ಕಡಲ ಕಿನಾರೆಯಿಂದ ನುಸುಳುವಿಕೆ; ಕಟ್ಟೆಚ್ಚರ
ಅಕ್ರಮ ಪ್ರವೇಶ ತಡೆಗೆ ಪೊಲೀಸರ ಹದ್ದಿನಕಣ್ಣು
Team Udayavani, Apr 8, 2020, 5:50 AM IST
ವಿಶೇಷ ವರದಿ-ಮಹಾನಗರ: ಕಾಸರಗೋಡು- ಕರ್ನಾಟಕ ಸಂಪರ್ಕಿಸುವ ರಸ್ತೆ ಬಂದ್ ಮಾಡಿದ ಕಾರಣದಿಂದ, ಕೆಲವರು ಕಡಲ ಕಿನಾರೆಯ ಮೂಲಕ ಅಕ್ರಮವಾಗಿ ದ.ಕ. ಜಿಲ್ಲೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಈಗ ಕರಾವಳಿ ಕಾವಲು ಪೊಲೀಸ್ ಪಡೆ ಕಡಲ ಕಿನಾರೆಯಲ್ಲಿ ಹದ್ದಿನ ಕಣ್ಣಿರಿಸಿದೆ.
ಕಾಸರಗೋಡಿನ ಕೋವಿಡ್ 19 ಸೋಂಕಿ ತರ ಸಂಪರ್ಕದಲ್ಲಿರುವ ಬಹುತೇಕ ಮಂದಿ ಗಡಿ ಭಾಗದಲ್ಲಿಯೇ ಇರುವ ಕಾರಣದಿಂದ ಅವರು ಕಡಲ ಕಿನಾರೆಯ ಮೂಲಕವೂ ದ.ಕ. ಜಿಲ್ಲೆ ಪ್ರವೇಶಿಸುವ ಸಾಧ್ಯತೆಯಿದೆ ಎಂಬ ಸುಳಿವಿನ ಆಧಾರದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ. ಜತೆಗೆ ಈ ಭಾಗದಲ್ಲಿ ಮರಳುಗಾರಿಕೆ ನಡೆಸುತ್ತಿರುವ ದೋಣಿಯ ಸಹಾಯದಿಂದಲೂ ದ.ಕ. ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆಯೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಕಾಸರಗೋಡು-ಮಂಗಳೂರು ನಡುವಿನ ರಸ್ತೆ ಗಡಿ ಬಂದ್‌ನಲ್ಲಿ ಕೊಂಚ ಬದಲಾವಣೆಯಾಗಿದ್ದು, ತುರ್ತು ಸೇವೆಗಳ ವಾಹನ ಓಡಾಟಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ. ಆದರೆ ಬೇರೆಲ್ಲ ಗಡಿಗಳನ್ನು ಬಂದ್ ಮಾಡಿ ವಲಸೆ ತಡೆಯುವಂತೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಆಯಾ ಸರಕಾರಗಳಿಗೆ ಸೂಚಿಸಿವೆ. ಇದರಂತೆ ರಾಜ್ಯ ಸರಕಾರವು ಎಲ್ಲ ಗಡಿ ಬಂದ್ ಮಾಡಿತ್ತು. ಇಷ್ಟಿದ್ದರೂ ನದಿ, ಕಡಲ ಕಿನಾರೆ ಮೂಲಕವೂ ಕೆಲವರು ದ.ಕ. ಪ್ರವೇಶಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ನದಿ/ಕಡಲ ಕಿನಾರೆ ವ್ಯಾಪ್ತಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದೆ. ಎಲ್ಲರ ಚಲನವಲನದ ಮೇಲೆ ಕಣ್ಣಿಟ್ಟಿದೆ.
ನದಿ ಕಿನಾರೆಯಿಂದ ನುಸುಳುವಿಕೆ
ಕೇರಳ ಗಡಿ ಭಾಗದ ಉದ್ಯಾವರ ಬೀಚ್‌ನಲ್ಲಿ ಮೀನು ಮಾರಾಟ ನಡೆಯುತ್ತಿದೆ. ಸಮೀಪದ ಕಣ್ವತೀರ್ಥ ನದಿ ಕಿನಾರೆಯಿಂದ ತಲಪಾಡಿ ಗಡಿ ಪ್ರವೇಶಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ದೂರವಿದೆ. ಹಾಗಾಗಿ ಇಲ್ಲಿಂದ ತಲಪಾಡಿ ರಸ್ತೆ ಮೂಲಕ ಅಥವಾ ನದಿ ತಾಣದ ಮೂಲಕ ದ.ಕ. ಜಿಲ್ಲೆಯ ಗಡಿ ಪ್ರವೇಶಿಸುವ ಸಾಧ್ಯತೆಯಿದೆ. ತಲಪಾಡಿ ಸಮೀಪದ ಉಚ್ಚಿಲ ಭಟ್ರಪಾಡಿ ನದಿ ಕಿನಾರೆ ಕೂಡ ಕೇರಳಿಗರ ಪ್ರವೇಶಕ್ಕೆ ಸುಲಭದ ದಾರಿಯಾಗಿದೆ. ಇಲ್ಲಿಯೂ ನದಿ ನೀರಿನಲ್ಲಿ ಗಡಿ ದಾಟಿ ಹಲವು ಜನರು ಬರುತ್ತಿದ್ದಾರೆ ಎಂಬ ಆರೋಪವಿದೆ.
ತಲಪಾಡಿಗೆ ಹೊಂದಿಕೊಂಡಂತೆ ಕೇರಳ ಗಡಿ ಭಾಗದ ನದಿಯಲ್ಲಿ ಹೇರಳವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದೇ ದೋಣಿ ಮೂಲಕ ಅಕ್ರಮವಾಗಿ ಮಂಗಳೂರು ಸರಹದ್ದು ಪ್ರವೇಶಿಸುವುದು ಸುಲಭ. ಮಾತ್ರವಲ್ಲ ಇಲ್ಲಿ ನದಿ ಅಷ್ಟೊಂದು ಆಳವಿಲ್ಲ. ಹಾಗಾಗಿ ನೀರಿನಲ್ಲಿ ನಡೆದುಕೊಂಡೇ ಗಡಿ ದಾಟಲು ಅವಕಾಶವಿದೆ. ಬಹುತೇಕ ಜನರು ಇಂತಹ ಸಾಧ್ಯತೆಯನ್ನು ಬಳಸಿರುವ ಬಗ್ಗೆ ಆರೋಪಗಳಿವೆ.
ತೀರ ಪ್ರದೇಶದಲ್ಲಿ ಕಟ್ಟೆಚ್ಚರ
ದ.ಕ. ಜಿಲ್ಲೆಯ ಗಡಿ ಭಾಗದ ನದಿ ಹಾಗೂ ಕಡಲ ತೀರದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಪಹರೆ ಏರ್ಪಡಿಸಲಾಗಿದೆ. ಈ ಭಾಗದಿಂದ ಗಡಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಬೆಟ್ಟಂಪಾಡಿ, ಉಚ್ಚಿಲ ಸಹಿತ ಬಹುತೇಕ ಭಾಗದಲ್ಲಿ ಪೊಲೀಸ್ ಕಾವಲು ಬಿಗಿಗೊಳಿಸಲಾಗಿದೆ. ಅಕ್ರಮ ನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.
- ಚೇತನ್, ಎಸ್‌ಪಿ-ಕರಾವಳಿ ಕಾವಲು ಪೊಲೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.