ಕ್ರೀಡೆಗೆ ಹಲವು ಯೋಜನೆ, ಅನುದಾನವೂ ಭರಪೂರ
ಗ್ರಾಮೀಣ ಭಾಗದಲ್ಲಿ ನರೇಗಾದಡಿ ಕ್ರೀಡಾಂಗಣ ನಿರ್ಮಿಸಲು 504 ಕೋಟಿ ರೂ. ಅನುದಾನ
Team Udayavani, Mar 5, 2022, 6:30 AM IST
ಗ್ರಾಮೀಣ ಹಾಗೂ ದೇಶಿ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಕ್ರೀಡಾ ಅಂಕಣಗಳನ್ನು ಒಟ್ಟು 504 ಕೋಟಿ ರೂ.ಮೊತ್ತದಲ್ಲಿ ನಿರ್ಮಿಸಲಾಗುವುದು. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಂಗಣವನ್ನು ಉ®°ತೀಕರಿಸಿ ಅತ್ಯಾಧುನಿಕ ಕ್ರೀಡಾ ಉಪಕರಣ ಒದಗಿಸಲು ಒಟ್ಟು 100 ಕೋಟಿ ರೂ. ಮೊತ್ತದಲ್ಲಿ ಸಮಗ್ರ ಯೋಜನೆ ರೂಪಿಸಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ.
ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಜಕ್ಕೂರಿನಲ್ಲಿರುವ ವಿಮಾನ ನಿಲ್ದಾಣ ನವೀಕರಿಸಿ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ತರಬೇತಿ ಶಾಲೆಯನ್ನು ಪುನಾರಂಭಿಸಲಾಗಿದ್ದು 100 ಯುವ ಜನರಿಗೆ ಪೈಲೆಟ್ ತರಬೇತಿಗೆ ಚಾಲನೆ ನೀಡಲಾಗಿದೆ. ಆ ಶಾಲೆಯನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಉತ್ಕೃಷ್ಟ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಪೇ ಆ್ಯಂಡ್ ಪ್ಲೇ: ರಾಜ್ಯದ ಕ್ರೀಡಾಂಗಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಆರ್ಥಿಕ ಸ್ವಾವಲಂಬನೆಗೊಳಿಸಿ ಮೇಲ್ದರ್ಜೆಗೇರಿಸಲು ಬಳಕೆದಾರರ ಶುಲ್ಕ (ಪೇ ಆ್ಯಂಡ್ ಪ್ಲೇ) ವ್ಯವಸ್ಥೆಯನ್ನು ಅಳವಡಿಸಲಾಗುವುದು. ರಾಜ್ಯದಲ್ಲಿ ಸಾಹಸ ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು ಉನ್ನತೀಕರಿಸಿ ಅಗತ್ಯ ಸಾಹಸ ಕ್ರೀಡಾ ಮೂಲ ಸೌಕರ್ಯ ಒದಗಿಸಲಾಗುವುದು.
ಅಮೃತ ಕ್ರೀಡಾ ದತ್ತು ಯೋಜನೆ
2024ರ ಒಲಂಪಿಕ್ ಹಾಗೂ ಪ್ಯಾರಾಲಂಪಿಕ್‌ಗೆ ರಾಜ್ಯದಿಂದ ಕನಿಷ್ಠ 75 ಕ್ರೀಡಾಪಟುಗಳನ್ನು ಸಿದ್ಧಪಡಿಸಲು ಅಮೃತ ಕ್ರೀಡಾ ದತ್ತು ಯೋಜನೆಯಡಿ ತಲಾ 10 ಲಕ್ಷ ರೂ.ವರೆಗೆ ಪ್ರತಿ ವರ್ಷ ಶ್ರೇÐu ಮಟ್ಟದ ತರಬೇತಿ ಪಡೆಯಲು ವಿನಿಯೋಗಿಸಲಾಗುವುದು. ಜತೆಗೆ 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯ ಲ್ಲಿರುವ ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶವನ್ನು 1 ಸಾವಿರ ರೂ.ಹೆಚ್ಚಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ.
ಶಿವಮೊಗ್ಗದಲ್ಲಿ ಹೊಸ ಕ್ರೀಡಾ ಅಕಾಡೆಮಿ
ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಎನ್.ಎಸ್.ಡಿ.ಎಫ್.ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಹೊಸದಾಗಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿಸಲಾಗಿದ್ದು ಇದಕ್ಕಾಗಿ 20 ಕೋಟಿ ರೂ. ಒದಗಿಸಲಾಗುವುದು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021ನ್ನು ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಈ ಕ್ರೀಡಾಕೂಟದಲ್ಲಿ 8,000ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ 20 ವಿವಿಧ ಕ್ರೀಡೆಗಳಲ್ಲಿ Ó³ರ್ಧೆಗಳನ್ನು ಸಂಘಟಿಸಲಾಗುವುದು. ಮೈಸೂರಿನಲ್ಲಿ ಜಾರಿಗೊಳಿಸಿರುವ ರೀತಿಯಲ್ಲಿ ರಾಜ್ಯಾದ್ಯಂತ ಯುವ ಕೇಂದ್ರಿತ ವಿವಿಧ ಯೋಜನೆ ಸಂಯೋಜಿಸಿ ಯುವಜನತೆಗೆ ಉತ್ತಮ ಸೇವೆ ದೊರಕಿಸಲಾಗುವುದು. ಜತೆಗೆ ನೇತಾಜಿ ಬೋಸ್ 125ನೇ ಜ®¾ ದಿನಾಚರಣೆ ಹಿನ್ನೆಲೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿ ನೀಡಲಾಗುವುದು. ಜತೆಗೆ ಉತ್ತರ ಕನ್ನಡ, ಚಿತ್ರದುರ್ಗ, ರಾಮನಗರ ಮತ್ತು ಕೆಆರ್‌ಎಸ್ ಹಾಗೂ ಆಲಮಟಿ r ಹಿನ್ನೀರಿನಲ್ಲಿ ಸಾಹಸ ಕ್ರೀಡಾ ತರಬೇತಿ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.