ಆರ್ಲಪದವು – ಕೇರಳ ಅಂತರ್ ರಾಜ್ಯ ರಸ್ತೆ ತೆರವು ಕಾರ್ಯಕ್ಕೆ ಇನ್ನೂ ಕೂಡಿ ಬಂದಿಲ್ಲ ಮುಹೂರ್ತ?
ಗಡಿಭಾಗದ ಜನರಿಗೆ ಆಗುವ ಅನ್ಯಾಯಕ್ಕೆ ಯಾರು ಹೊಣೆ
Team Udayavani, Sep 23, 2020, 6:17 PM IST
ಪಾಣಾಜೆ: ಕೋವಿಡ್ 19 ಬಂದ ಮೇಲೆ ಸರಕಾರ ಅಂತರ್ ರಾಜ್ಯ ರಸ್ತೆಗಳನ್ನು ಬಂದ್ ಮಾಡುವಂತೆ ಆದೇಶಿಸಿತ್ತು.ಆದೇಶದಂತೆ ಅಂತರ್ ರಾಜ್ಯವನ್ನು ಸಂಪರ್ಕಿಸುವ ರಸ್ತೆಗಳನ್ನು ಸ್ಥಳೀಯ ಪಂಚಾಯತ್ ಪೊಲೀಸ್,ಅರಣ್ಯ ಇಲಾಖೆಗಳ ಜಂಟಿ ನೇತೃತ್ವದಲ್ಲಿ ಬಂದ್ ಮಾಡಲಾಗಿತ್ತು.ಇದೀಗ ಅಂತರ್ ರಾಜ್ಯಗಳ ಸಂಚಾರಕ್ಕೆ ಮುಕ್ತ ಅವಕಾಶಗಳು ಸರಕಾರ ನೀಡಿದೆ.ಆದರೆ ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್ಲಪದವು-ಕಡಂದೇಲು-ಗಿಳಿಯಾಲು-ಜಾಂಬ್ರಿ ಮೂಲಕ ಕೇರಳ ಸಂಪರ್ಕಿಸುವ ರಸ್ತೆಯ ತೆರವು ಕಾರ್ಯಕ್ಕೆ ಮುಹೂರ್ತ ಫಿಕ್ಸ್ ಆಗಿಲ್ಲ.
ಕೋವಿಡ್ 19 ನ ಆರಂಭದಲ್ಲಿ ಜಿಲ್ಲಾಡಳಿತ ಮತ್ತು ಸರಕಾರದ ಆದೇಶದಂತೆ ಸ್ಥಳೀಯ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ ನೇತೃತ್ವದಲ್ಲಿ ಪೋಲೀಸರ ಮತ್ತು ಅರಣ್ಯ ಇಲಾಖೆಯ ಸಹಕಾರದಿಂದ ರಸ್ತೆಯನ್ನು ಬಂದ್ ಮಾಡಲಾಗಿತ್ತು.ಇದೀಗ ಅಧ್ಯಕ್ಷರ ಕಾರ್ಯವಧಿ ಮುಗಿದಿರುವುದರಿಂದ ರಸ್ತೆಯನ್ನು ತೆರವುಗೊಳಿಸುವುವವರಾರು? ಎಂಬ ಪ್ರಶ್ನೆ ಉದ್ಬವಿಸಿದೆ.
ಈ ರಸ್ತೆ ಶೋಚನೀಯ ಸ್ಥಿತಿಯಲ್ಲಿದ್ದರೂ ಗಡಿನಾಡ ಜನರು ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದು ಹೋಗುವ ರಸ್ತೆಯಾಗಿದೆ.ಆರ್ಲಪದವುವಿನಿಂದ ಕಡಂದೇಲು,ಗಿಳಿಯಾಲು ಮೂಲಕ ಐತಿಹಾಸಿಕ ಜಾಂಬ್ರಿ ಗುಹೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ.ಇಲ್ಲಿಂದ ಮುಂದೆ ಕೇರಳ ರಾಜ್ಯದ ಕಿನ್ನಿಂಗಾರು ಮೂಲಕ ಮುಳ್ಳೇರಿಯವನ್ನು ಸಂಪರ್ಕಿಸುವ ಹತ್ತಿರದ ಅಂತರ್ ರಾಜ್ಯ ರಸ್ತೆಯಾಗಿದೆ.
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.24 ರಿಂದ ಸಂಜೆಯೂ ನಡೆಯಲಿದೆ ಆಶ್ಲೇಷ ಸೇವೆ
ಜವಾಬ್ದಾರಿ ಮರೆತ ಸ್ಥಳೀಯಾಡಳಿತ ?
