ಹಿಜಾಬ್ ವಿವಾದ: ಸುಪ್ರೀಂ ಕೋರ್ಟ್ ಅಂಗಳಕ್ಕೆ
Team Udayavani, Mar 16, 2022, 6:15 AM IST
ಉಡುಪಿ: ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವಕಾಲೇಜಿನಲ್ಲಿ ಹುಟ್ಟಿದ ಹಿಜಾಬ್ ವಿವಾದ ರಾಜ್ಯವ್ಯಾಪಿ ಪಸರಿಸಿ, ಉಚ್ಚ ನ್ಯಾಯಾಲಯದ ವಿಸ್ತೃತ ಪೀಠದ ಸಮಗ್ರ ತೀರ್ಪಿನ ಅನಂತರವೂ ವಿವಾದದ ಹೊಗೆ ಆರಿಲ್ಲ.
ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಜಿಲ್ಲೆಯ ನಾಲ್ವರು ವಿದ್ಯಾರ್ಥಿನಿಯರು ನಿರ್ಧರಿಸಿದ್ದಾರೆ. ಜಿಲ್ಲಾ ಮುಸ್ಲಿಂ ಒಕ್ಕೂಟ ಈ ಕಾನೂನು ಹೋರಾಟಕ್ಕೆ ಸಹಕಾರ ನೀಡಲಿದೆ ಎಂದು ಒಕ್ಕೂಟದ ಕಾನೂನು ಸಲಹೆಗಾರ ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.
ಶಾಲಾ ಕಾಲೇಜಿನಲ್ಲಿ ಹಿಜಾಬ್ ಸಹಿತ ಯಾವುದೇ ಧಾರ್ಮಿಕ ಸಂಕೇತದ ದಿರಿಸಿಗೆ ಅವಕಾಶವಿಲ್ಲ ಎಂಬ ನ್ಯಾಯ
ಪೀಠದ ತೀರ್ಪನ್ನು ಬಿಜೆಪಿ ಸಹಿತ ಹಿಂದೂಪರ ಸಂಘಟನೆ ಗಳು ಸ್ವಾಗತಿ ಸಿವೆ. ಮುಸ್ಲಿಂ ಮುಖಂಡರು, ಒಕ್ಕೂಟ ಗಳು ಅಸಮಾಧಾನ ಹೊರಹಾಕಿದ್ದಾರೆ.
ತೀರ್ಪಿನ ಪಾಲನೆ ಅಗತ್ಯ
ಕೋರ್ಟ್ ಆದೇಶವನ್ನು ಎಲ್ಲರೂಪಾಲಿಸಬೇಕು. ಅಸಮಾಧಾನ ಇರುವವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ
ವಾದ ಮಂಡಿಸಬಹುದು. ನ್ಯಾಯಾಲಯದ ಮೆಟ್ಟಿಲೇರಿರುವ ವಿದ್ಯಾರ್ಥಿ ಗಳು ಇನ್ನಾದರೂ ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾಗಬೇಕು ಎಂದು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಕಾನೂನು ಹೋರಾಟಕ್ಕೆ ಜಯ
ಹೈಕೋರ್ಟ್ ನೀಡಿರುವ ಐತಿ ಹಾಸಿಕ ತೀರ್ಪು ರಾಜ್ಯದ ವಿದ್ಯಾರ್ಥಿಗಳ ಸುವ್ಯವಸ್ಥಿತ ಶಿಕ್ಷಣಕ್ಕಾಗಿ ನಡೆಸಿದ ಕಾನೂನು ಬದ್ಧ ಹೋರಾಟಕ್ಕೆ ಸಂದ ಜಯವಾ ಗಿದೆ. ಹಿಜಾಬ್ ವಿವಾದದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ದೊಂದಿಗೆ ಚೆಲ್ಲಾಟವಾಡಿದ ಮತಾಂಧ ಶಕ್ತಿಗಳವಿರುದ್ಧ ಹೋರಾಟ ನಿರಂತರವಾಗಿರ ಲಿದೆ ಎಂದು ಉಡುಪಿ ಸರಕಾರಿ ಬಾಲಕಿ ಯರ ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ಆದೇಶವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ, ಇದು ಸಂವಿಧಾನಕ್ಕೆ ಸಿಕ್ಕ ವಿಜಯ ಎಂದಿದ್ದಾರೆ.
