Karnataka Election: ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ವೈಭವದ ಉದಯ

ನಿಮ್ಮ ಶಾಸಕ ನಿಮ್ಮ ಸೇವಕ ' 51 ಸಂಕಲ್ಪಗಳ ಪ್ರಣಾಳಿಕೆ ಬಿಡುಗಡೆ

Team Udayavani, May 9, 2023, 10:32 PM IST

Karnataka Election: ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ವೈಭವದ ಉದಯ

ಕಾಕ೯ಳ: ಕಾರ್ಕಳದಲ್ಲಿ ಬಿಜೆಪಿ ಪಕ್ಷ ಹಿಂದುತ್ವ ಅಭಿವೃದ್ಧಿ ಎಂದು ಹೇಳುತ್ತಾ ಜಾತಿ ಹಾಗೂ ಧಮ೯ದ ನಡುವೆ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸಿದೆ.ಭ್ರಷ್ಟಾಚಾರ ಹಾಗೂ ದಪ೯ ರಾಜಕೀಯದಿಂದ ಬೇಸತ್ತ ಜನ ಈ ಬಾರಿ ಪ್ರಮಾಣಿಕ ಸರಳ ಸಜ್ಜನಿಕೆಯ ಜನ ಸೇವಕ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಅವರನ್ನು ಬಹುಮತದಿಂದ ಗೆಲ್ಲಿಸುವಜದರ ಮೂಲಕ ಮತ್ತೆ ಕಾಕ೯ಳದಲ್ಲಿ ಕಾಂಗ್ರೆಸ್ ವೈಭವದ ಉದಯವಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದರು.

ಅವರು ಮೇ 8ರಂದು ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಉದಯ್ ಶೆಟ್ಟಿಯವರ ಪ್ರಣಾಳಿಕೆಯನ್ನು ಕಾರ್ಕಳ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬಿಡುಗಡೆ ಗೊಳಿಸಿ ಮಾತನಾಡಿದರು.

ಬಿಜೆಪಿಯ ಅಪಪ್ರಚಾರಕ್ಕೆ ಜನರಿಂದ ತಕ್ಕ ಉತ್ತರ ಕಾರ್ಕಳ ಕಾಂಗ್ರೆಸ್ ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್
ಮಾತನಾಡಿ ನಿಮ್ಮ ಶಾಸಕ ನಿಮ್ಮ ಸೇವಕ ಎನ್ನುವ ದೇಯ್ಯ ವಾಕ್ಯದೊಂದಿಗೆ 51 ಅಂಶಗಳನ್ನು ಒಳಗೊಂಡ ಈ ಪ್ರಣಾಳಿಕೆಯು ಕಾರ್ಕಳ ಮತದಾರರಿಗೆ ಬೇಕಾಗುವ ಅಗತ್ಯ ಅಂಶಗಳನ್ನು ಒಳಗೊಂಡಿದೆ.

ಕಾರ್ಕಳದ ಭ್ರಷ್ಟಾಚಾರ ಹಾಗೂ ದಪ೯ ರಾಜಕೀಯ ಬೇಸತ್ತ ಜನರು ಹಾಗೂ ಕಾಯ೯ಕತ೯ರು ದಕ್ಷ ಹಾಗೂ ಪ್ರಮಾಣಿಕ ಜನ ಸೇವಕ ಉದಯ ಶೆಟ್ಟಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.ಇದನ್ನು ಸಹಿಸದ ಬಿಜೆಪಿ ಅಪಪ್ರಚಾರಕ್ಕೆ ತೊಡಗಿದೆ.ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಉದಯ ಶೆಟ್ಟಿ ಅವರ ಗೆಲುವಿನಿಂದ ಕಾರ್ಕಳ ದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.

ಡಬಲ್ ಇಂಜಿನ್ ಹೆಸರಿಗೆ ಮಾತ್ರ ; ಕಾಂಗ್ರೆಸ್ ನ ಹೋರಾಟದಿಂದ ಹೆಬ್ರಿ ತಾಲೂಕು ರಚನೆ ಆಗಿದೆ .ಆದರೆ ಯಾವುದೇ ಇಲಾಖೆಗಳು ಇಲ್ಲದೆ ಬಿಜೆಪಿ ಆಡಳಿತದಿಂದ ಅತಂತ್ರವಾಗಿದೆ. ಕಾರ್ಕಳ ಹಾಗೂ ಹೆಬ್ರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲ . ಹೆಬ್ರಿ ತಾಲೂಕು ಕೇಂದ್ರದಲ್ಲಿ ಇನ್ನೂ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಮಾಡಲು ಆಗದ ಡಬಲ್ ಇಂಜಿನ್ ಸರಕಾರದ ಸಾಧನೆ ಇದೇಯೆ ಎಂದು ಪ್ರಶ್ನಿಸಿದರು.

