ಕಾರ್ಕಳ: ಪಿಎಂ ಆವಾಸ್‌ ಮನೆಗಳಿಗೆ ಬೇಡಿಕೆಯೇ ಇಲ್ಲ-250ರಲ್ಲಿ 90 ಮನೆಗಳಿಗಷ್ಟೇ ಅರ್ಜಿ!


Team Udayavani, Jul 3, 2024, 4:38 PM IST

ಕಾರ್ಕಳ: ಪಿಎಂ ಆವಾಸ್‌ ಮನೆಗಳಿಗೆ ಬೇಡಿಕೆಯೇ ಇಲ್ಲ-250ರಲ್ಲಿ 90 ಮನೆಗಳಿಗಷ್ಟೇ ಅರ್ಜಿ!

ಕಾರ್ಕಳ: ಬಡವರ ನೆತ್ತಿ ಮೇಲೊಂದು ಸೂರು ಕಲ್ಪಿಸಲು ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಕಾರ್ಕಳದಲ್ಲಿ 250 ಗುಂಪು ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ರಾಜ್ಯ ಸರಕಾರವೂ ಇದಕ್ಕೆ ಹಣ ಕಾಸಿನ ನೆರವು ಒದಗಿಸುತ್ತದೆ. ಆದರೆ, ಫ‌ಲಾನು ಭವಿಗಳಿಲ್ಲದೆ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಜಿ-ಪ್ಲಸ್‌ ಮಾದರಿ ಮನೆಗಳ ಸಮುಚ್ಚಯ ನಿರ್ಮಾಣಕ್ಕೆ ಕಾರ್ಕಳ ಪುರಸಭೆ ವ್ಯಾಪ್ತಿಯ ಪತ್ತೂಂಜಿಕಟ್ಟೆಯಲ್ಲಿ ಚಾಲನೆಯೂ ಸಿಕ್ಕಿತ್ತು. ಆದರೆ, ಯೋಜನೆಗೆ ಮುಂಗಡ ಹಣ ಪಾವತಿಸುವ ಫ‌ಲಾನುಭವಿಗಳ ಕೊರತೆಯಿಂದ ಸರಕಾರ ಮಹತ್ವಾಕಾಂಕ್ಷಿ ಯೋಜನೆ ಕುಂಟುತ್ತಿದೆ.

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 16 ಕೋ.ರೂ. ಅಂದಾಜು ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧವಾಗಿದೆ. ಪತ್ತೂಂಜಿ ಕಟ್ಟೆಯಲ್ಲಿ ಆರು ಎಕರೆ ಜಾಗ ಮೀಸಲಿಡಲಾಗಿದೆ. ಕಾಮಗಾರಿಗೆ ಮೇ ತಿಂಗಳಲ್ಲಿ ಚಾಲನೆಯೂ ದೊರಕಿದೆ. ಇಲ್ಲಿ
ಬ್ಲಾಕ್‌ ಅಳವಡಿಕೆಯಂತಹ ಪ್ರಾಥಮಿಕ ಹಂತದ ಕೆಲಸಗಳು ನಡೆದಿವೆ.

ಆದರೆ ಕಾಮಗಾರಿ ಮುಂದುವರಿಯಬೇಕು ಎಂದಿದ್ದರೆ ಎಲ್ಲ 250 ಮನೆಗಳಿಗೆ ಫ‌ಲಾನುಭ ವಿಗಳನ್ನು ಗೊತ್ತುಪಡಿಸಬೇಕು ಮತ್ತು ಫ‌ಲಾ ನುಭವಿಗಳು ಒಟ್ಟು ವೆಚ್ಚದ ಶೇ. 10/15ನ್ನು ಮುಂಗಡವಾಗಿ ಪಾವತಿಸಬೇಕು. ಆದರೆ, ಮನೆ ಬೇಕು ಎಂಬ ಆಸೆ ಇರುವ ಫ‌ಲಾನುಭವಿಗಳು ಶೇ. 10ರಷ್ಟು ಮುಂಗಡ ಪಾವತಿ ಮಾಡುವ ಸ್ಥಿತಿ ಯಲ್ಲಿ ಇಲ್ಲ. ಹೀಗಾಗಿ ಬೇಡಿಕೆಯೇ ಇಲ್ಲವಾಗಿದೆ.

