ಸಂಸತ್‌ನ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಕಾರವಾರದ ಚೇತನಾ ಭಾಷಣ
ಯುವಜನತೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ್ದಾಳೆ.
Team Udayavani, Mar 2, 2023, 6:32 PM IST
ಕಾರವಾರ: ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಕರ್ನಾಟಕದ ಪ್ರತಿನಿಧಿ ಯಾಗಿ ಕಾರವಾರದ ಹುಡುಗಿ ಚೇತನಾ ಕೊಲ್ವೇಕರ್ ಅರ್ಥಪೂರ್ಣ ಭಾಷಣ ಮಾಡಿದ್ದಾಳೆ.
ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಆಯೋಜನೆಯ ನಾಲ್ಕನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವ ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿದ್ದು, ಪ್ರತಿ ರಾಜ್ಯಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕರ್ನಾಟಕದಿಂದಲೂ ಮೂವರು ಭಾಗವಹಿಸಿದ್ದು, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಾರವಾರದ ಚೇತನಾ ಕೊಲ್ವೇಕರ್ ಸಂಸತ್‌ನಲ್ಲಿ ಭಾಷಣ ಮಾಡಿ ಮಿಂಚಿದ್ದಾರೆ.
ಚೇತನಾ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ. ಈ ಹಿಂದೆ ಕೂಡ ಯುವ ಸಂಸತ್ ಉತ್ಸವದಲ್ಲಿ ಸಭಿಕಳಾಗಿ ಸಂಸತ್ ಭವನದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದ ಈಕೆ, ಈ ಬಾರಿ ತಾನೇ ಭಾಷಣ ನೀಡಲು ಅವಕಾಶ ಪಡೆಯುವ ಮೂಲಕ ಯುವಜನತೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ್ದಾಳೆ.
ಈ ಯುವ ಸಂಸತ್ ಉತ್ಸವದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಮಾತ್ರ ಮಾತನಾಡಲು ಅವಕಾಶವಿದೆ. ಆದರೆ ಚೇತನಾ ಮಾತೃಭಾಷೆ ಕೊಂಕಣಿಯಲ್ಲೇ ಭಾಷಣ ಪ್ರಾರಂಭಿಸಿ ಮೆಚ್ಚುಗೆಗಳಿಸಿದ್ದಾಳೆ. “ಕರ್ನಾಟಕದ ಕಾಶ್ಮೀರ ಕಾರವಾರದ ಹುಡುಗಿಯಿಂದ ಎಲ್ಲರಿಗೂ ಬೆಳಗಿನ ವಂದನೆಗಳು’ ಎಂದು ಕೊಂಕಣಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸರ್ಕಾರದಲ್ಲಿ ಯುವಜನತೆಯ ಪಾತ್ರದ ಕುರಿತು ಭಾಷಣ ಪ್ರಾರಂಭಿಸಿದ್ದಾರೆ. ಯುವಜನತೆಯೇ ದೇಶದ ಭವಿಷ್ಯ. ಮುಂದಿನ ಪೀಳಿಗೆಯ ಅಂತಿಮ ಭರವಸೆ.ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬಂತೆ ಯುವಕರಿಲ್ಲದೆ ದೇಶವಿಲ್ಲ ಎನ್ನುವುದನ್ನ ಚೇತನಾ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.