Karkala: ಬೋಳ ಶ್ರೀ ವರ್ಧಮಾನಸ್ವಾಮಿ ಬಸದಿ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ನಿರ್ಬಂಧ
Team Udayavani, Sep 17, 2024, 7:13 PM IST
ಕಾರ್ಕಳ: ಬೋಳ ಶ್ರೀ ವರ್ಧಮಾನ ಸ್ವಾಮಿಯ ಬಸದಿಯ ಹೆಸರಿನಲ್ಲಿ ಹಣ ಸಂಗ್ರಹಿಸುವುದಕ್ಕೆ ನಿರ್ಬಂಧಿಸಿ ಕಾರ್ಕಳ ಹಿರಿಯ ನ್ಯಾಯಾಲಯ ಆದೇಶಿಸಿದೆ.
ಪುರಾತನ ಬೋಳ ಶ್ರೀ ವರ್ಧಮಾನಸ್ವಾಮಿ ಬಸದಿಯ ಆಡಳಿತಗಾರರಾದ ಪ್ರವೀಣ್ ಕುಮಾರ್ ಅಗರಿ, ಸತೀಶ್ ಅಗರಿ ಮತ್ತು ನಿಧಿ ಮಿಥುನ್ ಅವರು ತಮ್ಮ ಕುಟುಂಬದ ಆಡಳಿತದಲ್ಲಿರುವ ಈ ಬಸದಿಯ ಜೀರ್ಣೋದ್ಧಾರ ಕೆಲಸಕ್ಕೆ ಅಡಿ ಮಾಡುತ್ತಿದ್ದಾರೆ. ಅಲ್ಲದೆ ಬಸದಿಯ ಜೀರ್ಣೋದ್ಧಾರದ ಹೆಸರು ಹೇಳಿಕೊಂಡು ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿಕೊಂಡು ಹಣ ಕೇಳುತ್ತಿದ್ದಾರೆ ಎಂದು ಬಸದಿಯ ಅರ್ಚಕ ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಅವರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ಕಾರ್ಕಳದ ಹಿರಿಯ ನ್ಯಾಯಾಲಯವು ಸೆ. 12ರಂದು ನೀಡಿದ ಆದೇಶದಲ್ಲಿ ವರ್ಧಮಾನ ಇಂದ್ರ ಮತ್ತು ಮಹಾವೀರ ಇಂದ್ರ ಅವರು ಬಸದಿಯ ನಿರ್ವಹಣೆ, ಆಡಳಿತ ಮತ್ತು ಜೀರ್ಣೋದ್ಧಾರ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದನ್ನು ಅಥವಾ ಮಧ್ಯ ಪ್ರವೇಶಿಸುವುದನ್ನು ನಿರ್ಬಂಧಿಸಿ ತಡೆಯಾಜ್ಞೆ ನೀಡಿದೆ. ಮಾತ್ರವಲ್ಲದೆ ಅವರ ಮೂಲಕ ಕ್ರೈಮ್ ಮಾಡುವ ಎಲ್ಲ ವ್ಯಕ್ತಿಗಳು ಹಾಗೂ ಬ್ಯಾನರ್‌ಗಳ ಮೂಲಕ ಅಥವಾ ಇತರ ಮಾಧ್ಯಮಗಳಲ್ಲಿ ಬೋಳ ಶ್ರೀ ವರ್ಧಮಾನಸ್ವಾಮಿಯ ಬಸದಿಯ ಹೆಸರಿನಲ್ಲಿ ಹಣ ಸಂಗ್ರಹಿಸುವುದನ್ನು ನಿರ್ಬಂಧಿಸಿ ಆದೇಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.