ಸವ೯ಸಮಾಜದ ಜನ ನಾಯಕ: 35 ಸಾವಿರ ಅಂತರದಿಂದ ಗೆಲುವು: ಉದಯ ಶೆಟ್ಟಿ ಅವರು ಕಳೆದ ಹಲವಾರು ವಷ೯ಗಳಿಂದ ಜಾತಿ ಧಮ೯ ನೋಡದೆ ವಿದ್ಯಾರ್ಥಿ ವೇತನ,ಚಿಕಿತ್ಸೆಗೆ ಸಹಾಯಧನ,ಮದುವೆಗೆ ಸಹಾಯ ಸೇರಿದಂತೆ ಹಲವಾರು ಕಾಯ೯ಕ್ರಮಗಳಿಗೆ ತನ್ನ ದುಡಿಮೆಯ ಹಣವನ್ನು ತನ್ನ ಟ್ರಸ್ಟ್ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಯನ್ನು ಎಲ್ಲಾ ಸಮ‍ಾಜದವರಿಗೆ ನೀಡುತ್ತಾ ಬಂದಿದ್ದಾರೆ. ಅವರ ಜನಸ್ನೇಹಿ ಪ್ರಣಾಳಿಕೆ ಕಾರ್ಕಳ ಜನತೆಯ ಮನಗೆದ್ದಿದ್ದು ಸುಮಾರು 35ಸಾವಿರ ಅಂತರ ಮತಗಳಿಂದ ಅವರು ಜಯಗಳಿಸಲಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಸಿ ಘಟಕದ ಅದ್ಯಕ್ಷ ಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲೀನೊ, ಪುರಸಭೆಯ ಮಾಜಿ ಉಪಾಧ್ಯಕ್ಷರಾದ ನಳಿನಿ ಆಚಾರ್ಯ, ಪ್ರೇಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ಏನಿದೆ 51 ಸಂಕಲ್ಪಗಳು
 ಸಮಗ್ರ ಅಭಿವೃದ್ಧಿಯ ಹರಿಕಾರರಾದ ಪ್ರಮಾಣಿಕ ಜನಸೇವಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ 51 ಸಂಕಲ್ಪಗಳನ್ನು ಹೊತ್ತ ಜನಸ್ನೇಹಿ ಪ್ರಣಾಳಿಕೆ ಈ ಕೆಳಗಿನಂತಿದೆ.

ನಿಮ್ಮ ಶಾಸಕ ನಿಮ್ಮ ಸೇವಕ ಎಂಬ ಧೇಯವಾಕ್ಯದೊಂದಿದೆ ,ವಾರಾನ್ನ ,ಮನೆ ವಾಸ್ತವ್ಯ,ಜನತಾ ದರ್ಶನ ,ಸ್ವಾಸ್ಯ್ಥ ಕಾರ್ಕಳ, ವನಿತಾ ಸವಾರಿ, ಚಿಣ್ಣರ ಸೈಕಲ್, ಪುಸ್ತಕ ಭಾಗ್ಯ, ಶಾಲೆಗೆ ಬನ್ನಿ, ಪ್ಯಾಡ್ ಭಾಗ್ಯ, ಮಡಿಲು, ವಿವಾಹ ಭಾಗ್ಯ, ಪ್ರೋತ್ಸಾಹ `ಧನ, ಕಾಂತಾರಾ ಯೋಜನೆ, ರಕ್ಷಾ ಬಂಧನ, ದೇಗುಲ ದರ್ಶನ, ಜೈ ಶ್ರೀರಾಮ್,ಇಫ್ತಿಯಾರ್ ಕೂಟ, ಕ್ರಿಸ್‌ಮಸ್ ಸಂಭ್ರಮ, ಜೈನ ಸಮ್ಮಿಲನ, ವೇದ ವಾಕ್ಯ, ದೇಗುಲ ಜೀರ್ಣೋದ್ಧಾರ, ಸೂರು, ಉದ್ಯೋಗ ಮೇಳ, ಶಿಕ್ಷಣ ಸಲಹೆ, ಗೊಬ್ಬು , ಗಮ್‌ಜಲ್,ಸಂಪರ್ಕ, ಬಾಜೇಲ್, ವಿದ್ಯಾಶ್ರೀ, ಕ್ರಷಿರಂಗ, ಕ್ರಷಿ ಭಾಗ್ಯ, ಕೂಲಿಗಾಗಿ ನೆರವು, ಕಂಬಳ ಸಂಭ್ರಮ, ವಿದ್ಯಾನಿಧಿ, ಬಿಲ್ಲವರಿಗೆ ಸೂರು, ಕಿಟ್ ಭಾಗ್ಯ, ಯಕ್ಷಗಾನ ವೈಭವ, ಆಟೋ ಸ್ನೇಹಿತ , ಬಂಟ ಸಮ್ಮಿಲನ, ಬಿಲ್ಲವ ಸಮ್ಮಿಲನ, ಬೊಲ್ಬು, ಆರೈಕೆ, ಗೋ ರಕ್ಷಣಾ, ನೌಕರ ಸ್ನೇಹ, ಮಾರ್ಗದರ್ಶನ, ಮಹಿಳಾ ವಾಣಿ, ಯುವ ಶಕ್ತಿ, ದಲಿತ ಶಕ್ತಿ, ರುಣ ಸಂದಾಯ, ಬ್ರ‍್ಯಾಂಡ್ ಕಾರ್ಕಳ ಸಂಕಲ್ಪಗಳು ಒಳಗೊಂಡಿದೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.