Karnataka: ತ್ರಿವಳಿ ಪರಿಹಾರಕ್ಕಾಗಿ ಸಿದ್ದು , ಡಿಕೆಶಿ ಹೊಸದಿಲ್ಲಿಗೆ
ಇಂದು ನಿಗಮ, ಮಂಡಳಿ ಪಟ್ಟಿ ಅಂತಿಮಕ್ಕೆ ಕಸರತ್ತು- ಲೋಕ ಚುನಾವಣೆ, ಕಾರ್ಯಾಧ್ಯಕ್ಷರ ನೇಮಕ ಚರ್ಚೆ
Team Udayavani, Dec 18, 2023, 12:56 AM IST
ಬೆಂಗಳೂರು: ಲೋಕಸಭೆ ಚುನಾವಣೆ, ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ, ನಿಗಮ-ಮಂಡಳಿ ಪಟ್ಟಿಗೆ ಅಂಕಿತ -ಈ ಮೂರು ಕಾರ್ಯ ಸೂ ಚಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಹೊಸದಿಲ್ಲಿಗೆ ತೆರಳಲಿದ್ದಾರೆ.
ಎರಡು ದಿನಗಳ ದಿಲ್ಲಿ ಪ್ರವಾಸ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಕಾಂಗ್ರೆಸ್ ವರಿಷ್ಠರ ಜತೆಗೆ ಬಿರುಸಿನ ಸಮಾಲೋಚನೆ ನಡೆಸಲಿದ್ದಾರೆ. ಇನ್ನೂ ಆಗದ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಅಂಕಿತ ಹಾಕಿಸಿಕೊಳ್ಳುವುದು, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಪುನಾರಚನೆ- ಪ್ರಮುಖವಾಗಿ ಈ ಮೂರು ಅಜೆಂಡಾ ಇರಿಸಿಕೊಂಡಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆ ದರೆ ಪ್ರವಾಸದಿಂದ ಹಿಂದಿರುಗುವಾಗ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
ನಿಗಮ-ಮಂಡಳಿಗಳ ಅಧ್ಯಕ್ಷರ ಪಟ್ಟಿ ಈ ಹಿಂದೆಯೇ ಸಿದ್ಧಗೊಂಡಿತ್ತು. ಆದರೆ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ. ಪಟ್ಟಿ ಅಂತಿಮಗೊಂಡಿದ್ದರೂ ಯಾರಿಗೆ ಯಾವ ನಿಗಮ ಅಥವಾ ಮಂಡಳಿ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಅದು ಈ ಪ್ರವಾಸದಲ್ಲಿ ಸ್ಪಷ್ಟವಾಗಲಿದೆ. ಕೆಲವೇ ಕೆಲವು ನಿಗಮ/ ಮಂಡಳಿಗಳಿಗೆ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಪೈಪೋಟಿ ಇದೆ. ಕೆಲವರು ಮುನಿಸಿಕೊಂಡಿದ್ದಾರೆ. ಈ ಮುನಿಸು ಬರುವ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ. ಈ ಅಂಶವನ್ನು ಮನಗಂಡು ಮತ್ತೂಂದು ಸುತ್ತು ಅಳೆದು-ತೂಗುವ ಕಸರತ್ತು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಸರತ್ತು ಆರಂಭ
ಅಲ್ಲದೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ಶತಾಯಗತಾಯ ಈ ಬಾರಿ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಅದಕ್ಕೆ ತಂತ್ರ ರೂಪಿಸು ತ್ತಿದೆ. ಜಾತಿ ಲೆಕ್ಕಾಚಾರ, ಪ್ರದೇಶವಾರು ಪ್ರಭಾವ, ಕೆಲವು ಸಚಿವರು ಕ್ಷೇತ್ರಗಳ ಬಗ್ಗೆ ನೀಡಿರುವ ವರದಿ, ಹಲವರು ಇದುವರೆಗೆ ವರದಿ ಸಲ್ಲಿಸದೆ ಇರುವುದಕ್ಕೆ ಕಾರಣಗಳು ಇತ್ಯಾದಿ ಹಲವು ವಿಚಾರಗಳು ದಿಲ್ಲಿ ಪ್ರವಾಸದ ವೇಳೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಪುನಾರಚನೆ ಕೂಡ ಆಗಬೇಕಿದೆ. ಈಗಿರುವ ಐವರು ಕಾರ್ಯಾಧ್ಯಕ್ಷರಲ್ಲಿ ನಾಲ್ವರಿಗೆ ಎರಡೆರಡು ಹುದ್ದೆಗಳಿದ್ದು, ಅದರಲ್ಲಿ ಮೂವರು ಸಚಿವರಾಗಿದ್ದಾರೆ. ಮತ್ತೂಬ್ಬರು ಮೇಲ್ಮನೆಯಲ್ಲಿ ಮುಖ್ಯ ಸಚೇತಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬದಲಾವಣೆ ಮಾಡಬೇಕಿದ್ದು, ಈ ಬಾರಿ ಆರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಪಕ್ಷ ಉದ್ದೇಶಿಸಿದೆ. ಜತೆಗೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕೂಡ ಆಗಬೇಕಿದೆ. ಇದು ಹೈಕಮಾಂಡ್ ಜತೆಗಿನ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪಟ್ಟಿಗೆ ಅಂಕಿತ ಪಡೆಯಬೇಕಿದೆ. ಹಾಗಾಗಿ ದಿಲ್ಲಿಗೆ ತೆರಳು ತ್ತಿದ್ದೇವೆ. ನಾಯಕರು ನಮ್ಮನ್ನು ಕರೆದಿಲ್ಲ. ನಾವೇ ಅಲ್ಲಿಗೆ ಹೋಗುತ್ತಿದ್ದೇವೆ.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.