Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Oct 4, 2024, 12:50 AM IST
ಮಾದಕ ವಸ್ತು ಪತ್ತೆ: ಇಬ್ಬರ ಸೆರೆ
ಕಾಸರಗೋಡು: ಚೆರ್ವತ್ತೂರಿನಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 0.2975 ಗ್ರಾಂ ಮಾದಕ ಮೆಥಾಫಿಟಮಿನ್ ಪತ್ತೆಯಾಗಿದ್ದು, ಈ ಸಂಬಂಧ ಪಡನ್ನ ವಡಕ್ಕೇಪುರದ ಮೊಹಮ್ಮದ್ ಸಿನಾನ್ (22) ಮತ್ತು ಪಡನ್ನ ಕಡಪ್ಪುರದ ಖಾಸಿಂ ಅಲಿ(24)ಯನ್ನು ಬಂಧಿಸಲಾಗಿದೆ.
ವ್ಯಾಪಾರಿಗೆ ಹಲ್ಲೆ: ಕೇಸು ದಾಖಲು
ಉಪ್ಪಳ: ಅಂಗಡಿಗೆ ನುಗ್ಗಿ ವಿದ್ಯಾನಗರ ಉಳಿಯ ಪಟ್ಲದ ಸವಾದ್(32) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಟ್ಟತ್ತೋಡಿ ನಿವಾಸಿಗಳಾದ ಶಫೀಕ್, ಸಾದಿಕ್, ಸಮೀಂ, ಶಹದಾಬ್ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಸವಾದ್ ಉಪ್ಪಳ ಗೇಟ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದು, ಅಲ್ಲಿಗೆ ಬಂದ ನಾಲ್ವರು ಹಲ್ಲೆ ಮಾಡಿದ್ದಾಗಿ ದೂರು ನೀಡಲಾಗಿತ್ತು.
ಪತಿಯ ಅಗಲುವಿಕೆಯಿಂದ ನೊಂದು ಬೆಂಕಿ ಹಚ್ಚಿಕೊಂಡ ಮಹಿಳೆ ಸಾವು ಕಾಸರಗೋಡು, ಅ.3: ಪತಿಯ ನಿಧನದಿಂದ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದ ವಿದ್ಯಾನಗರ ನೆಲ್ಕಳ ಕಾಲನಿಯ ದಿ| ರಾಘವ ಅವರ ಪುತ್ರಿ ಪ್ರಫುಲ್(55) ಸಾವಿಗೀಡಾಗಿದ್ದಾರೆ. ಇವರ ಪತಿ ನರಸಿಂಹ 6 ತಿಂಗಳ ಹಿಂದೆ ನಿಧನ ಹೊಂದಿದ್ದರು. ಸೆ.16ರಂದು ಪ್ರಫುಲ್ ಬೆಂಕಿ ಹಚ್ಚಿಕೊಂಡಿದ್ದರು.
ನಕಲಿ ಚಿನ್ನ ಅಡವು
ವ್ಯಕ್ತಿಯ ಬಂಧನ
ಕಾಸರಗೋಡು: ಹೊಸದುರ್ಗ ಸೇವಾ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ 25.470 ಗ್ರಾಂ ನಕಲಿ ಚಿನ್ನಾಭರಣ ಅಡವಿರಿಸಿ 1,17,000 ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಂಞಂಗಾಡ್ ನೀಲಂಕರ ಬಿ.ಕೆ.ಹೌಸ್‌ನ ಪಳೆಯಪಾಟಿಲ್ಲತ್ ಅಶ್ರಫ್‌ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. 2024 ಎ. 4ರಂದು ಈತ ಚಿನ್ನಾಭರಣ ಅಡವಿರಿಸಿ, ಹಣ ಪಡೆದು ವಂಚಿಸಿದ್ದಾಗಿ ಬ್ಯಾಂಕಿನ ಅಸಿಸ್ಟೆಂಟ್ ಸೆಕ್ರೆಟರಿ ಕೆ. ಪ್ರದೀಪ್ ನೀಡಿದ ದೂರಿದಂತೆ ಬಂಧಿಸಲಾಗಿದೆ.
ವೃದ್ಧ ಆತ್ಮಹತ್ಯೆ
ಕಾಸರಗೋಡು: ಚೆರ್ವತ್ತೂರು ಪುದಿಯಕಂಡಂ ನಿವಾಸಿ ಪಿ.ವಿ.ನಾರಾಯಣನ್ (70) ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ. ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.