Karnataka Government: 21 ಐಎಎಸ್ ಅಧಿಕಾರಿಗಳ ವರ್ಗ
Team Udayavani, Jul 6, 2024, 1:18 AM IST
ಬೆಂಗಳೂರು: ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು, ಹೆಚ್ಚುವರಿ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ 21 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಬಿ. ಶರತ್- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಡಾ| ಆರ್. ಸೆಲ್ವಮಣಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರು ಚುನಾವಣೆ (ಪ್ರಭಾರ), ಬೆಂಗಳೂರು. ಡಾ. ರಾಮ್‌ಪ್ರಸಾತ್ ಮನೋಹರ್- ಹೆಚ್ಚುವರಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಅಧ್ಯಕ್ಷರು, ಬೆಂಗಳೂರು ಜಲಮಂಡಳಿ (ಪ್ರಭಾರ), ನಿತೀಶ್ ಪಾಟೀಲ್- ನಿರ್ದೇಶಕರು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ, ಡಾ| ಅರುಂಧತಿ ಚಂದ್ರಶೇಖರ್- ಆಯುಕ್ತರು, ಪಂಚಾಯತ್ ರಾಜ್, ಕೆ. ಜ್ಯೋತಿ- ಆಯುಕ್ತರು, ಜವಳಿ ಅಭಿವೃದ್ಧಿ ಮತ್ತು ನಿರ್ದೇಶಕರು- ಕೈಮಗ್ಗ ಮತ್ತು ಜವಳಿ.
ಸಿ.ಎನ್. ಶ್ರೀಧರ- ನಿರ್ದೇಶಕ, ಸೋಷಿಯಲ್ ಆಡಿಟ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಡಾ| ಕೆ.ವಿ. ರಾಜೇಂದ್ರ- ನಿರ್ದೇಶಕರು, ಪ್ರವಾಸೋದ್ಯಮ, ಚಂದ್ರಶೇಖರ ನಾಯಕ್- ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ (ಜಾರಿ), ಬೆಂಗಳೂರು. ವಿಜಯ ಮಹಾಂತೇಶ್ ಬಿ. ದಾನಮ್ಮನವರ್- ಜಿಲ್ಲಾಧಿಕಾರಿ, ಹಾವೇರಿ. ಗೋವಿಂದ ರೆಡ್ಡಿ- ಜಿಲ್ಲಾಧಿಕಾರಿ, ಹಾವೇರಿ, ರಘುನಂದನಮೂರ್ತಿ- ಖಜಾನೆ ಆಯುಕ್ತರು, ಬೆಂಗಳೂರು.ಡಾ| ಗಂಗಾಧರಸ್ವಾಮಿ- ಜಿಲ್ಲಾಧಿಕಾರಿ, ದಾವಣಗೆರೆ, ಲಕ್ಷ್ಮಿಕಾಂತ ರೆಡ್ಡಿ- ಜಿಲ್ಲಾಧಿಕಾರಿ, ಮೈಸೂರು, ಕೆ. ನಿತೀಶ್- ಜಿಲ್ಲಾಧಿಕಾರಿ, ರಾಯಚೂರು. ಮೊಹ್ಮದ್ ರೋಷನ್- ಜಿಲ್ಲಾಧಿಕಾರಿ, ಬೆಳಗಾವಿ.
ಶಿಲ್ಪಾ ಶರ್ಮಾ- ಜಿಲ್ಲಾಧಿಕಾರಿ, ಬೀದರ್, ಡಾ.ದಿಲೀಶ್ ಸಸಿ- ಸಿಇಒ, ಇ-ಆಡಳಿತ, ಬೆಂಗಳೂರು. ಲೋಖಂಡೆ ಸ್ನೇಹಲ್ ಸುಧಾಕರ್- ವ್ಯವಸ್ಥಾಪಕ ನಿರ್ದೇಶಕ, ಕವಿಕಾ, ಬೆಂಗಳೂರು. ಶ್ರೀರೂಪಾ- ನಿರ್ದೇಶಕರು, ರಾಜ್ಯ ರೇಷ್ಮೆ ಸಂಶೋಧನ ಸಂಸ್ಥೆ, ಬೆಂಗಳೂರು. ಗಿಟ್ಟೆ ಮಾಧವ್ ವಿಠಲ್ ರಾವ್- ಪ್ರಧಾನ ವ್ಯವಸ್ಥಾಪಕ, ಪುನರ್ವಸತಿ ಮತ್ತು ಪರಿಹಾರ, ಬಾಗಲಕೋಟೆ, ಎನ್. ಹೇಮಂತ್- ಸಿಇಒ, ಜಿ.ಪಂ., ಶಿವಮೊಗ್ಗ ಮತ್ತು ನೊಂಜೈ ಮಹ್ಮದ ಅಲಿ ಅಕ್ರಂ ಶಾ- ಸಿಇಒ, ಜಿ.ಪಂ. ವಿಜಯನಗರ, ಗಂಗೂಬಾಯಿ ರಮೇಶ್ ಮಾನಕರ್- ಪ್ರಧಾನ ಸಂಪಾದಕಿ, ಕರ್ನಾಟಕ ಗೆಜೆಟಿಯರ್, ಬೆಂಗಳೂರು, ಕೆ. ಲಕ್ಷ್ಮೀಪ್ರಿಯ- ಜಿಲ್ಲಾಧಿಕಾರಿ, ಉತ್ತರ ಕನ್ನಡ, ಕಾರವಾರಕ್ಕೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.