Karnataka Bank: ಸಾರ್ವಕಾಲಿಕ ದಾಖಲೆ- ಅರ್ಧ ವಾರ್ಷಿಕ ಲಾಭ 700.96 ಕೋ. ರೂ.
Team Udayavani, Nov 3, 2023, 12:26 AM IST
ಮಂಗಳೂರು: ಈ ವರ್ಷದ ಸೆಪ್ಟಂಬರ್ ಅಂತ್ಯಕ್ಕೆ ಪೂರ್ಣಗೊಂಡ ಅರ್ಧ ವಾರ್ಷಿಕ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಸಾರ್ವಕಾಲಿಕ ದಾಖಲೆಯ 700 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿದೆ.
ಹಿಂದಿನ ವರ್ಷದ ಈ ಅವಧಿಯಲ್ಲಿ 525.81 ಕೋಟಿ ರೂ. ಲಾಭ ಗಳಿಸಿದ್ದು, ಈ ಬಾರಿ ಶೇ 33.31ರಷ್ಟು ಪ್ರಗತಿಯಾಗಿದೆ.
ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ತ್ತೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಪ್ರಸಕ್ತ ತ್ತೈಮಾಸಿಕದಲ್ಲಿ ಬ್ಯಾಂಕ್ 330.26 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಬ್ಯಾಂಕಿನ ನಿವ್ವಳ ಬಡ್ಡಿ ಆದಾಯವು ಶೇ. 2.45ರ ದರದಲ್ಲಿ ಹೆಚ್ಚಳಗೊಂಡು 822.41 ಕೋಟಿ ರೂ. ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 802.73 ಕೋಟಿ ರೂ. ಆಗಿತ್ತು.
ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ಗಮನಾರ್ಹ ರೀತಿಯಲ್ಲಿ (ಶೇ. 3.68ರಿಂದ ಶೇ. 3.47ಕ್ಕೆ) ಇಳಿಕೆ ಕಂಡಿವೆ. ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ. 1.43ರಿಂದ ಶೇ. 1.36ಕ್ಕೆ ಇಳಿಕೆಯಾಗಿವೆ.
ಒಟ್ಟು ವ್ಯವಹಾರವು 1,56,467.71 ಕೋಟಿ ರೂ.ಗಳನ್ನು ತಲುಪಿದೆ. ಠೇವಣಿಗಳ ಮೊತ್ತವು 81,633.66 ಕೋಟಿ ರೂ.ಗಳಿಂದ 89,531.73ಕೋಟಿ ರೂ.ಗಳಿಗೆ ಹಾಗೂ ಮುಂಗಡಗಳು 60,991.24 ಕೋಟಿಯಿಂದ 66,935.98 ಕೋಟಿ ರೂ. ತಲುಪಿದೆ. ಮುಂಗಡ ಮತ್ತು ಠೇವಣಿಗಳ ಅನುಪಾತ ಶೇ. 73.65ರಷ್ಟಿದೆ.
ಕಳೆದ ವರ್ಷದ ದ್ವಿತೀಯ ತ್ತೈಮಾಸಿಕ ಅಂತ್ಯಕ್ಕೆ ಶೇ. 15.28ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತವು (ಕ್ಯಾಪಿಟಲ್ ಅಡೆಕ್ವೆಸಿ ರೇಷಿಯೊ) ಶೇ. 16.20ರಷ್ಟಾಗಿದೆ. ಆದ್ಯತೆಯ ಆಧಾರದ ಮೇಲೆ ಒಟ್ಟು 800 ಕೋಟಿ ರೂ. ವರೆಗಿನ ಷೇರುಗಳನ್ನು ಅಕ್ಟೋಬರ್‌ನಲ್ಲಿ ವಿತರಿಸಲಾಗಿದೆ. ಇದರಿಂದಾಗಿ ಬಂಡವಾಳ ಪರ್ಯಾಪ್ತತಾ ಅನುಪಾತವು ಇನ್ನಷ್ಟು ಉತ್ತಮಗೊಳ್ಳಲಿದೆ. ನೆಟ್‌ಇಂಟ್ರೆಸ್ಟ್ ಮಾರ್ಜಿನ್ ಕೂಡ ಶೇ. 3.56ರಿಂದ ಶೇ 3.63ಕ್ಕೆ ಏರಿವೆ. c
ಹೊಸ ಸಾಮರ್ಥ್ಯದ ಅನಾವರಣ
ಬ್ಯಾಂಕಿನ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್ ಎಚ್ ಮಾತನಾಡಿ, ಅರ್ಧ ವಾರ್ಷಿಕ ವಿತ್ತೀಯ ಫಲಿತಾಂಶ ಅತ್ಯಂತ ಆಶಾದಾಯಕವಾಗಿದ್ದು, ಬ್ಯಾಂಕಿನ ಹೊಸ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ. ಪ್ರಸಿದ್ಧ ಐದು ಕಂಪೆನಿಗಳಿಗೆ ಆದ್ಯತೆಯ ಆಧಾರದ ಮೇಲೆ ಒಟ್ಟು 800 ಕೋಟಿ ರೂ. ವರೆಗಿನ ಷೇರು ವಿತರಿಸಲಾಗಿದೆ. ಬ್ಯಾಂಕಿನ ಅಭಿವೃದ್ಧಿಯ ಪಯಣವು ಬಂಡವಾಳ ಹೆಚ್ಚಳದಿಂದ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಬ್ಯಾಂಕಿನ ವ್ಯಾಪ್ತಿ ವಿಸ್ತರಿಸಲು, ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳಲು ಮತ್ತು ನಮ್ಮ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು, ಪಾಲುದಾರಿಕೆಗಳನ್ನು ಬೆಂಬಲಿಸಲು, ಎಲ್ಲ ಷೇರುದಾರರಿಗೆ ಮೌಲ್ಯವನ್ನುತಲುಪಿಸಲು ಹಾಗೂ ನಮ್ಮ ಮಹತ್ವಾಕಾಂಕ್ಷೆಗಳನ್ನು ಉತ್ತೇಜಿಸಲು ಇದರಿಂದ ನೆರವಾಗಲಿದೆ ಎಂದರು.
ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಮಾತನಾಡಿ, ವರ್ಷದ ಮೊದಲಾರ್ಧದಲ್ಲಿ ದೃಢವಾದ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಲು ನಾವು ಸಂತೋಷ ಪಡುತ್ತೇವೆ. ಉತ್ತಮ ಬ್ಯಾಂಕಿಂಗ್ ಅಭ್ಯಾಸಗಳು, ಗ್ರಾಹಕರ ತೃಪ್ತಿ ಮತ್ತು ಡಿಜಿಟಲ್ ಆವಿಷ್ಕಾರಗಳಿಗೆ ನಾವು ತೋರುವ ಬದ್ಧತೆ ನಮ್ಮ ಯಶಸ್ಸನ್ನು ಮುಂದುವರಿಸಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.