Karkala: ಭಾರೀ ಗಾಳಿ-ಮಳೆಯಿಂದ ಹಲವೆಡೆ ಹಾನಿ
Team Udayavani, Jul 23, 2024, 12:46 AM IST
ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರಗಳು ಬಿದ್ದು ಹಾನಿಯಾಗಿದೆ.
ನಗರದ ಬಸ್ ನಿಲ್ದಾಣ ಸಮೀಪದ ಮನ್ನಾರ ದೇವಸ್ಥಾನದ ಪಕ್ಕ ಮರಬಿದದು ರಿಕ್ಷಾ ಹಾಗೂ ಬೈಕ್ ಜಖಂಗೊಂಡಿದೆ. ನಿಟ್ಟೆ ಗ್ರಾಮದ ಬೇರಂದೊಟ್ಟು ಎಂಬಲ್ಲಿ ಪ್ರೇಮ ಶೆಟ್ಟಿ ಅವರ ಮನೆಗೆ ಮರ ಬಿದ್ದು 30 ಸಾವಿರ ರೂ. ನಷ್ಟ ಆಗಿದೆ. ಚೇತನಹಳ್ಳಿಯಲ್ಲಿ ಸುಜಾತ ಅವರ ಮನೆಗೆ ಮರಬಿದ್ದು 20 ಸಾವಿರ ರೂ.ನಷ್ಟ ಆಗಿದೆ. ವಿಷ್ಣಮೂರ್ತಿ ನಗರ ಕಲ್ಲಂಬಾಡಿ ಪದವಿನಲ್ಲಿ ಸಂಜೀವ ಅವರ ಮನೆಯ ಹೆಂಚು ಹಾರಿ ಹೋಗಿ 10 ಸಾವಿರ ರೂ. ನಷ್ಟವಾಗಿದೆ.
ಮಾಣಿಕ್ಯಪಾದೆಯಲ್ಲಿ ಸೋಣ ಅವರ ಮನೆಯ ಗೋಡೆ ಕುಸಿದು ಬಿದ್ದು 30 ಸಾವಿರ ರೂ. ನಷ್ಟವಾಗಿದೆ. ಇರ್ವತ್ತೂರು ಗ್ರಾಮದ ನಿವಾಸಿ ಆನಂದ ಶೆಟ್ಟಿ ಅವರ ಮನೆಗೆ ಅಡಿಕೆ ಮರಬಿದ್ದು ಹಾನಿಯಾಗಿದೆ. ಕಡ್ತಲದ ಸ.ಕಿ.ಪ್ರಾ ಶಾಲೆಯ ಕಟ್ಟಡದ ಹೆಂಚುಗಳು ಹಾರಿಹೋಗಿವೆ. ಕಾರ್ಕಳ ಕಿಂಗ್ಸ್ ಬಾರ್ ಬಳಿ ಸುಧಾ ಅವರ ಮನೆಗೆ ಮರಬಿದ್ದು 1 ಲಕ್ಷ ರೂ. ನಷ್ಟವಾಗಿದೆ.
ಅನಂತಶಯನ ಬಳಿ ಮರಬಿದ್ದು ಸ್ಕೂಟರೊಂದು ಜಖಂಗೊಂಡಿದೆ. ನೀರೆ ಗ್ರಾಮದಲ್ಲಿ ಮೀನಿನ ಅಂಗಡಿಗೆ ಮರ ಬಿದ್ದು ಹಾನಿಯಾಗಿದೆ. ಕೋಟಿ ಚೆನ್ನಯ ಥೀಂ ಪಾರ್ಕ್ ಬಳಿ ಎರಡು ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಪಕ್ಕದಲ್ಲಿರುವ ಕಾರ್ಮಿಕರ ಶೆಡ್ ಸಂಪೂರ್ಣ ನೆಲಸಮವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.