಾಮ ಶಾಶ್ವತವಾಗಿ ಕಾರ್ಗಿಲ್ ನಮ್ಮ ವಶ ವಾಯಿತು. ಆಮೇಲೆ 1987, 1989ರಲ್ಲಿ ಕಾರ್ಗಿಲ್ ಅನ್ನು ಮರು ವಶಪಡಿಸಿಕೊಳ್ಳಲು ಪಾಕ್ ಪಡೆ ನಡೆಸಿದ ಯತ್ನ ಫಲಿಸಲಿಲ್ಲ. 1999 ಮೇ ನಲ್ಲಿ “ಆಪರೇಷನ್ ಖದರ್’ ಹೆಸರಿನಲ್ಲಿ ಮತ್ತೆ ಶತ್ರು ರಾಷ್ಟ್ರ ಕಾರ್ಗಿಲ್‌ಗಾಗಿ ಹೊಂಚು ಹಾಕಿತ್ತು. ಅನ್ಯಾಯವಾಗಿ ನುಸುಳಿದ ಪಾಕ್‌ನಿಂದಾಗಿ ಈ ವೇಳೆ ಕ್ಯಾ| ಸೌರವ್ ಕಾಲಿಯಾ ಸಹಿತ ಕೆಲವು ಸೈನಿಕರು ವೀರ ಮರಣವನ್ನಪ್ಪಿದ್ದರು. ಆ ಬಳಿಕ ಭಾರತೀಯ ಸೇನೆ “ಆಪರೇಷನ್ ವಿಜಯ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರ್ಗಿಲ್ ಸಂಪೂರ್ಣ ನಮ್ಮ ವಶವಾಯಿತು. ಜು. 26ಕ್ಕೆ ಸಂಪೂರ್ಣ ಪಾಕ್ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿತು. ಹಾಗಾಗಿ ನಮ್ಮ ಪಾಲಿಗೆ “ವಿಜಯ ದಿವಸ’ವಾಯಿತು. ಭಾರತೀಯ ಸೇನೆ ಸರ್ವಕಾಲಕ್ಕೂ ಸನ್ನದ್ಧ ಮತ್ತು ಸರ್ವ ರೀತಿಯಿಂದಲೂ ಸಮರ್ಥ.
-ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ನಿವೃತ್ತ ಕಮಾಂಡಿಂಗ್ ಆಫೀಸರ್, 3ನೇ ಮಿಲಿಟರಿ ರೆಜಿಮೆಂಟ್
ಸೇನೆಯ ಬಲವೃದ್ಧಿ , ಸುಧಾರಣೆಗೆ ಆಸ್ಪದ
ಭಾರತೀಯ ಪ್ರದೇಶವನ್ನು ಅತಿಕ್ರಮಿಸಿದ್ದ ಪಾಕ್ ಪಡೆಗಳನ್ನು “ಆಪರೇಷನ್ ವಿಜಯ್’ ಮೂಲಕ ಹಿಮ್ಮೆಟ್ಟಿಸಲಾಯಿತೇನೋ ನಿಜ. ಆದರೆ ಈ ಯುದ್ಧವು ಭಾರತೀಯ ಸೇನೆಯಲ್ಲಿ ಆಗಬೇಕಾಗಿದ್ದ ಬದಲಾವಣೆಗಳು, ಗಡಿಯಲ್ಲಿ ಬಲವೃದ್ಧಿ, ಸೇನೆಯ ಆಧುನೀಕರಣ, ಯುದ್ಧ ಸನ್ನದ್ಧತೆಯ ಹೆಚ್ಚಳದಂತಹ ಗಮನಾರ್ಹ ಅಗತ್ಯಗಳನ್ನು ಮುನ್ನೆಲೆಗೆ ತಂದಿತು.
ಕಾರ್ಗಿಲ್ ಯುದ್ಧ ಮುಗಿದ ಮೂರೇ ದಿನಗಳಲ್ಲಿ ವಾಜಪೇಯಿ ನೇತೃತ್ವದ ಅಂದಿನ ಕೇಂದ್ರ ಸರಕಾರವು ಯುದ್ಧದ ಬಗ್ಗೆ ವರದಿ ನೀಡಲು ಕೆ. ಸುಬ್ರಹ್ಮಣ್ಯಂ ನೇತೃತ್ವದ ಕಾರ್ಗಿಲ್ ರಿವ್ಯೂ ಕಮಿಟಿಯನ್ನು ನೇಮಿಸಿತು. ಸಮಿತಿಯು ಈ ಎಲ್ಲ ಅಂಶಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಿತ್ತು.