9 ಕಡೆ ಸ್ಲಂ ಏರಿಯಾ, 350 ಅರ್ಜಿ
ಬಂಗ್ಲೆಗುಡ್ಡೆ ನರ್ಸಿಂಗ್‌ ಹೋಂ ಹಿಂಭಾಗ, ಬಂಗ್ಲೆಗುಡ್ಡೆ, ಐತಕಟ್ಟೆ, ಬಂಡಿಮಠ, ರಣವೀರ ಕಾಲನಿ, ಮರಿಣಾಪುರ, ಬೊಬ್ಬಳ ಕಾಲನಿ, ದಾನಶಾಲೆ, ಹವಾಲ್ದಾರಬೆಟ್ಟು ಸೇರಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 9 ಕಡೆ ಕೊಳಗೇರಿಗಳಿವೆ. ಪುರಸಭೆ ವತಿ ಯಿಂದ 2009-10ರಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ 229 ಕುಟುಂಬ ಗಳನ್ನು ಗುರುತಿಸಲಾಗಿತ್ತು. ಪತ್ತೂಂಜಿ ಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದಲ್ಲಿ ಮನೆಗಾಗಿ 350ಕ್ಕೂ ಅಧಿಕ ಅರ್ಜಿಗಳು ಪುರಸಭೆಗೆ ಬಂದು 250 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ಮುಂಗಡ ಪಾವತಿಯಾಗದೆ ಸಮಸ್ಯೆಯಾಗಿದೆ.

ಫ‌ಲಾನುಭವಿ ಸಿಗದಿರಲು ಕಾರಣವೇನು?
ಮನೆ ಬಯಸುವ ಪರಿಶಿಷ್ಟ ಜಾತಿ/ಪಂಗಡದವರು ಶೇ.10 (65 ಸಾವಿರ ರೂ.) ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಸಾಮಾನ್ಯ ವರ್ಗದವರಾಗಿದ್ದರೆ ಶೇ. 15 (96 ಸಾವಿರ) ಮೊತ್ತವನ್ನು ಮುಂಗಡ ಪಾವತಿಸಬೇಕು. ಆದರೆ ಇಲ್ಲಿ ಎರಡೂ ವರ್ಗದವರು ನಾನಾ ಕಾರಣಗ ಳಿಂದ ಮುಂಗಡ ಪಾವತಿಗೆ ಮುಂದೆ ಬರುತ್ತಿಲ್ಲ. ಪಟ್ಟಿ ಮಾಡಲಾದ 250 ಫ‌ಲಾನುಭವಿಗಳ ಪೈಕಿ 90 ಮಂದಿಯಷ್ಟೇ ಮುಂಗಡ ಪಾವತಿಗೆ ಮುಂದಾಗಿದ್ದಾರೆ. ಫ‌ಲಾನುಭವಿ ಸಿಗದೆ ಸಮುಚ್ಛ ಯ ನಿರ್ಮಾಣಕ್ಕೆ ಸರಕಾರದಿಂದ ಹಣ ಬಿಡುಗಡೆಗೆ ತಾಂತ್ರಿಕ ತೊಂದರೆ ಎದುರಾಗಿದೆ.

ಮನೆ ಎಷ್ಟು ದೊಡ್ಡದು? ದರ ಎಷ್ಟು?
* ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಈ ಮನೆಯ ಸುತ್ತಳತೆ 358 ಚದರಡಿ. ಒಂದು ಮನೆ ನಿರ್ಮಾಣಕ್ಕೆ 6,44,378 ರೂ. ವೆಚ್ಚ ತಗಲಲಿದೆ.
*6.44 ಲಕ್ಷ ರೂ. ಮೊತ್ತದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ಕೇಂದ್ರ ಸರಕಾರದಿಂದ 1.5 ಲಕ್ಷ ರೂ. ಮತ್ತು ರಾಜ್ಯ ಸರಕಾರದಿಂದ 2 ಲಕ್ಷ ರೂ., ಒಟ್ಟು 3.5 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ ಮೊತ್ತವನ್ನು ಅರ್ಹ
ಫ‌ಲಾನುಭವಿಗಳು ಭರಿಸಬೇಕು.
*ಕೇಂದ್ರ, ರಾಜ್ಯ ಸರಕಾರಗಳ ಅನುದಾನದ ಬಳಿಕ ಪಾವತಿಸಬೇಕಾಗಿರುವ 2.94 ಲಕ್ಷ ರೂ.ಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಒದಗಿಸಲಾಗುತ್ತದೆ.
*ಬ್ಯಾಂಕ್‌ ಸಾಲವನ್ನು ಪ್ರತೀ ತಿಂಗಳು ಮರುಪಾವತಿಸಬೇಕು. ಸಾಲ ತೀರುವಳಿಯ ಬಳಿಕ ಮನೆ ವಾರಸುದಾರರ ಹೆಸರಿಗೆ ಬರಲಿದೆ. *ಸಾಮಾನ್ಯ ವರ್ಗದ ಫ‌ಲಾನುಭವಿಗಳಿಗೆ ಕೇಂದ್ರ ಸರಕಾರದಿಂದ 1.50 ಲಕ್ಷ ರೂ. ಮತ್ತು ರಾಜ್ಯದಿಂದ 1.20 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ 3.744 ಲಕ್ಷವನ್ನು ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಸಾಲ ರೂಪದಲ್ಲಿ ಪಡೆಯಲು ಅವಕಾಶವಿರುತ್ತದೆ.