ಹಿಜಾಬ್ ನಮ್ಮ ಹಕ್ಕು
ಮಂಗಳವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿಜಾಬ್ ಪರ ಕಾನೂನು ಹೋರಾಟ ಮಾಡು
ತ್ತಿರುವ ವಿದ್ಯಾರ್ಥಿನಿಯರು, ನ್ಯಾಯಾಲಯದ ಆದೇಶ ತೃಪ್ತಿ ತಂದಿಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ
ಎಂದು ಸಾಂವಿಧಾನಿಕ ಹಕ್ಕನ್ನು ತೀರ್ಪಿನಲ್ಲಿ ತಿರಸ್ಕರಿಸಲಾಗಿದೆ. ನಮಗೆ ಹಿಜಾಬ್ ಹಾಗೂ ಶಿಕ್ಷಣ ಎರಡೂ ಮುಖ್ಯ. ಕುರಾನ್‌ನಲ್ಲಿ ಹೇಳಿರುವಂತೆ ಹಿಜಾಬ್ ಧರಿಸುವುದು ನಮ್ಮ ಹಕ್ಕು. ನಾವು ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗೆವು. ಮುಂದಿನ ನ್ಯಾಯಾಂಗ ಹೋರಾಟದ ಕುರಿತು ವಕೀಲರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿ ದ್ದೇವೆ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿನಿ ಅಲ್ಮಾಝ್ ಎ.ಎಚ್., ಆಲಿಯಾ ಅಸ್ಸಾದಿ ಮಾತನಾಡಿ, ಹಿಜಾಬ್ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿದೆ. ಮುಸ್ಲಿಮರಿಗೆ ಹಿಜಾಬ್ ಕಡ್ಡಾಯವಲ್ಲದೆ ಹೋಗುತ್ತಿದ್ದರೆ ನಾವು ರಿಟ್ ಅರ್ಜಿ ಹಾಕುತ್ತಿರಲಿಲ್ಲ. ನಮಗೆ ಶಿಕ್ಷಣವೂ ಬೇಕು. ಹಿಜಾಬ್ ಕೂಡ ಬೇಕು. ನಾವು ಹಿಜಾಬ್‌ಗಾಗಿ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ವಿದ್ಯಾರ್ಥಿನಿಯರಾದ ಶಿಫಾ, ರೇಶಂ ಮುಸ್ಕಾನ್ ಉಪಸ್ಥಿತರಿದ್ದರು.
ಹಿಜಾಬ್ ಕುರಿತ ಹೈಕೋರ್ಟ್ ಆದೇಶ ತೃಪ್ತಿಕರವಾಗಿಲ್ಲ. ಮುಸ್ಲಿಮರಿಗೆ ಧಾರ್ಮಿಕವಾಗಿ ಇದರ ಅಗತ್ಯವಿಲ್ಲ ಎಂದಿರುವುದು ನೋವು ತಂದಿದೆ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ತಿಳಿಸಿದ್ದಾರೆ.
ಹಿಂಜಾವೇ, ಬಜರಂಗದಳ ಸಹಿತವಾಗಿ ವಿವಿಧ ಹಿಂದೂ ಪರ ಸಂಘಟನೆ ಗಳು ತೀರ್ಪನ್ನು ಸ್ವಾಗತಿ ಸಿದ್ದು, ಎಸ್‌ಎಫ್ಐ, ಎಸ್‌ಡಿಪಿಐ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಹಿತ ವಿವಿಧ ಮುಸ್ಲಿಂ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.
ಬಿಗಿ ಬಂದೋಬಸ್ತ್
ಬುಧವಾರದಿಂದ ಶಾಲಾ ಕಾಲೇಜುಗಳಲ್ಲಿ ತರಗತಿ, ಪರೀಕ್ಷೆ ನಡೆಯುವುದರಿಂದ ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಅಲ್ಲದೆ ಕಾಲೇಜಿನ ಆವರಣದಲ್ಲಿ 144 ಸೆಕ್ಷನ್ ಕೂಡ ಜಾರಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.