ಈ ರಸ್ತೆಯ ಎರಡು ಕಡೆ ರಸ್ತೆ ಅಡ್ಡವಾಗಿ ಸುಮಾರು 6ಅಡಿ ಆಳದ ಕಂದಕವನ್ನು ತೆಗೆದು ಅಂತರ್ ರಾಜ್ಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.ಎರಡು ಕಡೆ ತೆಗೆದ ಕಂದಕಗಳು ಹಾಗೆಯೇ ಇದೆ.ಈ ರಸ್ತೆಯನ್ನು ಅವಲಂಬಿತವಾಗಿರುವ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಹಲವು ಜನರು ವಾಹನಗಳಲ್ಲಿ ಪ್ರಯಾಣಿಸಲಾಗದೆ ಪರದಾಡುತ್ತಿದ್ದಾರೆ.ಜಾಂಬ್ರಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಕಂದಕದ ವರೆಗೆ ಬಂದು ಮುಂದೆ ಚಲಿಸಲಾಗದೇ , ಪ್ರೇಕ್ಷಣೀಯ ಸ್ಥಳವನ್ನು ವೀಕ್ಷಿಸಲಾಗದೇ ಹಿಂದಿರುತ್ತಿದ್ದಾರೆ.ಕಂದಕ ತೆಗೆಯುವಾಗ ಇದ್ದ ಕರ್ತವ್ಯ ಪ್ರಜೆÒ,ಮುತುವರ್ಜಿ ಸ್ಥಳೀಯಾಡಳಿತ ಮತ್ತು ಇಲಾಖೆಗೆ ಯಾಕಿಲ್ಲ ? ಎಂದು ಜನರಾಡಿಕೊಳ್ಳುತ್ತಿದ್ದಾರೆ. ತೆರವು ಕಾರ್ಯ ನಡೆಯದೇ ಗಡಿಭಾಗದ ಜನರಿಗೆ ಅನ್ಯಾಯವಾಗಿದೆ.
ಪಾಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.ಆಡಳಿತಾಧಿಕಾರಿ ಯಶಸ್ ಮಂಜುನಾಥ ರವರು ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆ ಮಾತನಾಡಿ ಎರಡು ದಿನದಲ್ಲಿ ಮುಚ್ಚಿಸುವ ಭರವಸೆ ನೀಡಿದ್ದಾರೆ.
ಆರ್ಲಪದವು-ಕಡಂದೇಲು-ಗಿಳಿಯಾಲು-ಕೇರಳ ಸಂಪರ್ಕಿಸುವ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖೆಯವರ ಜೊತೆ ಮಾತನಾಡಿ ತೆರವು ಕಾರ್ಯಕ್ಕೆ ಕ್ರಮಕೈಗೊಳ್ಳಲಾಗುವುದು.
– ನವೀನ್ ಭಂಡಾರಿ,ತಾಲೂಕು ಕಾರ್ಯನಿರ್ವಹಣಾಧಿಕಾರಿ,ಪುತ್ತೂರು
ಕಳೆದ ಸುಮಾರು 6 ತಿಂಗಳಿನಿಂದ ರಸ್ತೆಯನ್ನು ಬಂದ್ ಮಾಡಲಾಗಿದೆ.ಅಂತರ್ ರಾಜ್ಯ ರಸ್ತೆ ಮುಕ್ತ ಅವಕಾಶ ನೀಡಿದರೂ ನಮಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ.ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನಹರಿಸಿ ತೆಗೆದ ಕಂದಕಗಳಿಗೆ ಮಣ್ಣು ಮುಚ್ಚಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ.
– ಜಿ.ಮಹಾಬಲೇಶ್ವರ ಭಟ್ ಗಿಳಿಯಾಲು,ಪಾಣಾಜೆ
ದಿನನಿತ್ಯದ ವಸ್ತುಗಳಿಗೆ ಆರ್ಲಪದವು ಪೇಟೆಯನ್ನು ಅವಲಂಬಿಸಿದ್ದಾನೆ.ಕರ್ನಾಟಕ ಪ್ರದೇಶದಲ್ಲಿ ಎರಡು ಕಡೆ ರಸ್ತೆಯನ್ನು ಬಂದ್ ಮಾಡಿರುವುದರಿಂದ ಆರ್ಲಪದವಿಗೆ ಬರಬೇಕಾದರೆ ಸುತ್ತಿ ಬಳಸಿ ಸಂಚಾರಿಸುತ್ತಿದ್ದಾನೆ.ಇದರಿಂದ ಸಮಯ ಮತ್ತು ಇಂಧನದ ಅಪ ವ್ಯಯವಾಗುತ್ತಿದೆ.ಕೂಡಲೇ ಮಣ್ಣು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು
– ಸಂತೋಷ್,ಕಿನ್ನಿಂಗಾರು,ನೆಟ್ಟಣಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.