ಕವಿಗನ್ನಡಂ ಗೆಲ್ಗೆ…ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಘೋಷಣೆ
ಸಾಹಿತಿಗಳ ಹೆಸರಿನಲ್ಲಿ ವಿಶೇಷ ಯೋಜನೆ
Team Udayavani, Mar 5, 2022, 6:40 AM IST
ನಾಡೋಜ ಚನ್ನವೀರ ಕಣವಿ ಅವರ ಕವಿತೆ ವಾಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಕರ್ನಾಟಕ ಕಲಾಗ್ರಾಮವನ್ನು ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕವಾಗಿ ಸಜ್ಜುಗೊಳಿಸಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಯಕ್ಷಗಾನ ಕಲೆಯ ಸಮಗ್ರ ಆಯಾಮಗಳ ಕುರಿತು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು. ಕೈವಾರ ತಾತಯ್ಯ ಜಯಂತಿ ಯನ್ನು ರಾಜ್ಯ ಸರಕಾರದ ವತಿಯಿಂದ ಪ್ರತಿ ವರ್ಷ ಮಾ.27ರಂದು ಆಚರಿಸಲಾಗುವುದು.
ನಶಿಸುತ್ತಿರುವ ತಳ ಸಮುದಾಯದಲ್ಲಿರುವ ವಿಶಿಷ್ಟ ಕಲೆಗಳನ್ನು ಉಳಿಸಿ ಮುನ್ನಲೆಗೆ ತರಲು ರಾಜ್ಯದ ಪ್ರತಿ ವಿಭಾಗ ಮಟ್ಟದಲ್ಲಿ ಒಂದರಂತೆ ಒಟ್ಟು 4 ಸಾಂಸ್ಕೃತಿಕ ಶಿಬಿರ ಕಾರ್ಯಕ್ರಮ ಆಯೋಜಿಸಲಾಗುವುದು.
ಸಾಹಿತಿಗಳ ಹೆಸರಿನಲ್ಲಿ ವಿಶೇಷ ಯೋಜನೆ: ಇತ್ತೀಚೆಗೆ ನಿಧನರಾದ ಕವಿ ಡಾ| ಸಿದ್ಧಲಿಂಗಯ್ಯ ಹಿರಿಯ ಸಂಶೋಧಕ ಡಾ| ಎಂ.ಚಿದಾನಂದಮೂರ್ತಿ, ಡಾ| ಚಂದ್ರಶೇಖರ ಪಾಟೀಲ್, ಚನ್ನವೀರ ಕಣವಿ ಅವರ ಅಮೂಲ್ಯ ಸಾಹಿತ್ಯಗಳನ್ನು ಉಳಿಸಲು ವಿಶೇಷ ಯೋಜನೆ ರೂಪಿಸಲಾಗುವುದು. ಜತೆಗೆ ಡಾ| ಮಹಾದೇವ ಬಣಕಾರರ ಸಾಂಸ್ಕೃತಿಕ ಭವನವನ್ನು ಹಾವೇರಿ ಜಿಲ್ಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು.
ನೆರೆ ರಾಜ್ಯಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಪಡಿಸಲು, ಕಾಸರಗೋಡಿನಲ್ಲಿ ಕಯ್ನಾರ ಕಿಂಞಣ್ಣ ರೈ ಹೆಸರಿನಲ್ಲಿ, ಅಕ್ಕಲಕೋಟೆಯಲ್ಲಿ ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಮತ್ತು ಗೋವಾದಲ್ಲಿ ಕ®°ಡ ಭವನ ನಿರ್ಮಿಸಲಾಗುವುದು. ಗಡಿ ಭಾಗಗಳಲ್ಲಿ ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳು ಮುಂತಾದ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಒದಗಿಸಿ ಅಭಿವೃದ್ಧಿಪಡಿಸಲಾಗುವುದು.
ಸ್ಮಾರಕ ಸಂರಕ್ಷಿಸಲು
ಸ್ಮಾರಕ ದತ್ತು ಯೋಜನೆ
ರಾಜ್ಯದ ಸ್ಮಾರಕ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ(ಸ್ಮಾರಕ ದತ್ತು ಯೋಜನೆ) ಮೂಲಕ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಪಾರಂಪರಿಕ ಪ್ರವಾಸಿ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಯೋಗದೊಂದಿಗೆ ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ.
ಸ್ವ ಉದ್ಯೋಗಕ್ಕೆ ಗ್ರಾ.ಪಂ.ಗೆ ಒಂದು ಸ್ವಹಾಯ ಗುಂಪು
ರಾಜ್ಯ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪುಗಳನ್ನು ರಚಿಸಿ, ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಯುವಕರನ್ನು ಪೋ›ತ್ಸಾಹಿಸಲಾಗುವುದು
ಎಂದುಸಿಎ ಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಬಜೆಟ್‌ನಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಅನುದಾನ ಘೋಷಿಸುವ ಮೂಲಕ ಸಿಎಂ ಕನ್ನಡದ ಮೇಲಿನ ತಮ್ಮ ಅಪಾರ ಕಾಳಜಿಯನ್ನು ತೋರ್ಪಡಿಸಿದ್ದಾರೆ. ಜತೆಗೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ.ನೀಡಿರುವುದಕ್ಕೆ ಸಿಎಂಗೆ ಧನ್ಯವಾದ ಹೇಳುತ್ತೇನೆ.
-ಡಾ. ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಸಾಂಸ್ಕೃತಿಕ ವಿಕಾಸದ ಜತೆಗೆ ನೈತಿಕ ಉನ್ನತಿಯನ್ನು ಬಯಸುವ ರೀತಿಯಲ್ಲಿ ಈ ಬಜೆಟ್ ಇದೆ. ವಿವೇಕಾನಂದ ಹೆಸರಿನಲ್ಲಿ ಸ್ವ ಸಹಾಯ ಗುಂಪು ರಚನೆಯತ್ತ ಸರ್ಕಾರ ಹೆಜ್ಜೆಯಿರಿಸಿದೆ. ಜತೆಗೆ ನಾಡಿನ ಗಡಿಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಒಟ್ಟಾರೆ ಈ ಬಜೆಟ್ ಸರ್ವ ಸ್ವರ್ಶಿ, ಸರ್ವ ವ್ಯಾಪಿ ಮತ್ತು ಸರ್ವತ್ಕೃಷ್ಟ ಎನ್ನುವ ರೀತಿಯಲ್ಲಿ ಕಾಣುತ್ತಿದೆ.
-ಡಾ.ಬಿ.ವಿ.ವಸಂತಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಮುಖ್ಯಾಂಶಗಳು
1. ಯಕ್ಷಗಾನ ಕಲೆಯ ಸಮಗ್ರ ಆಯಾಮ ಗಳ ಕುರಿತು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು
2.ಕೈವಾರ ತಾತಯ್ಯ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ಮಾ.27ರಂದು ಆಚರಿಸಲಾಗುವುದು
3. ಕವಿಸಿದ್ದಲಿಂಗಯ್ಯ, ಡಾ.ಎಂ.ಚಿದಾನಂದ ಮೂರ್ತಿ, ಡಾ.ಚಂದ್ರಶೇಖರ ಪಾಟೀಲ್, ಚನ್ನವೀರ ಕಣವಿ ಅವರ ಅಮೂಲ್ಯ ಸಾಹಿತ್ಯ ಉಳಿಸಲು ವಿಶೇಷ ಯೋಜನೆ
4.ಮಂಗಳೂರು ವಿವಿಯಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.