ಸಮಿತಿ ಶಿಫಾರಸು ಮಾಡಿದ ಅಂಶಗಳಲ್ಲಿ ಇಂಟೆಲಿಜೆನ್ಸ್ ಕೋಆರ್ಡಿನೇಶನ್ ಗ್ರೂಪ್ ಮತ್ತು ತಾಂತ್ರಿಕ ಬೇಹು ವಾರ್ತೆಗಳ ಮೇಲೆ ನಿಗಾ ಇರಿಸುವ ಟೆಕ್ನಿಕಲ್ ಕೋಆರ್ಡಿನೇಶನ್ ಗ್ರೂಪ್ ರಚನೆ, ದಿ ಏವಿಯೇಶನ್ ರಿಸರ್ಚ್ ಸೆಂಟರ್ ಸ್ಥಾಪನೆ ಸೇರಿದ್ದು, ಇವೆಲ್ಲವೂ ಇಂದು ನನಸಾಗಿವೆ. ಹಾಗೆಯೇ ಭಾರತದ ಸಮಗ್ರ ಗಡಿ ನಿಭಾವಣೆಯನ್ನು ಒಂದು ಗಡಿ- ಒಂದು ಪಡೆ ಸೂತ್ರದಡಿ ತರಲಾಗಿದೆ.
ಅಂಡಮಾನ್ ನಿಕೋಬಾರ್‌ನಲ್ಲಿ ಭಾರತೀಯ ಸೇನಾನೆಲೆಯನ್ನು ಬಲಪಡಿಸುವ ಶಿಫಾರಸಿನಂತೆ ಫೋಟ್ರೆìಸ್ ಅಂಡಮಾನ್ ನಿಕೋಬಾರ್ (ಎಫ್ಒಆರ್‌ಟಿಎಎನ್)ನ್ನು ಈಸ್ಟರ್ನ್ ನೇವಲ್ ಕಮಾಂಡ್‌ನಿಂದ ಪ್ರತ್ಯೇಕಗೊಳಿಸಿ ಸ್ವತಂತ್ರ
ಅಂಡಮಾನ್ ನಿಕೋಬಾರ್ ಕಮಾಂಡ್ ಆಗಿ ರೂಪಿಸಲಾಯಿತು. ಇವೆಲ್ಲದರ ಜತೆಗೆ ಸರಕಾರವು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ದೀರ್ಘವ್ಯಾಪ್ತಿಯ ಕ್ಷಿಪಣಿಗಳಿಗಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್, ಮೂರೂ ಪಡೆಗಳ ಗುಪ್ತಚರ ಸಂಸ್ಥೆ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ (ಡಿಐಎ), ಯುದ್ಧ ಸಾಮಗ್ರಿ, ಶಸ್ತ್ರಾಸ್ತ್ರ ಮತ್ತಿತರ ಸೇನಾ ಪರಿಕರ ಖರೀದಿಗಾಗಿ ಡಿಫೆನ್ಸ್ ಪ್ರೊಕ್ಯೂರ್‌ವೆುಂಟ್ ಬೋರ್ಡ್ ರಚಿಸಿತು. ಇವೆಲ್ಲಕ್ಕಿಂತ ಮಿಗಿಲಾಗಿ 15 ವರ್ಷಗಳ ಅವಧಿಯ ಸಮಗ್ರ ಲಾಂಗ್ ಟರ್ಮ್ ಇಂಟಿಗ್ರೇಟೆಡ್ ಪರ್‌ಸ್ಪೆಕ್ಟಿವ್ ಪ್ಲ್ರಾನ್ (ಎಲ್‌ಟಿಐಪಿಪಿ)ಅನ್ನೂ ರೂಪಿಸಿತು.
ಈಗ ಎಲ್‌ಎಸಿ ಇರಲಿ, ಎಲ್‌ಒಸಿ ಇರಲಿ, ಶತ್ರುಗಳು ಒಂದು ಹೆಜ್ಜೆ ಮುಂದಕ್ಕೆ ಇರಿಸಿದರೂ ಮಾಹಿತಿ ನೀಡುವಂಥ ಕೃತಕ ಉಪಗ್ರಹದ ನೆರವು ಭಾರತಕ್ಕಿದೆ. ಎಲ್‌ಒಸಿಯನ್ನು ಪೂರ್ಣ ಮುಳ್ಳು ತಂತಿ ಬೇಲಿ, ಸೆನ್ಸರ್‌ಗಳಿಂದ ಮುಚ್ಚಲಾಗಿದೆ.
ಆರ್ಟಿಲರಿ ಫಿರಂಗಿಗಳು, ಟಿ-90 ಭೀಷ್ಮನಂಥ ಟ್ಯಾಂಕ್‌ಗಳು, ರಫೇಲ್ ಯುದ್ಧ ವಿಮಾನಗಳು, ಸಮರ ಹೆಲಿಕಾಪ್ಟರ್‌ಗಳು, ಸ್ವದೇಶೀ ಯುದ್ಧ ವಿಮಾನಗಳು ಭಾರತೀಯ ಸೇನೆಯ ಬತ್ತಳಿಕೆ ಸೇರಿವೆ. ಭಾರತೀಯ ರಕ್ಷಣಾ ಬಜೆಟ್ ಕೂಡ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.