ಸ್ಲಂ ಬೋರ್ಡ್‌ನಿಂದ ನಿರ್ಮಾಣ
ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಬಡ ನಿವೇಶನ ರಹಿತರಿಗಾಗಿ ನಿರ್ಮಿಸುವ ಸಮುಚ್ಚಯ ಮನೆ ಇದಾಗಿದೆ. ಸ್ಲಂ ಬೋರ್ಡ್‌ ನಿಂದ ಸಮುಚ್ಚಯ ನಿರ್ಮಾಣವಾದರೂ ಅದಕ್ಕೆ ಬೇಕಿರುವ ಫ‌ಲಾನುಭವಿಯನ್ನು ಪುರಸಭೆ ಒದಗಿಸಬೇಕು. ಆದರೆ ಮುಂಗಡ ಪಾವತಿಸಬಲ್ಲ ಫ‌ಲಾನುಭವಿ ಸಿಗುತ್ತಿಲ್ಲ

ಮುಂಗಡ ಫ‌ಲಾನುಭವಿ ಸಿಗುತ್ತಿಲ್ಲ
ಸಮುಚ್ಚಯ ಮನೆ ಹಂಚಿಕೆ ಸಂಬಂಧ ನಿರ್ಮಾಣ ಕಾಮಗಾರಿ ಆಗಬೇಕು. ಅದಕ್ಕೆ ಮುಂಗಡ ಪಾವತಿಸುವ ಫ‌ಲಾನುಭವಿಗಳ ಆವಶ್ಯಕತೆಯಿದೆ. ಅದನ್ನು ಭರ್ತಿಗೊಳಿಸಿದಲ್ಲಿ ಕಟ್ಟಡ ನಿರ್ಮಾಣಕ್ಕೆ ಮೊತ್ತ ಬಿಡುಗಡೆಯಾಗಲಿದೆ. ಮುಂಗಡ ಪಾವತಿಸುವ ಫ‌ಲಾನುಭವಿ ಸಿಗದೆ ತಾಂತ್ರಿಕ ತೊಂದರೆ ಎದುರಾಗಿದೆ.
*ಮೋಹನ್‌, ಜೂನಿಯರ್‌ ಎಂಜಿನಿಯರ್‌, ಸ್ಲಂ ಬೋರ್ಡ್‌

ಜಿ-ಪ್ಲಸ್‌ ಮನೆ ಸಹಕಾರಿ
ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಬೇಡಿಕೆಯಿದೆ. ಅದನ್ನು ಪೂರೈಸಲು ಜಿ-ಪ್ಲಸ್‌ ಮನೆ ಯೋಜನೆ ಸಹಕಾರಿಯಾಗಿದೆ. ನಿಗದಿತ
ಶೇಕಡಾವಾರು ಮುಂಗಡ ಮೊತ್ತ ಪಾವತಿಸಿ ಮನೆಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
*ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ

*ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

vidhana-Soudha

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

rahul gandhi (2)

UP; ಹಾಥರಸ್‌ ಕಾಲ್ತುಳಿತಕ್ಕೆ ಆಡಳಿತ ವೈಫ‌ಲ್ಯ ಕಾರಣ: ರಾಹುಲ್‌

1-weww

Bhojashala dispute: ಜೈನರ ಪರ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ

Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ

ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Kundapura ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

rain 3

RED alert; ಜು.6 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

1-ree

Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್‌ಪಾಲ್‌, ರಶೀದ್‌ ಸಂಸದರಾಗಿ ಪ್ರಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.