ಕಳೆಗುಂದಿದ್ದ ಕರ್ಕುಂಜೆ ಕನ್ನಡ ಶಾಲೆಗೆ ನವರೂಪ
"ಕನ್ನಡ ಮನಸುಗಳು ಪ್ರತಿಷ್ಠಾನ'ದ ಪ್ರಯತ್ನ ; ಚಿತ್ರ ನಟಿ ನೀತು ಭಾಗಿ
Team Udayavani, Jan 30, 2022, 6:50 AM IST
ಕರ್ಕುಂಜೆ ಕನ್ನಡ ಶಾಲೆಗೆ ಹೊಸ ರೂಪ.
ಕುಂದಾಪುರ: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಬೇಕು ಎನ್ನುವ ಕೂಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೊಂದು ನಿದರ್ಶನ ಎಂಬಂತೆ “ಕನ್ನಡ ಮನಸುಗಳು ಪ್ರತಿಷ್ಠಾನ’ ಎಂಬ ತಂಡವೊಂದು ತಮ್ಮ ಸ್ವಂತ ಹಣ ಮಾತ್ರವಲ್ಲದೆ, ದಾನಿಗಳಿಂದಲೂ ಹಣ ಸಂಗ್ರಹಿಸಿ ಗ್ರಾಮೀಣ ಭಾಗಗಳ ಕನ್ನಡ ಶಾಲೆಗಳಿಗೆ ನವರೂಪ ನೀಡಿ, ಅಭಿವೃದ್ಧಿಪಡಿಸಲು ಟೊಂಕಕಟ್ಟಿ ನಿಂತಿದೆ.
ಈ ಕನ್ನಡ ಮನಸುಗಳು ಪ್ರತಿಷ್ಠಾನವು ಸರಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನವನ್ನು ಕೈಗೊಂಡಿದ್ದು, ಅದರಡಿ ಈ ಬಾರಿ ಬೈಂದೂರು ವಲಯದ 94 ವರ್ಷಗಳ ಇತಿಹಾಸವಿರುವ ಕರ್ಕುಂಜೆ ಸರಕಾರಿ ಹಿ.ಪ್ರಾ. ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಶಾಲೆಗೆ ಸುಣ್ಣ- ಬಣ್ಣ ಬಳಿದು, ಹೊಸ ಮೆರುಗು ನೀಡುವುದರ ಜತೆಗೆ, ಇನ್ನಿತರ ಪೀಠೊ ಪಕರಣ ಗಳನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ಕಾರ್ಯವನ್ನು ಮಾಡಿದೆ.
60 ಮಂದಿಯ ತಂಡ
ದೂರದ ಬೆಂಗಳೂರಿನಿಂದ ಆಗಮಿ ಸಿರುವ ಈ ಕನ್ನಡ ಮನಸುಗಳು ತಂಡದಲ್ಲಿ ಒಟ್ಟು 100 ಮಂದಿಯಿದ್ದು, ಈ ಬಾರಿ ಈ ಶನಿವಾರ ಕರ್ಕುಂಜೆ ಶಾಲೆ ಹಾಗೂ ಕೂಡಿಗಿ ಕಿರಿಯ ಪ್ರಾಥಮಿಕ ಶಾಲೆಗೆ ಕೈಂಕರ್ಯಕ್ಕಾಗಿ 60 ಮಂದಿ ಆಗಮಿಸಿದ್ದಾರೆ. ಈ ತಂಡದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಯುವಕ-ಯುವತಿಯರು ಸೇರಿಕೊಂಡಿದ್ದಾರೆ. ಉದ್ಯೋಗದ ಜತೆ- ಜತೆಗೆ ಕನ್ನಡ ಶಾಲೆಗಳನ್ನು ಉಳಿಸುವ ಸಮಾಜಮುಖೀ ಕಾಯಕದಲ್ಲಿಯೂ ತೊಡಗಿಸಿಕೊಂಡಿರುವುದು ಅನು ಕರಣೀಯ. ರಾಜ್ಯದ 31 ಜಿಲ್ಲೆಗಳಲ್ಲಿ ತಲಾ 2 ಶಾಲೆ ಆಯ್ಕೆ ಮಾಡಿಕೊಂಡು, ಹೊಸ ರೂಪ ಕೊಡುವ ಪಣ ತೊಟ್ಟಿದ್ದಾರೆ.
