ಸ್ನೇಹಿತರ ಜತೆ ಪ್ರವಾಸ ತೆರಳಿ ಮರಳಿದ ಯುವಕ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Team Udayavani, May 9, 2022, 5:54 PM IST
ಸಾಂದರ್ಭಿಕ ಚಿತ್ರ.
ಉಪ್ಪಳ: ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿ ಮೇ 8ರಂದು ಮಧ್ಯರಾತ್ರಿ ಮನೆಗೆ ತಲುಪಿದ ಯುವಕನೋರ್ವ ಸೋಮವಾರ ಮುಂಜಾನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಉಪ್ಪಳ ಸಮೀಪದ ಮುಳಿಂಜ ಮಹಾನಗರ ನಿವಾಸಿ ಸುಧೀರ್ (38) ಮೃತಪಟ್ಟ ಯುವಕನಾಗಿದ್ದಾರೆ. ಇವರು ಕೈಕಂಬದಲ್ಲಿ ಅಲ್ಯುಮಿನಿಯಂ ಶೋರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಈ ಸಂಸ್ಥೆಯ ಇತರ ಸುಮಾರು 13 ಮಂದಿ ಕಾರ್ಮಿಕರ ಜೊತೆ ಶನಿವಾರ ಸಂಜೆ ಸುಧೀರ್ ವಯನಾಡಿಗೆ ಪ್ರವಾಸಕ್ಕೆ ತೆರಳಿದ್ದರು.
ಮೇ 8 ರಂದು ಮಧ್ಯರಾತ್ರಿ 1.30ರ ವೇಳೆ ಜೊತೆಯಲ್ಲಿದ್ದವರು ಮನೆಗೆ ಬಿಟ್ಟಿದ್ದರು. ಮಂಚದಲ್ಲಿ ನಿದ್ದೆ ಮಾಡಿದ್ದ ಸುಧೀರ್ ಸೋಮವಾರ ಬೆಳಗ್ಗೆ ಮಂಚದಿಂದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಮನೆಯವರು ಎಬ್ಬಿಸಿದರೂ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ತಿಳಿದು ಬಂತು.
ದಿಢೀರ್ ಸಾವಿನ ಬಗ್ಗೆ ಮನೆಯವರು ಶಂಕೆ ವ್ಯಕ್ತಪಡಿಸಿದ್ದು, ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಇದನ್ನೂ ಓದಿ:ಬಲ್ಲಾಳ್‌ಭಾಗ್ ಸರಣಿ ಅಪಘಾತ ಪ್ರಕರಣ: ಚಾಲಕನ ಪರೀಕ್ಷಾ ವರದಿ ನೆಗೆಟಿವ್: ಎನ್.ಶಶಿಕುಮಾರ್
ಸ್ಕೂಟರ್ ಅಪಘಾತ: ಗಾಯಾಳು ಮಹಿಳೆ ಸಾವು
ಕಾಸರಗೋಡು: ಸ್ಕೂಟರ್ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೂಡ್ಲು ವಿವೇಕಾನಂದನಗರ ಗುರುಕೃಪಾದ ಕೆ. ಪುಷ್ಪಲತಾ (42) ಸಾವಿಗೀಡಾದರು.
ಇವರು ತಲಪಾಡಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿದ್ದರು. ಮೇ 2ರಂದು ವಿವೇಕಾನಂದ ನಗರದಲ್ಲಿ ಅಪಘಾತ ಸಂಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.