11ನೇ ಶಾಲೆ
ಈವರೆಗೆ ರಾಮನಗರ, ಬೆಂಗಳೂರು, ಮಂಡ್ಯ, ಹಾಸನ, ಶಿವಮೊಗ್ಗ ಸೇರಿದಂತೆ ದ.ಕ ಜಿಲ್ಲೆಯ ಸುಳ್ಯ ಶಾಲೆ ಸೇರಿದಂತೆ 10 ಶಾಲೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇದು 11ನೇ ಶಾಲೆಯಾಗಿದೆ. 31 ಜಿಲ್ಲೆಯಿಂದ ಬರೋಬ್ಬರಿ 62 ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟಿರುವ ಈ ತಂಡಕ್ಕೆ ಸೂರ್ಯ ಫೌಂಡೇಶನ್ ಪ್ರಧಾನ ನೆರವು ನೀಡುತ್ತಿದ್ದು, 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಪೇಂಟಿಂಗ್ ವೆಚ್ಚ ಭರಿಸುತ್ತದೆ. ಇನ್ನಿತರ ದಾನಿಗಳಿಂದ ಶಾಲೆಗೆ ಅಗತ್ಯವಿರುವ ಪೀಠೊಪಕರಣ, ಫ್ಯಾನ್, ವಿದ್ಯುತ್ ದೀಪ, ಡಿಜಿಟಲೀಕರಣ, ಪ್ರಾಜೆಕ್ಟರ್ ಇನ್ನಿತರ ಸಲಕರಣಗಳನ್ನು ಸಹ ಈ ತಂಡ ಒದಗಿಸಿಕೊಡುತ್ತದೆ.
ನಮ್ಮೂರ ಶಾಲೆಯ ಬಗ್ಗೆ ನಮ್ಮ ತಂಡದಲ್ಲಿ ಮನವಿ ಮಾಡಿಕೊಂಡಿದ್ದೆ. ನಮ್ಮೂರಿಗೆ ಬಂದು ನಮ್ಮ ಶಾಲೆಯನ್ನು ಅವರ ಶಾಲೆ ಎಂದು ಭಾವಿಸಿ ಖುಷಿಂದಲೇ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ತಂಡದ ಸದಸ್ಯ, ಸ್ಥಳೀಯರಾದ ಗಣೇಶ್ ಕೊಡ್ಲಾಡಿ.
25 ಶಾಲೆಗಳಿಂದ ಬೇಡಿಕೆ
ಆರಂಭದಲ್ಲಿ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಕೇವಲ ಬಣ್ಣ ಮಾತ್ರ ಬಳಿಯುತ್ತಿದ್ದೇವು. ಈಗೀಗ ಕಲಿಕೆಗೆ ಪೂರಕವಾದ ಪೀಠೊಪಕರಣಗಳಿಗೂ ಬೇಡಿಕೆ ಬರುತ್ತಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಶಾಲೆಗಳಿಗೆ ನಮ್ಮ ಮೊದಲ ಪ್ರಾಶಸ್ತ್ಯ ಕೊಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಸುಮಾರು 25ಕ್ಕೂ ಹೆಚ್ಚು ಶಾಲೆಗಳಿಂದ ಈಗಾಗಲೇ ಬೇಡಿಕೆ ಬಂದಿದೆ. ಹಂತ-ಹಂತವಾಗಿ ಆ ಶಾಲೆಗಳ ಅಭಿವೃದ್ಧಿಪಡಿಸುತ್ತೇವೆ.
-ಪವನ್, ತಂಡದ ಪ್ರಮುಖರು
ಅನೇಕ ನೆರವು
116 ಮಕ್ಕಳು ಓದುತ್ತಿದ್ದು, ಶತಮಾನೋತ್ಸವಕ್ಕೆ ಕೇವಲ ಆರು ವರ್ಷಗಳು ಬಾಕಿ ಇವೆ. ಅನೇಕ ಅಭಿವೃದ್ಧಿ ಕೆಲಸ ಆಗಬೇಕಿತ್ತು. ಪಂಚಾಯತ್ ಹಾಗೂ ಹಳೆ ವಿದ್ಯಾರ್ಥಿ ಗಣೇಶ್ ಅವರ ನೆರವಿಂದ ಕನ್ನಡ ಮನಸುಗಳು ತಂಡದವರು ನಮ್ಮ ಶಾಲೆಗೆ ಬಂದಿದ್ದಾರೆ. ಬಣ್ಣ ಬಳಿಯುವ ಜತೆಗೆ ನಮ್ಮ ಶಾಲೆಗೆ ಅಗತ್ಯವಿರುವ ಬೇಡಿಕೆಗಳಾದ ಪ್ರಾಜೆಕ್ಟರ್, ಪ್ರಿಂಟರ್, ಟ್ಯೂಬ್‌ಲೈಟ್, ಮ್ಯಾಟ್, 14 ಕೋಣೆಗಳಿಗೆ ಬೇಕಾಗಿರುವ ಫ್ಯಾನ್‌ಗಳನ್ನು ಈಡೇರಿಸಿದ್ದಾರೆ. ಈ ತಂಡಕ್ಕೆ ಕೃತಜ್ಞತೆ.
– ಮೋತಿಲಾಲ್ ಲಮಣಿ, ಮುಖ್ಯೋಪಾಧ್ಯಾಯರು, ಕರ್ಕುಂಜೆ ಶಾಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.